Bengaluru Rains: ಬೆಂಗಳೂರಿನ ಹಲವೆಡೆ ಬಿರುಗಾಳಿ ಸಹಿತ ಮಳೆ; ಬನ್ನೇರುಘಟ್ಟ ಪಾರ್ಕ್​ನಲ್ಲಿ ಪ್ರವಾಸಿಗರ ಪರದಾಟ

| Updated By: ಗಣಪತಿ ಶರ್ಮ

Updated on: Jul 03, 2023 | 8:36 PM

ಕರ್ನಾಟಕ ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಭಾರಿ (Bengaluru Rains) ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ, ಜಿಗಣಿ, ಚಂದಾಪುರ, ಅತ್ತಿಬೆಲೆ ಸೇರಿ ಹಲವೆಡೆ ವರುಣಾರ್ಭಟ ಜೋರಾಗಿತ್ತು.

Bengaluru Rains: ಬೆಂಗಳೂರಿನ ಹಲವೆಡೆ ಬಿರುಗಾಳಿ ಸಹಿತ ಮಳೆ; ಬನ್ನೇರುಘಟ್ಟ ಪಾರ್ಕ್​ನಲ್ಲಿ ಪ್ರವಾಸಿಗರ ಪರದಾಟ
ಭಾರೀ ಮಳೆಯಯಿಂದ ಬೆಂಗಳೂರಿನ ಲಾಲ್​ಬಾಗ್ ರಸ್ತೆಯಲ್ಲಿ ಹರಿಯುತ್ತಿರುವ ನೀರು
Follow us on

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಭಾರಿ (Bengaluru Rains) ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ, ಜಿಗಣಿ, ಚಂದಾಪುರ, ಅತ್ತಿಬೆಲೆ ಸೇರಿ ಹಲವೆಡೆ ವರುಣಾರ್ಭಟ ಜೋರಾಗಿತ್ತು. ಭಾರಿ ಮಳೆಗೆ ಬನ್ನೇರುಘಟ್ಟ ಪಾರ್ಕ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬನ್ನೇರುಘಟ್ಟ ಪಾರ್ಕ್ ನೋಡಲು ಬಂದಿದ್ದ ಪ್ರವಾಸಿಗರು ಪರದಾಡುವಂತಾಯಿತು. ಪಾರ್ಕ್​​​ನ ಗೇಟ್, ಅಂಗಡಿ ಮುಂಗಟ್ಟುಗಳ ಬಳಿ ಜನ ಆಶ್ರಯ ಪಡೆದರು.

ಕಾರ್ಪೊರೇಷನ್ ವೃತ್ತ, ನಂಜಪ್ಪ ಸರ್ಕಲ್, ಗಿರಿನಗರ, ಆವಲಹಳ್ಳಿ, ಲಾಲ್​ಬಾಗ್ ರಸ್ತೆ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿಯೂ ಮಧ್ಯಾಹ್ನದಿಂದಲೇ ಭಾರೀ ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಶುಕ್ರವಾರದವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಈ ಮಧ್ಯೆ, ರಾಜ್ಯದ ಕರಾವಳಿ ನಗರ ಮಂಗಳೂರಿನಲ್ಲಿ ಸೋಮವಾರ ಸಂಜೆ ಸತತ 2 ಗಂಟೆ ಧಾರಾಕಾರ ಮಳೆಯಾಗಿದೆ. ಮಂಗಳೂರಿನ ಪಂಪ್​ವೆಲ್​​ ವೃತ್ತ ಹಾಗೂ ಪಂಪ್​ವೆಲ್ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದೆ.

ಇದನ್ನೂ ಓದಿ: IMD Latest Forecast: ಕರಾವಳಿ ಕರ್ನಾಟಕದಲ್ಲಿ ಈ ವಾರ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಚಾರ್ಮಾಡಿಘಾಟ್​​, ಕೊಟ್ಟಿಗೆಹಾರ, ಶೃಂಗೇರಿ, ಕಳಸ, ಎನ್​ಆರ್​​​ಪುರ ತಾಲೂಕಿನ ಹಲವೆಡೆ ವರ್ಷಧಾರೆಯಾಗಿದೆ. ಚಿಕ್ಕಮಗಳೂರು ನಗರ, ತರೀಕೆರೆ, ಕಡೂರಿನಲ್ಲಿ ತುಂತುರು ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ