ಬಾಗಲಕೋಟೆ: ಬತ್ತಿದ ಕೃಷ್ಣಾ ನದಿ, ಗ್ರಾಮಕ್ಕೆ ಎಂಟ್ರಿಕೊಟ್ಟ 12 ಅಡಿ ಉದ್ದದ ಮೊಸಳೆ!
ಮಳೆ ಕೊರತೆಯಾಗಿ ಕೃಷ್ಣಾ ನದಿಯಲ್ಲಿ ನೀರು ಬತ್ತಿದ ಹಿನ್ನೆಲೆ ಬೃಹತ್ ಗಾತ್ರದ ಮೊಸಳೆಯೊಂದು ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮಕ್ಕೆ ಎಂಟ್ರಿಕೊಟ್ಟಿದೆ.
ಬಾಗಲಕೋಟೆ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ನದಿಗಳಲ್ಲಿ ನೀರು ಬತ್ತುತ್ತಿದೆ. ಪರಿಣಾಮ ಆಹಾರದ ಕೊರತೆಯಾಗಿ ನದಿಯಲ್ಲಿ ವಾಸವಿದ್ದ ಮೊಸಳೆಗಳು (Crocodile) ಗ್ರಾಮಕ್ಕೆ ಲಗ್ಗೆ ಇಡಲು ಆರಂಭಿಸಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಉಂಟು ಮಾಡುತ್ತಿದೆ. ನಿನ್ನೆಯಷ್ಟೇ ಕೊಂತಿಕಲ್ ಗ್ರಾಮಕ್ಕೆ ಬಂದಿದ್ದ ಸುಮಾರು 9 ಅಡಿ ಉದ್ದದ ಮೊಸಳೆಯನ್ನು ಜನರು ಕಟ್ಟಿಹಾಕಿದ್ದರು. ನಂತರ ಅರಣ್ಯಾಧಿಕಾರಿಗಳು ಆಲಮಟ್ಟಿ ಹಿನ್ನೀರಿಗೆ ಬಿಟ್ಟಿದ್ದರು. ಇದೀಗ, ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷಗೊಂಡಿದ್ದು, ಜನರು ಅದನ್ನು ಸೆರೆ ಹಿಡಿದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮೊಸಳೆಯನ್ನು ಆಲಮಟ್ಟಿ ಡ್ಯಾಮ್ಗೆ ಸ್ಥಳಾಂತರ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos