ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

| Updated By: ಗಣಪತಿ ಶರ್ಮ

Updated on: Feb 26, 2024 | 9:54 AM

Mangaluru Student Missing Case: ಮಂಗಳೂರಿನ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಆಧಾರದಲ್ಲಿ ಬೆಂಗಳೂರಿಗೆ ಹೊರಟಿರುವ ಉಳ್ಳಾಲ ಪೋಲೀಸರು ಇನ್ನೆರಡು ದಿನಗಳ ಒಳಗಾಗಿ ಪ್ರಕರಣದ ರಹಸ್ಯಬೇದಿಸುವ ನಿರೀಕ್ಷೆ ಇದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ
ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ
Follow us on

ಮಂಗಳೂರು, ಫೆಬ್ರವರಿ 26: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ (Missing Case) ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಜರಂಗದಳದ (Bajrang Dal) ದಾಳಿಗೆ ಹೆದರಿ ವಿದ್ಯಾರ್ಥಿನಿ ದಿಢೀರ್ ನಾಪತ್ತೆಯಾದರೇ ಎಂಬ ಅನುಮಾನ ಇದೀಗ ಕಾಡತೊಡಗಿದೆ. ಶಾರೂಖ್ ಜೊತೆ ಸಂಪರ್ಕದಲ್ಲಿರುವ ವಿಷಯ ಬಹಿರಂಗವಾಯಿತು ಎಂಬ ಕಾರಣಕ್ಕೆ ಫೆಬ್ರವರಿ 17ರ ಬೆಳಿಗ್ಗೆಯೇ ವಿದ್ಯಾರ್ಥಿನಿ ಪರಾರಿಯಾಗಿರಬಹುದು ಎಂಬ ಕುರಿತು ಪೊಲೀಸರು (Mangaluru Police) ಕಲೆಹಾಕಿರುವ ಮಾಹಿತಿಯಿಂದ ತಿಳಿದುಬಂದಿದೆ.

ಶಾರೂಖ್​ಗೂ ರೂಮ್ ಕಡೆ ಬಾರದಂತೆ ತಿಳಿಸಿ ಚೈತ್ರಾ ಪರಾರಿಯಾಗಿದ್ದರು. 2017ರಿಂದಲೇ ಶಾರೂಖ್ ಜೊತೆ ಚೈತ್ರಾಗೆ ನಂಟು ಇತ್ತು ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿರುವ ಶಂಕೆ

ದಿಢೀರ್ ನಾಪತ್ತೆಯಾಗಿರುವ ಚೈತ್ರಾ ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಮಾಡೂರಿನ ಪಿಜಿ ಬಿಟ್ಟ ಒಬ್ಬಂಟಿಯಾಗಿ ಬೆಂಗಳೂರಿಗೆ ಒಂಟಿ ಪ್ರಯಾಣ ಮಾಡಿದ್ದಾರೆ. ಫೆಬ್ರವರಿ 17ರ ಬೆಳಿಗ್ಗೆ 9 ಗಂಟೆಗೆ ಪಿಜಿಯಿಂದ ಸ್ಕೂಟರ್​​​ನಲ್ಲಿ ಪ್ರಯಾಣ ಮಾಡಿರುವ ಅವರು, ಪಂಪ್​​ವೆಲ್​​ನಲ್ಲಿ ಗಾಡಿ ನಿಲ್ಲಿಸಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದರು. ಬಳಿಕ ನೇರವಾಗಿ ಸುರತ್ಕಲ್​​ಗೆ ತೆರಳಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ದರು, ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್ಸು ಹತ್ತಿ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್​​ನಲ್ಲಿ ಬಸ್ಸು ಇಳಿದು ಮೊಬೈಲ್ ಆನ್ ಮಾಡಿದ್ದ ಚೈತ್ರಾ, ಆ ಬಳಿಕ ಯಾರಿಗೋ ಕರೆ ಮಾಡಿ ರಹಸ್ಯ ಜಾಗಕ್ಕೆ ತೆರಳಿದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಬೆಂಗಳೂರಿನಲ್ಲಿ ಚೈತ್ರಾ ಇರುವ ಜಾಗದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಚೈತ್ರಾ ಕರೆ ಮಾಡಿದ್ದು ಯಾರಿಗೆ? ಇರೋದು ಯಾರ ಜೊತೆ ಎಂಬ ಬಗ್ಗೆ ಅನುಮಾನ ಹೆಚ್ಚಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ

ಸದ್ಯ ಪ್ರಕರಣದ ಬಗ್ಗೆ ಸಂಪೂರ್ಣ ‌ಮಾಹಿತಿ ಪಡೆದು ಉಳ್ಳಾಲ ಪೊಲೀಸರು ಬೆಂಗಳೂರಿಗೆ ಹೊರಟಿದ್ದಾರೆ. ಇನ್ನೆರಡು ದಿನಗಳಲ್ಲಿ ಚೈತ್ರಾ ಹೆಬ್ಬಾರ್ ನಾಪತ್ತೆ ರಹಸ್ಯ ಬಯಲಾಗಲಿದೆ ಎಂಬ ನಿರೀಕ್ಷೆ ಇದೆ.

ಲವ್ ಜಿಹಾದ್ ಆರೋಪ ಮಾಡಿದ್ದ ಬಜರಂಗದಳ

ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿತ್ತು. ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನು ಬ್ಲ್ಯಾಕ್​​ಮೇಲ್ ಮಾಡಿ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Mon, 26 February 24