AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CDA commissioner: ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಯ ದರ್ಪದೆದುರು ಶಾಸಕ ಹೆಚ್ ಡಿ ತಮ್ಮಯ್ಯ ಕೂಡ ಥಂಡಾ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ವಿಡಿಯೋ ನೋಡಿದ್ದೇಯಾದಲ್ಲಿ ಮೊದಲು ತಮ್ಮಯ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 7:27 PM

Share

ಚಿಕ್ಕಮಗಳೂರು: ಇಂಥ ಒಂದ್ಹತ್ತು ಅಧಿಕಾರಿಗಳಿದ್ದರೆ ಸಾಕು, ಸರ್ಕಾರಕ್ಕೆ ಮಸಿ ಬಳಿಯಲು ಬೇರೆ ಯಾರೂ ಬೇಕಿಲ್ಲ. ವಿಷಯವೇನೆಂದರೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (Chikmagalur Development Authority) ನಗರದ ಒಂದು ಭಾಗದಲ್ಲಿ ಲೇಔಟ್ ಒಂದನ್ನು ಡೆವಲಪ್ ಮಾಡಿ ಸರ್ವಜನಿಕರಿಗೆ ನಿವೇಶನ (sites) ಹಂಚಿದೆ. ಆದರೆ 2 ವರ್ಷ ಕಳೆದರೂ ಪ್ರಾಧಿಕಾರ ಆ ಲೇಔಟ್ ವಿದ್ಯುತ್ ಸಂಪರ್ಕ (power supply) ಕಲ್ಪಿಸಿಲ್ಲ. ನಿವೇಶನ ಖರೀದಿಸಿದ ಜನ ಪ್ರತಿದಿನ ಪ್ರಾಧಿಕಾರದ ಕಚೇರಿಗೆ ಎಡತಾಕಿ ಚಪ್ಪಲಿ ಸವೆಸಿದರೂ ಅಧಿಕಾರಿಗಳು ನಿರ್ದಿಷ್ಟವಾಗಿ ಹೇಳುವುದಾದರೆ ಆಯುಕ್ತ ಕೃಷ್ಣಮೂರ್ತಿ (CDA commissioner Krishnamurthy) ಮನವಿಯನ್ನು ಕಿವಿಗೆ ಹಾಕಿಕೊಂಡಿಲ್ಲ. ಬೇಸತ್ತ ಜನ ಕೊನೆಗೆ ತಮ್ಮ ದೂರನ್ನು ಸ್ಥಳೀಯ ಶಾಸಕ ಹೆಚ್ ಡಿ ತಮ್ಮಯ್ಯ ಬಳಿ ಕೊಂಡೊಯ್ದಿದ್ದಾರೆ. ಶಾಸಕ ವಿಚಾರಿಸಲು ಕಚೇರಿಗೆ ಬಂದಾಗ, ಅವರ ಎದುರೇ ಕೃಷ್ಣಮೂರ್ತಿ ನಿವೇಶನದಾರರ ಮೇಲೆ ಆವೇಶಕ್ಕೊಳಗಾದವರಂತೆ ಕೂಗಾಡಿದ್ದಾರೆ. ಶಾಸಕ ಅವನನ್ನು ಗದರುವುದು ಬಿಟ್ಟು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ವಿಡಿಯೋ ನೋಡಿದ್ದೇಯಾದಲ್ಲಿ ಮೊದಲು ತಮ್ಮಯ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ