ನಾಳೆಯಿಂದ ಮಂಗಳೂರು – ಗೋವಾ ವಂದೇ ಭಾರತ್‌ ರೈಲು: ಪ್ರಾಯೋಗಿಕ ಸಂಚಾರ ಯಶಸ್ವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಮಂಗಳೂರು‌ ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಮಂಗಳೂರು ಮಡಗಾಂವ್ ರೈಲು 320 ಕಿಮೀ ಪ್ರಾಯೋಗ ಸಂಚಾರ ನಡೆಸಿದ್ದು, ಯಶಸ್ವಿಯಾಗಿದೆ.

ನಾಳೆಯಿಂದ ಮಂಗಳೂರು - ಗೋವಾ ವಂದೇ ಭಾರತ್‌ ರೈಲು: ಪ್ರಾಯೋಗಿಕ ಸಂಚಾರ ಯಶಸ್ವಿ
ವಂದೇ ಭಾರತ್‌ ರೈಲು
Edited By:

Updated on: Dec 29, 2023 | 6:59 AM

ಮಂಗಳೂರು, ಉಡುಪಿ, ಡಿಸೆಂಬರ್ 29: ಮಂಗಳೂರು ಹಾಗೂ ಗೋವಾದ ಮಡಗಾಂವ್ (Mangalore Goa Vande Bharat) ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express Train) ರೈಲಿಗೆ ಡಿಸೆಂಬರ್ 30ರಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಭಾರತ್ ಎಕ್ಸ್​ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿದೆ. ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಮಂಗಳೂರು‌ ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

ಮಂಗಳೂರು ಮಡಗಾಂವ್ ರೈಲು 320 ಕಿಮೀ ಓಡಾಟ ಮಾಡಿದ್ದು, ಯಾವುದೇ ಸಮಸ್ಯೆಗಳು ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಡಗಾಂವ್ ಸಂಚಾರದ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ನಿಲುಗಡೆಗಳು ಇರಲಿವೆ.

ಇದನ್ನೂ ಓದಿ: ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ಟ್ರೈನ್; ಬೆಂಗಳೂರಿಂದ ತಮಿಳುನಾಡಿನ ಕೊಯಮತ್ತೂರಿಗೆ ಸಾಗಲಿದೆ ಎಕ್ಸ್​ಪ್ರೆಸ್ ರೈಲು

ದೆಹಲಿಯಿಂದ ಕತ್ರಾ, ದೆಹಲಿಯಿಂದ ಲಕ್ನೋ ಮೂಲಕ ಅಯೋಧ್ಯೆ, ದೆಹಲಿಯಿಂದ ಚಂಡೀಗಢ, ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್​ಪ್ರೆಸ್​ಗಳಿಗೂ ಡಿಸೆಂಬರ್ 30ರಂದು ಚಾಲನೆ ದೊರೆಯಲಿದೆ. ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಹ ಇತ್ತೀಚೆಗೆ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us