ಮಂಗಳೂರು ಅಪಘಾತಕ್ಕೆ ಬಿಗ್ ಟ್ವಿಸ್ಟ್​​: ಜೋಡಿ ಕೊಲೆಯ ಮೊಬೈಲ್ ರಹಸ್ಯ ಬಯಲು

ಮಂಗಳೂರಿನಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದು ಇಬ್ಬರು ಯುವಕರ ದಾರುಣ ಸಾವು ಕೊಲೆ ಎಂದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದನ್ನು ಒಪ್ಪಿಕೊಂಡಿದ್ದಾನೆ. ಮೊಬೈಲ್ ವಿಚಾರ ಮತ್ತು ಗಾಂಜಾ ನಂಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಈ ಸಂಬಂಧ ತನಿಖೆ ನಡೆಸಿದ್ದಾರೆ.

ಮಂಗಳೂರು ಅಪಘಾತಕ್ಕೆ ಬಿಗ್ ಟ್ವಿಸ್ಟ್​​: ಜೋಡಿ ಕೊಲೆಯ ಮೊಬೈಲ್ ರಹಸ್ಯ ಬಯಲು
ಮೃತರು, ಬಂಧಿತ ಆರೋಪಿ
Edited By:

Updated on: Oct 21, 2026 | 7:52 PM

ಮುಖ್ಯಾಂಶಗಳು

  • ಪಿಕಪ್​ ವಾಹನದಿಂದ ಡಿಕ್ಕಿ ಹೊಡೆದು ಇಬ್ಬರ ಕೊಲೆ ಕೇಸ್​​ಗೆ ಟ್ವಿಸ್ಟ್​
  • ಕೊಣಾಜೆ ಪೊಲೀಸ್​​ರಿಂದ ಓರ್ವನ ಬಂಧನ
  • ತನಿಖೆ ವೇಳೆ ಕೊಲೆ ತಪ್ಪೊಪ್ಪಿಕೊಂಡ ಆರೋಪಿ

ಮಂಗಳೂರು, ಅಕ್ಟೋಬರ್​ 21: ಮಂಗಳೂರಿನಲ್ಲಿ ಇತ್ತೀಚೆಗೆ ಒಂದು ಭೀಕರ ಅಪಘಾತ ನಡೆದಿತ್ತು. ಪಿಕಪ್​ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದರು. ಆದರೆ ಇದು ಅಪಘಾತವಲ್ಲ, ಕೊಲೆ ಎನ್ನುವುದು ಬಯಲಾಗಿದೆ. ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಆರೋಪಿ 

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುರ್ನಾಡು ಎಂಬಲ್ಲಿ ಮೊನ್ನೆ ಸಂಜೆ ಪಿಕಪ್​ ವಾಹವ ಒಂದು ಸ್ಕೂಟರ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಲ್ಲಲಾಗಿತ್ತು. ಕಿನ್ಯ ಅರೆಬಿನಗರ ನಿವಾಸಿ ಮಹಮ್ಮದ್ ಅಫ್ರಾಜ್ (23) ಮತ್ತು ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ದಾರುಣ ಸಾವನ್ನಪ್ಪಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ಇಂದು ಆರೋಪಿ ಹಫೀಜ್​ನನ್ನು ಬಂಧಿಸಿದ್ದಾರೆ. ಆರೋಪಿ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.

ನಡೆದಿದ್ದೇನು? 

ಬದ್ರುದ್ಧೀನ್‌ ಎಂಬಾತನ ಮೊಬೈಲ್​​ ಅನ್ನು ಜುನೈದ್ ಮತ್ತು ಅಫ್ರಾಜ್​​ ತೆಗೆದುಕೊಂಡಿರುತ್ತಾರೆ. ಈ ಮೊಬೈಲ್​ನ್ನು ಹಫೀಜ್ ಕೇಳಿರುತ್ತಾನೆ.‌ ಈ ವಿಚಾರವಾಗಿ ಮಾತನಾಡಲು ರಂಜಡ್ಕ ಕ್ರಾಸ್​ನಲ್ಲಿರುವ ಫೀಲ್ಡ್​ಗೆ ಇಬ್ಬರು ಸ್ಕೂಟರ್​ನಲ್ಲಿ ಬಂದಿದ್ದಾರೆ. ಮೂವರು ಮಾತನಾಡಿರುತ್ತಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಪಿಕಪ್ ವಾಹನದಿಂದ ಡಿಕ್ಕಿ 

ಇನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಜುನೈದ್ ಮತ್ತು ಅಫ್ರಾಜ್, ಹಫೀಜ್​ಗೆ ಹೆಲ್ಮೆಟ್​ಯಿಂದ ಹೊಡೆಯುತ್ತಾರೆ. ಬಳಿಕ ಜುನೈದ್ ಮತ್ತು ಅಫ್ರಾಜ್ ಅಲ್ಲಿಂದ ಸ್ಕೂಟರ್​ನಲ್ಲಿ ಪರಾರಿ ಆಗುತ್ತಾರೆ. ಫೀಲ್ಡ್​ ಸಮೀಪದಲ್ಲೇ ಇದ್ದ ಮನೆಗೆ ಓಡಿ ಹೋದ ಹಫೀಜ್ ತನ್ನ ಪಿಕಪ್ ವಾಹನದಲ್ಲಿ ಸ್ಕೂಟರ್​​ನ್ನು ಹಿಂಬಾಲಿಸಿಕೊಂಡು ಹೋಗಿ ಡಿಕ್ಕಿ ಹೊಡೆಯುತ್ತಾನೆ. ಸ್ಥಳದಲ್ಲೇ ಜುನೈದ್ ಮತ್ತು ಅಫ್ರಾಜ್ ಸಾವನ್ನಪ್ಪುತ್ತಾರೆ. ಅಲ್ಲಿಂದ ಹಫೀಜ್ ತನ್ನ ಪಿಕಪ್ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗುತ್ತಾನೆ.

ಏನಿದು ಮೊಬೈಲ್ ರಹಸ್ಯ?

ಇನ್ನು ಮೊಬೈಲ್​ನಲ್ಲಿ ಇರುವ ರಹಸ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌. ಹಫೀಜ್​ಗೆ ಗಾಂಜಾ ನಂಟಿತ್ತು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಆತ ಗಾಂಜಾ ವ್ಯವಹಾರ ಮಾಡಿಕೊಂಡಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಫೀಜ್​ನನ್ನು ಡ್ರಗ್ಸ್ ಟೆಸ್ಟ್​ಗೆ ಒಳಪಡಿಸಿದ್ದಾರೆ. ಗಾಂಜಾ ಡೀಲ್ ಬಗ್ಗೆ ಸಾಕ್ಷಿ ಮೊಬೈಲ್​ನಲ್ಲಿ ಇತ್ತು ಎನ್ನುವ ಮಾಹಿತಿ ಕೂಡ ಸಿಕ್ಕಿದೆ‌.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಾಯರ್ ಸಾವು ಬೆನ್ನಲ್ಲೇ ಎಚ್ಚೆತ್ತ ಪೊಲೀಸರು: ಅಕ್ರಮ ಶಸ್ತ್ರಾಸ್ತ್ರ ಜಾಲಗಳ ಕುರಿತು ತೀವ್ರ ಕಾರ್ಯಾಚರಣೆ!

ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಬದ್ರುದ್ದೀನ್ ಯಾರು, ಆತನ ಮೊಬೈಲ್​​ ಈ ಯುವಕರ ಕೈಸೇರಿದ್ದು ಏಕೆ, ಆ ಮೊಬೈಲ್ ಹಫೀಜ್​ಗೆ ಏಕೆ ಬೇಕಿತ್ತು ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ತನಿಖೆಯಿಂದ ಅಸಲಿ ಕಹಾನಿ ಹೊರಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us