ಮಂಗಳೂರಿನಲ್ಲಿ ಪಂಚಾಯತ್ ಸದಸ್ಯನ ಭೀಕರ ಕೊಲೆ

ಮಂಗಳೂರು: ನಗರದ ಹೊರವಲಯ ಅಡ್ಯಾರ್ ಪದವು ಎಂಬಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕುಬ್ ಎಂಬಾತನ ಭೀಕರ ಹತ್ಯೆಯಾಗಿದೆ. ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಯಾಕುಬ್ ಅಡ್ಯಾರ್ ಪದವುನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಾಗಿದ್ದು,ಸ್ಥ ಳೀಯ ನಿವಾಸಿಯಾಗಿದ್ದ ಶಾಕೀರ್ ಎಂಬಾತನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ ಕೊನೆ ಕೊನೆಗೆ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಶಾಕೀರ್ ಮೊದಲಿಗೆ ಯಾಕೂಬ್ ಮೇಲೆ ಕೈನಿಂದ ಹಲ್ಲೆ ಮಾಡಿದ್ದಾನೆ. ತದನಂತರ ಯಾಕೂಬ್ ನನ್ನು ನೆಲಕ್ಕೆ ದೂಡಿ, ಎದೆಗೆ […]

ಮಂಗಳೂರಿನಲ್ಲಿ ಪಂಚಾಯತ್ ಸದಸ್ಯನ ಭೀಕರ ಕೊಲೆ
Edited By:

Updated on: Jul 11, 2020 | 6:38 PM

ಮಂಗಳೂರು: ನಗರದ ಹೊರವಲಯ ಅಡ್ಯಾರ್ ಪದವು ಎಂಬಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕುಬ್ ಎಂಬಾತನ ಭೀಕರ ಹತ್ಯೆಯಾಗಿದೆ. ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಯಾಕುಬ್ ಅಡ್ಯಾರ್ ಪದವುನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಾಗಿದ್ದು,ಸ್ಥ ಳೀಯ ನಿವಾಸಿಯಾಗಿದ್ದ ಶಾಕೀರ್ ಎಂಬಾತನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ ಕೊನೆ ಕೊನೆಗೆ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಶಾಕೀರ್ ಮೊದಲಿಗೆ ಯಾಕೂಬ್ ಮೇಲೆ ಕೈನಿಂದ ಹಲ್ಲೆ ಮಾಡಿದ್ದಾನೆ. ತದನಂತರ ಯಾಕೂಬ್ ನನ್ನು ನೆಲಕ್ಕೆ ದೂಡಿ, ಎದೆಗೆ ಬಲವಾಗಿ ಒದ್ದ ಪರಿಣಾಮ ಯಾಕೂಬ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿರ್ದೀಷ್ಟ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದರಲ್ಲಿ ಪೋಲೀಸರು ಕಾರ್ಯನಿರತರಾಗಿದ್ದಾರೆ.

Published On - 5:10 pm, Sat, 11 July 20