ಪ್ರಜ್ವಲ್ ರೇವಣ್ಣಗೆ ಲೋಕಸಭೆ ಟಿಕೆಟ್ ಇಲ್ಲವಾ? ಊಹಾಪೋಹಗಳಿಗೆ ನಾನ್ಯಾಕೆ ಉತ್ತರ ಕೊಡಲಿ ಎಂದ ಪ್ರಜ್ವಲ್ ರೇವಣ್ಣ
Prajwal revanna: ಹಾಸನದಲ್ಲಿ ಸಂಸದ ಪ್ರಜ್ಚಲ್ ರೇವಣ್ಣ ಹೇಳಿಕೆ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಯಾರಿಗೂ ಟಿಕೇಟ್ ಇಲ್ಲ ಎಂಬ ಬಗ್ಗೆ ಹೆಚ್ಚ್ ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆನ್ನಲಾದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರಜ್ಚಲ್ ರೇವಣ್ಣ ಕೆಂಡಾಮಂಡಲವಾದರು.
ಹಾಸನದಲ್ಲಿ ಸಂಸದ ಪ್ರಜ್ಚಲ್ ರೇವಣ್ಣ ಹೇಳಿಕೆ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಯಾರಿಗೂ ಟಿಕೇಟ್ ಇಲ್ಲ ಎಂಬ ಬಗ್ಗೆ ಹೆಚ್ಚ್ ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆನ್ನಲಾದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರಜ್ಚಲ್ ರೇವಣ್ಣ ಕೆಂಡಾಮಂಡಲವಾದರು. ಇಂತಹ ಬೇಡದ ಪ್ರಶ್ನೆಯನ್ನ ನನಗೆ ಕೇಳಬೇಡಿ ನಾನು ಉತ್ತರ ಕೊಡಲ್ಲ. ಇಂತಹ ಪ್ರಶ್ನೆ ಗಳಿಗೆ ಉತ್ತರ ಕೊಟ್ಟು ನಾನು ಪ್ರಚಾರ ಪಡೆಯಬೇಕಿಲ್ಲ ಎಂದು ಗರಂ ಆದರು. ನಮ್ಮ ಪಕ್ಷದ ಯಾರಾದ್ರು ನಾಯಕರು ಪ್ರಜ್ವಲ್ ರೇವಣ್ಣಗೆ ಟಿಕೇಟ್ ಇಲ್ಲಾ ಅಂತಾ ಹೇಳಿದಾರಾ? ನಿಮ್ಮ ಊಹೆಯ ಪ್ರಶ್ನೆಗೆ ನಾನ್ಯಾಕೆ ಉತ್ತರ ಕೊಡಬೇಕು. ಮಾಧ್ಯಮದವರ ಪ್ರಶ್ನೆಗೆ ರೇವಣ್ಣ ಅವರು ಚರ್ಚೆ ಮಾಡಿ ತೀರ್ಮಾನ ಅಂದಿದಾರೆ ಅಷ್ಟೇ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಗೆ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ನಾನೆಂದೂ ಕ್ಷೇತ್ರ ಬಿಟ್ಟು ಹೋಗಿಲ್ಲ, ಯಾವಾಗಲು ಜನರ ಜೊತೆ ಇದ್ದೇನೆ. ಜಿಲ್ಲೆಯ ಎಲ್ಲಾ ಭಾಗದ ಜನರ ಸಮಸ್ಯೆ ಆಲಿಸಿ ಕೆಲಸ ಮಾಡಿದ್ದೇನೆ. ಈಗಾಗಲೆ ಪಂಚಾಯ್ತಿವಾರು ವಾರಕ್ಕೆ ನಾಲ್ಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಸಭೆ ಮಾಡುತ್ತಿದ್ದೇನೆ. ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಪ್ರಯತ್ನ ಮಾಡುತ್ತಿದ್ದೇನೆ. ಇದರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಇದೆ, ಒಳ್ಳೆಯ ಹೆಸರೂ ಬರ್ತಿದೆ. ಈಗ ಕಾಂಗ್ರೆಸ್ ಸರ್ಕಾರ ಇದೆ, ಬಿಜೆಪಿ ಹಾಗು ನಾವು ಸೋತಿದ್ದೇವೆ. ಲೋಕಸಭೆ ಚುನಾವಣೆಗೆ ಬಹುಶಃ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಆಗಬಹುದು ಎಂದ ಪ್ರಜ್ಚಲ್ ರೇವಣ್ಣ ಹೇಳಿದರು.