ಬಂಟ್ವಾಳದ ಬಿ.ಸಿ. ರೋಡ್​​ಬಳಿ ಭೀಕರ ಅಪಘಾತ: 40 ಅಡಿ ಎತ್ತರದ ಫ್ಲೈಓವರ್​ ಮೇಲಿಂದ ಬಿದ್ದರೂ ಬದುಕುಳಿದ ಬೈಕ್​​ ಸವಾರ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ ಫ್ಲೈಓವರ್ ಮೇಲೆ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ, 40 ಅಡಿ ಎತ್ತರದಿಂದ ಸರ್ವೀಸ್ ರಸ್ತೆಗೆ ಬಿದ್ದ ಬೈಕ್ ಸವಾರ ಪವಾಡಸದೃಶವಾಗಿ ಪಾರಾಗಿದ್ದಾರೆ. ಫ್ಲೈಓವರ್​​ನಿಂದ ಬೈಕ್​​ ಸವಾರ ಸರ್ವಿಸ್​​ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತ ರೈಡಿಂಗ್ ಗೇರ್ ಧರಿಸಿದ್ದ ಹಿನ್ನೆಲೆ ಅಪಘಾತದ ವೇಳೆ ಹೆಚ್ಚಿನ ಗಾಯ ಆಗಿಲ್ಲ ಎನ್ನಲಾಗಿದೆ.

ಬಂಟ್ವಾಳದ ಬಿ.ಸಿ. ರೋಡ್​​ಬಳಿ ಭೀಕರ ಅಪಘಾತ: 40 ಅಡಿ ಎತ್ತರದ ಫ್ಲೈಓವರ್​ ಮೇಲಿಂದ ಬಿದ್ದರೂ ಬದುಕುಳಿದ ಬೈಕ್​​ ಸವಾರ!
40 ಅಡಿ ಎತ್ತರದ ಫ್ಲೈಓವರ್​ ಮೇಲಿಂದ ಬಿದ್ದರೂ ಬದುಕುಳಿದ ಬೈಕ್​​ ಸವಾರ!
Edited By:

Updated on: Nov 11, 2026 | 3:09 PM

ಮಂಗಳೂರು, ನವೆಂಬರ್​ 11: ಫ್ಲೈಓವರ್​​ನಿಂದ 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಬೈಕ್ ಸವಾರನೋರ್ವ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್​​ನಲ್ಲಿ ನಡೆದಿದೆ. ಫ್ಲೈಓವರ್‌ನ ಮಧ್ಯಭಾಗದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್​​ ಸವಾರ ಆರ್ವಿನ್​​ ಅತ್ತಾವರ ಎಂಬಾತ ಹಾರಿ ಫ್ಲೈಓವರ್‌ನಿಂದ ನೇರವಾಗಿ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆ ಕ್ಷಣದಲ್ಲಿ ಸರ್ವೀಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಇನ್ನು ಆರ್ವಿನ್ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಬರಲು ಬುಲೆಟ್ ಬೈಕ್‌ನಲ್ಲಿ ಹಾಸನಕ್ಕೆ ತೆರಳಿ ಹಿಂದಿರುಗುತ್ತಿದ್ದ. ಆತ ಮತ್ತು ಸ್ನೇಹಿತೆ ಇಬ್ಬರೂ ಪ್ರತ್ಯೇಕ ಬೈಕ್‌ಗಳಲ್ಲಿ ಬಂಟ್ವಾಳದ ಮೂಲಕ ಸಾಗುತ್ತಿದ್ದ ವೇಳೆ ಬಿ.ಸಿ.ರೋಡ್ ಫ್ಲೈಓವರ್‌ನಲ್ಲಿ ಅಪಘಾತ ಸಂಭವಿಸಿದೆ. ಆರ್ವಿನ್​​ ರೈಡಿಂಗ್ ಗೇರ್ ಧರಿಸಿದ್ದ ಹಿನ್ನೆಲೆ ಅಪಘಾತದ ವೇಳೆ ಹೆಚ್ಚಿನ ಗಾಯ ಆಗಿಲ್ಲ ಎನ್ನಲಾಗಿದೆ. ಸುಮಾರು 40 ಅಡಿ ಎತ್ತರದಿಂದ ಬಿದ್ದಿದ್ದರೂ ಬೈಕ್​​ ಸವಾರ ಬದುಕಿರೋದು ನಿಜಕ್ಕೂ ಪವಾಡವೇ ಸರಿ ಎಂಬ ಮಾತುಗಳು ಕೇಳಿಬಂದಿವೆ.

Loading...

ಇದನ್ನೂ ಓದಿ: ಸೌಜನ್ಯ ಕೇಸ್​​: ಮಹೇಶ್ ಶೆಟ್ಟಿ ತಿಮರೋಡಿ, ವಿಟ್ಠಲ್ ಗೌಡ ವಿರುದ್ದ ಎಸ್​​ಐಟಿಗೆ ದೂರು

ಬೆಚ್ಚಿ ಬೀಳಿಸುವಂತಿದೆ ಸಿಸಿ ಕ್ಯಾಮರಾ ದೃಶ್ಯಾವಳಿ

ಇನ್ನು ಫ್ಲೈಓವರ್​​ನಿಂದ ಬೈಕ್​​ ಸವಾರ ಆರ್ವಿನ್ ಹಾರಿ ಸುಮಾರು 40 ಅಡಿ ಕೆಳಗಿರುವ ಸರ್ವಿಸ್​​ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನ ನಿಬಿಡ ರಸ್ತೆಯಲ್ಲಿ ಆಕಾಶದಿಂದ ಉದುರಿದಂತೆ ಏಕಾಏಕಿ ಬಿದ್ದ ಬೈಕ್​​ ಸವಾರನನ್ನು ಕಂಡು ರಸ್ತೆಯ ಅಕ್ಕಪಕ್ಕದಲ್ಲಿದ್ದವರು ಅರೆ ಕ್ಷಣ ಕಂಗಾಲಾಗಿದ್ದಾರೆ. ಈತ ಮೇಲ್ಸೇತುವೆಯಿಂದ ಬಿದ್ದವ ಎಂಬುದು ಅರಿವಾಗುತ್ತಿದ್ದಂತೆ ಆತನ ರಕ್ಷಣೆಗೆ ಮುಂದಾಗಿದ್ದು, ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us