
ಮಂಗಳೂರು, (ಡಿಸೆಂಬರ್ 15): ದುಬೈನಲ್ಲಿ (Dubai) ಕುಳಿತು ಮಂಗಳೂರಿನಲ್ಲಿ ಕೋಮು ಭಾವನೆ ಕೆರಳಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಡುತ್ತಿದ್ದ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಮೂಲದ 27 ವರ್ಷದ ಅಬ್ದುಲ್ ಖಾದರ್ ನೇಹಾದ್ ಬಂಧಿತ ಆರೋಪಿ. ಈತ ಸೌದಿ ಆರೇಬಿಯಾದಲ್ಲಿ ಕುಳಿತು ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅನ್ಯ ಧರ್ಮದವರ ಬಗ್ಗೆ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ವಿಚಾರಗಳನ್ನು ಪೋಸ್ಟ್ ಮಾಡಿ ಕೋಮು ಭಾವನೆಯನ್ನು ಕೆರಳಿಸುತ್ತಿದ್ದ.
ಆರೋಪಿ ಅಬ್ದುಲ್ ಖಾದರ್ sdpi_2025 ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ನಿಭಾಯಿಸುತ್ತಿದ್ದು, ಕಳೆದ ಆಕ್ಟೋಬರ್ 11ರಂದು ಇದೇ ಖಾತೆಯ ಮೂಲಕ ಅನ್ಯಧರ್ಮಗಳ ಬಗ್ಗೆ ತೀವ್ರ ಆಕ್ಷೇಪಾರ್ಹ ಹಾಗೂ ಅವಮಾನಕಾರಿಯಾಗಿ ಪೋಸ್ಟೊಂದನ್ನು ಪೋಸ್ಟ್ ಮಾಡಿದ್ದ. ಸಮಾಜದ ಶಾಂತಿ ಕದಡುವ ಉದ್ದೇಶದಿಂದಲೇ ಈ ರೀತಿ ಪೋಸ್ಟ್ ಹಂಚಿಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾ ಮಂಗಳೂರಿನ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅಬ್ದುಲ್ ಖಾದರ್ ಪ್ರಚೋದನಕಾರಿ ಪೋಸ್ಟ್ ಹಾಕಿರುವುದು ದೃಢಪಟ್ಟಿದೆ.
ಹೀಗಾಗಿ ವಿದೇಶದಲ್ಲಿ ಕುಳಿತು ಇಲ್ಲಿ ಕೋಮು ಗಲಭೆಗೆ ಪ್ರೇರಣೆ ನೀಡುತ್ತಿದ್ದ ಅಬ್ದುಲ್ ಖಾದರ್ ವಿರುದ್ಧ ಮಂಗಳೂರು ಪೊಲೀಸರು ತಕ್ಷಣವೇ ಲುಕೌಟ್ ನೋಟೀಸ್ ಜಾರಿ ಮಾಡಿದ್ದು, ಆತನ ಚಲನವಲಗಳ ಮೇಲೆ ಅಂದರೆ ಎಲ್ಲಿ ಹೋಗುತ್ತಾನೆ? ಏನ್ ಮಾಡುತ್ತಾನೆ ಎನ್ನುವ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದರು. ಇನ್ನು ಆತನ ಭಾರತಕ್ಕೆ ಬರುವುದನ್ನು ಕಾಯುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆಯೇ ಬಂಧಿಸಬೇಕೆಂದು ಎಲ್ಲಾ ಪ್ಕ್ಯಾನ್ ಮಾಡಿಕೊಂಡಿದ್ದರು.
ನಂತರ ಡಿಸೆಂಬರ್ 14ರಂದು ಅಬ್ದುಲ್ ಖಾದರ್ ಸೌದಿ ಅರೇಬಿಯಾದಿಂದ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಮಂಗಳೂರು ಹಾಗೂ ಕೇರಳ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅಲರ್ಟ್ ಆಗಿದ್ದರು. ಅಬ್ದುಲ್ ಖಾದರ್ ಮಂಗಳೂರು ಬದಲಿಗೆ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪೊಲೀಸ್ ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Published On - 4:14 pm, Mon, 15 December 25