ಅ.19 ರಿಂದ ಮಂಗಳೂರಿನಿಂದ ಹೈದರಾಬಾದ್​ಗೆ ಹೊಸ ಇಂಡಿಗೋ ವಿಮಾನ ಹಾರಾಟ

|

Updated on: Oct 13, 2023 | 8:36 AM

ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ಅಕ್ಟೋಬರ್ 19 ರಿಂದ ಮಂಗಳೂರಿನಿಂದ ಹೈದರಾಬಾದ್‌ಗೆ ಮೂರನೇ ನೇರ ವಿಮಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಮೂರನೇ ನೇರ ವಿಮಾನವು ಮಧ್ಯಾಹ್ನ 2:15 ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 2:35 ಕ್ಕೆ ಹೈದರಾಬಾದ್​ಗೆ ತೆರಳಲಿದೆ.

ಅ.19 ರಿಂದ ಮಂಗಳೂರಿನಿಂದ ಹೈದರಾಬಾದ್​ಗೆ ಹೊಸ ಇಂಡಿಗೋ ವಿಮಾನ ಹಾರಾಟ
ಅಕ್ಟೋಬರ್ 19 ರಿಂದ ಮಂಗಳೂರಿನಿಂದ ಹೈದರಾಬಾದ್​ಗೆ ಹೊಸ ಇಂಡಿಗೋ ವಿಮಾನ ಹಾರಾಟ
Follow us on

ಮಂಗಳೂರು, ಅ.13: ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಅಕ್ಟೋಬರ್ 19 ರಿಂದ ಮಂಗಳೂರಿನಿಂದ ಹೈದರಾಬಾದ್‌ಗೆ (Mangaluru-Hyderabad) ಮೂರನೇ ನೇರ ವಿಮಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ತಮಿಳುನಾಡಿನ ಸೇಲಂ ಮತ್ತು ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಮೂರು ಹೊಸ ನೇರ ಮಾರ್ಗಗಳನ್ನು ಪರಿಚಯಿಸಿದ ನಂತರ ಇದೀಗ ಮಂಗಳೂರಿನಿಂದ ಹೈದರಾಬಾದ್​ಗೆ ಮೂರನೇ ಹೊಸ ವಿಮಾನ ಸೇವೆ ನೀಡಲು ಮುಂದಾಗಿದೆ.

ಅಕ್ಟೋಬರ್ 19 ರಿಂದ ಇಂಡಿಗೋ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್​ಗೆ ತನ್ನ ವಿಮಾನ ವೇಳಾಪಟ್ಟಿಯನ್ನು ಹೆಚ್ಚಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. “ಹೈದರಾಬಾದ್​ಗೆ 6 ಇ 7536 ಮೂರನೇ ದೈನಂದಿನ ವಿಮಾನ ಕಾರ್ಯಾಚರಣೆ ನಡೆಸಲಿದೆ” ಎಂದು ಅದು ಹೇಳಿದೆ. ಈ ಮೂರನೇ ನೇರ ವಿಮಾನವು ಮಧ್ಯಾಹ್ನ 2:15 ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 2:35 ಕ್ಕೆ ಹೈದರಾಬಾದ್​ಗೆ ತೆರಳಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: Indigo Fuel Charge: ಅಗ್ಗದ ವಿಮಾನ ಪ್ರಯಾಣ ಸೇವೆ ನೀಡುವ ಇಂಡಿಗೋದಲ್ಲಿ ಟಿಕೆಟ್ ಬೆಲೆ ಇನ್ನು ದುಬಾರಿ; ಇಲ್ಲಿದೆ ನೂತನ ದರಗಳು

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7.40ಕ್ಕೆ ಬಂದು 20 ನಿಮಿಷ ತಡವಾಗಿ ಹೈದರಾಬಾದ್​ಗೆ ಹೊರಟ ಎಟಿಆರ್ ವಿಮಾನ 6ಇ 7549 ಹಾಗೂ ರಾತ್ರಿ 10.15ಕ್ಕೆ ಬಂದು ರಾತ್ರಿ 10.35ಕ್ಕೆ ಹೊರಟ 6ಇ 7103 ವಿಮಾನಗಳು ಹೆಚ್ಚುವರಿಯಾಗಿವೆ. ಈ ಹೆಚ್ಚಳವು ಅಕ್ಟೋಬರ್ 28 ರವರೆಗೆ ಇರುತ್ತದೆ.

ಇದು ಪ್ರಸ್ತುತ ಬೇಸಿಗೆ ವೇಳಾಪಟ್ಟಿಯ ಅಂತ್ಯವನ್ನು ಸೂಚಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂಡಿಗೋ ಪ್ರಸ್ತುತ ಮಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್​ಗೆ ತನ್ನ 78 ಆಸನಗಳ ಎಟಿಆರ್ ವಿಮಾನಗಳ ಸೇವೆಯನ್ನು ನೀಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 am, Fri, 13 October 23