Leader of Opposition: ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರೇ ಅಂತ ಕೇಳಿದರೆ ಬಸನಗೌಡ ಯತ್ನಾಳ್​ಗೆ ಯಾಕೆ ಸಿಟ್ಟು?

Leader of Opposition: ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರೇ ಅಂತ ಕೇಳಿದರೆ ಬಸನಗೌಡ ಯತ್ನಾಳ್​ಗೆ ಯಾಕೆ ಸಿಟ್ಟು?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 5:01 PM

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಕರೆತಂದಿದ್ದಕ್ಕೆ ಪಕ್ಷದಲ್ಲಿ ಅಶಿಸ್ತು ಆರಂಭವಾಗಿದೆ ಅಂತ ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

ಬೆಂಗಳೂರು: ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ ಆಗುತ್ತದೆ, ಯಾರಾಗಲಿದ್ದಾರೆ ಅಂತ ಕೇಳಿದರೆ ಬಿಜೆಪಿ ನಾಯಕರಿಗೆ ಕೋಪ ಬರುತ್ತಿದೆ ಮಾರಾಯ್ರೇ. ಇಲ್ನೋಡಿ, ಬೇರೆ ಸಮಯದಲ್ಲಾದರೆ ಮಾಧ್ಯಮಗಳ ಮುಂದೆ ವೀರಾವೇಶದಿಂದ ಮಾತಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ (Basanagouda Patil Yatnal) ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಅದೇ ಪ್ರಶ್ನೆ ಕೇಳಿದಾಗ ಕಣ್ಣುಮುಚ್ಚಿಕೊಂಡು ಕತ್ತು ಮೇಲೆ ಮಾಡಿ ಉತ್ತರ ಕೊಡುತ್ತಾರೆ. ಬಸವರಾಜ್ ಬೊಮ್ಮಾಯಿ (Basavaraj ) ಅವರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಅಂತ ಪತ್ರಕರ್ತರೊಬ್ಬರು ಕೇಳಿದಾಗ ವಿಚಲಿತನಾಗಿ ಅಸಹನೆಯಿಂದ ಮಾತಾಡುವ ಯತ್ನಾಳ್ ನಮ್ಮ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಅನ್ನುತ್ತಾರೆ. ಅಲ್ಲಾ ಸ್ವಾಮಿ, ಬಿಜೆಪಿ ನಾಯಕರೇನೂ ಶಾಲಾ ಮಕ್ಕಳೇ? ಅವರ ನಡುವೆ ಮಾಧ್ಯಮದವರ ಮಾತಿಗೆ ಯಾಕೆ ಬೆಂಕಿ ಹೊತ್ತಿಕೊಳ್ಳುತ್ತೆ? ಕೆಎಸ್ ಈಶ್ವರಪ್ಪ (KS Eshwarappa) ಪ್ರಕರಣವನ್ನು ಅವರು ಹೇಳುತ್ತಾರೆ. ಈಶ್ವರಪ್ಪ ಹುಬ್ಬಳ್ಳಿ ಮತ್ತು ಬೆಂಗಳೂರಲ್ಲಿ ಆಡಿದ ಮಾತುಗಳ ಎರಡು ಪ್ರತ್ಯೇಕ ವಿಡಿಯೋಗಳನ್ನು ನಾವು ಒಟ್ಟಿಗೆ ತೋರಿಸಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಕರೆತಂದಿದ್ದಕ್ಕೆ ಪಕ್ಷದಲ್ಲಿ ಅಶಿಸ್ತು ಆರಂಭವಾಗಿದೆ ಅಂತ ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಈಶ್ವರಪ್ಪ ಮತ್ತು ಯತ್ನಾಳ್ ಮಾಧ್ಯಮದವರ ಮೇಲೆ ಗೂಬೆ ಕೂರಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ