AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Setback for CT Ravi: ಚಿಕ್ಕಮಗಳೂರು ಬಿಜೆಪಿ ಶಾಸಕರ ಆಪ್ತರಾಗಿದ್ದ ಹೆಚ್ ಡಿ ತಮ್ಮಯ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

Setback for CT Ravi: ಚಿಕ್ಕಮಗಳೂರು ಬಿಜೆಪಿ ಶಾಸಕರ ಆಪ್ತರಾಗಿದ್ದ ಹೆಚ್ ಡಿ ತಮ್ಮಯ್ಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 16, 2023 | 4:01 PM

Share

ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಕ್ಕಮಗಳೂರು ಕ್ಷೇತ್ರದಿಂದ ಟಕೆಟ್ ಗಾಗಿ ಆಗ್ರಹಿಸಿದ್ದರಂತೆ. ಅದು ಸಿಗುವ ಲಕ್ಷಣ ಕಾಣದಿದ್ದರಿಂದ ಪಕ್ಷದಿಂದ ಹೊರನಡೆದಿದ್ದಾರೆ.

ಚಿಕ್ಕಮಗಳೂರು: ಸ್ಥಳೀಯ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರಿಗೆ (CT Ravi) ಚುನಾವಣೆ ಹತ್ತಿರಕ್ಕೆ ಬಂದಿರುವಾಗ ಆಘಾತವೊಂದು ಎದುರಾಗಿದೆ. ಅವರ ಅತ್ಯಂತ ಆಪ್ತರೆಂದು ಗುರುತಿಸಿಕೊಂಡಿದ್ದ ಮತ್ತು ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಹೆಚ್ ಡಿ ತಮ್ಮಯ್ಯ (HD Tammaiah) ಎನ್ನುವವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ (primary membership) ರಾಜೀನಾಮೆ ಸಲ್ಲಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಕ್ಕಮಗಳೂರು ಕ್ಷೇತ್ರದಿಂದ ಟಕೆಟ್ ಗಾಗಿ ಆಗ್ರಹಿಸಿದ್ದರಂತೆ. ಅದು ಸಿಗುವ ಲಕ್ಷಣ ಕಾಣದಿದ್ದರಿಂದ ಪಕ್ಷದಿಂದ ಹೊರನಡೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ