ಇಂಡಿಗೋ ವಿಮಾನದಲ್ಲಿ ಉಸಿರಾಟ ಸಮಸ್ಯೆ ಎದುರಿಸಿದ ಮಗುವಿನ ಜೀವ ಉಳಿಸಿದ ವೈದ್ಯರು
ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಮಗುವೊಂದು ಇಂಡಿಗೋ ವಿಮಾನದಲ್ಲಿ ಉಸಿರಾಟದ ಸಮಸ್ಯೆ ಎದುರಿಸಿತ್ತು. ಅಲ್ಲಿದ್ದ ಇಬ್ಬರು ವೈದ್ಯರು ಮಗುವಿನ ಜೀವ ಉಳಿಸಿದ್ದಾರೆ. ಐಎಎಸ್ ಅಧಿಕಾರಿ ಡಾ ನಿತಿನ್ ಕುಲಕರ್ಣಿ, ತರಬೇತಿಯಿಂದ ವೈದ್ಯರಾಗಿದ್ದಾರೆ ಮತ್ತು ರಾಂಚಿ ಸದರ್ ಆಸ್ಪತ್ರೆಯ ವೈದ್ಯರು ತುರ್ತು ವೈದ್ಯಕೀಯ ಸಹಾಯವಾಗಿ ಔಷಧಿ ಹಾಗೂ ಆಮ್ಲಜನಕವನ್ನು ಒದಗಿಸಿದರು. ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆದ ನಂತರ, ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಯಲ್ಲಿ ತೆಗೆದುಕೊಂಡಿತು ಮತ್ತು ಆಮ್ಲಜನಕದ ಬೆಂಬಲವನ್ನು ನೀಡಿತು. ಮಗುವಿನ ಹೃದಯದ ಕಾಯಿಲೆಗೆ ಚಿಕಿತ್ಸೆ ನೀಡಲು ಪೋಷಕರು ಮಗುವನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುತ್ತಿದ್ದರು.
ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಮಗುವೊಂದು ಇಂಡಿಗೋ ವಿಮಾನದಲ್ಲಿ ಉಸಿರಾಟದ ಸಮಸ್ಯೆ ಎದುರಿಸಿತ್ತು. ಅಲ್ಲಿದ್ದ ಇಬ್ಬರು ವೈದ್ಯರು ಮಗುವಿನ ಜೀವ ಉಳಿಸಿದ್ದಾರೆ. ಐಎಎಸ್ ಅಧಿಕಾರಿ ಡಾ ನಿತಿನ್ ಕುಲಕರ್ಣಿ, ತರಬೇತಿಯಿಂದ ವೈದ್ಯರಾಗಿದ್ದಾರೆ ಮತ್ತು ರಾಂಚಿ ಸದರ್ ಆಸ್ಪತ್ರೆಯ ವೈದ್ಯರು ತುರ್ತು ವೈದ್ಯಕೀಯ ಸಹಾಯವಾಗಿ ಔಷಧಿ ಹಾಗೂ ಆಮ್ಲಜನಕವನ್ನು ಒದಗಿಸಿದರು. ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆದ ಬಳಿಕ, ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಯಲ್ಲಿ ತೆಗೆದುಕೊಂಡಿತು ಮತ್ತು ಆಮ್ಲಜನಕದ ಬೆಂಬಲವನ್ನು ನೀಡಿತು. ಮಗುವಿನ ಹೃದಯದ ಕಾಯಿಲೆಗೆ ಚಿಕಿತ್ಸೆ ನೀಡಲು ಪೋಷಕರು ಮಗುವನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುತ್ತಿದ್ದರು.
ವಿಮಾನದಲ್ಲಿ ಮಗು ಉಸಿರಾಟದ ಸಮಸ್ಯೆ ಎದುರಿಸಿದಾಗ ವಿಮಾನ ಸಿಬ್ಬಂದಿಯು ತಕ್ಷಣವೇ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದರೆ ತಕ್ಷಣ ನೆರವಿಗೆ ಬರುವಂತೆ ಕೇಳಿಕೊಂಡರು. ಕುಲಕರ್ಣಿ, ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ ಮೊಝಮ್ಮಿಲ್ ಫೆರೋಜ್ ಮಗುವನ್ನು ಉಳಿಸಲು ಮುಂದೆ ಬಂದರು.
ಮಗುವಿನ ಉಸಿರುಗಟ್ಟುತ್ತಿದೆ ಎಂದು ತಾಯಿ ಅಳುತ್ತಿದ್ದರು, ಬಳಿಕ ಮಾಸ್ಕ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಯಿತು. ನಾವು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಮಗುವಿಗೆ ಜನ್ಮಜಾತ ಹೃದ್ರೋಗ ಇದೆ. ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ (ಪಿಡಿಎ) ನಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಏಮ್ಸ್‌ಗೆ ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: Akasa Airlines: ವಾರಾಣಸಿಯಿಂದ ಮುಂಬೈಗೆ ತೆರಳಬೇಕಿದ್ದ ಆಕಾಶ ವಿಮಾನ 5 ಗಂಟೆ ವಿಳಂಬ
ಡ್ರಗ್ಸ್ ಕಿಟ್‌ನಿಂದ ಥಿಯೋಫಿಲಿನ್ ಚುಚ್ಚುಮದ್ದನ್ನು ನೀಡಲಾಯಿತು ಎಂದು ಅವರು ಹೇಳಿದರು. ಪೋಷಕರು ಡೆಕ್ಸೋನಾ ಚುಚ್ಚುಮದ್ದನ್ನು ಒಯ್ಯುತ್ತಿದ್ದರು, ಇದು ತುಂಬಾ ಸಹಾಯಕವಾಗಿದೆ ಎಂದು ಅವರು ಹೇಳಿದರು. ಮೊದಲ 15-20 ನಿಮಿಷಗಳು ಬಹಳ ನಿರ್ಣಾಯಕ ಮತ್ತು ಒತ್ತಡದಿಂದ ಕೂಡಿತ್ತು, ಬಳಿಕ ಮಗು ಸಹಜ ಸ್ಥಿತಿಗೆ ಮರಳಿತು. ಬೆಳಗ್ಗೆ 9.25ಕ್ಕೆ ವಿಮಾನ ಲ್ಯಾಂಡ್ ಆಗಿದ್ದು, ವೈದ್ಯ ತಂಡ ಧಾವಿಸಿ ಮಗುವಿಗೆ ಆಮ್ಲಜನಕದ ಬೆಂಬಲವನ್ನು ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ