Mangaluru:ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ರು: ಮಂಗಳಮುಖಿ ಗಂಭೀರ ಆರೋಪ

|

Updated on: Feb 23, 2023 | 2:55 PM

ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ರು ಎಂದು ಮಂಗಳಮುಖಿಯೋರ್ವೆ ನ್ಯಾಯಾಧೀಶರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

Mangaluru:ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ರು: ಮಂಗಳಮುಖಿ ಗಂಭೀರ ಆರೋಪ
ಮಂಗಳೂರಿನ ಜಿ.ಪ. ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಅರಿವು ಕಾರ್ಯಾಗಾರ
Follow us on

ಮಂಗಳೂರು: ಪೊಲೀಸ್ ಅಧಿಕಾರಿಯೋರ್ವರು ಲಿಂಗತ್ವ ಅಲ್ಪಸಂಖ್ಯಾತೆಯನ್ನು(transgender) ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಮಂಗಳೂರಿನ(Mangaluru) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ , ಅರಿವು ಕಾರ್ಯಾಗಾರ ನಡೆದಿತ್ತು. ಆ ವೇಳೆ ಮಂಗಳಮುಖಿ ನಿಖಿಲಾ ಅವರು ನ್ಯಾಯಾಧೀಶರ ಸಮಕ್ಷಮದಲ್ಲೇ ತಮ್ಮನ್ನು ಪೊಲೀಸ್ ಅಧಿಕಾರಿ ಲೈಂಗಿಕಕ್ರಿಯೆಗೆ ಆಹ್ವಾನಿಸಿದ್ದರು ಎಂದು ಆರೋಪಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಗಳಮುಖಿ ನಿಖಿಲಾ, ಮಂಗಳೂರಿನಲ್ಲಿ ರಾತ್ರಿ ವೇಳೆ ಸಿಂಗಲ್ ಸ್ಟಾರ್ ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು. ಹಣ ಕೊಡುತ್ತೇನೆ ಬಾ ಎಂದು ಕರೆದರು. ಯೂನಿರ್ಫಾಮ್ ಹಾಕಿದ್ದೀರಾ ಅಲ್ವಾ ಅದನ್ನು ಕಳಚಿ ಬನ್ನಿ ಎಂದು ಹೇಳಿದ್ದೆ. ಇದೇ ವಿಚಾರವನ್ನು ನಾನು ಸಭೆಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಧೀಶರ ಮುಂದೆ ಹೇಳಿಕೆ ಬಳಿಕ ನಿನ್ನೆ (ಫೆ.22) ಪೊಲೀಸ್ ಅಧಿಕಾರಿಗಳು ನನ್ನನ್ನು ಕಮೀಷನರ್ ಕಚೇರಿಗೆ ಕರೆದಿದ್ದರು. ನನ್ನ ಹೇಳಿಕೆಗಳನ್ನು ಪಡೆದು ದೂರು ಕೊಡಿ ಎಂದು ಹೇಳಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಲಿಂಗತ್ವ ಅಲ್ಪಸಂಖ್ಯಾತೆ ನಿಖಿಲಾ ತಿಳಿಸಿದ್ದಾರೆ.

ಮಂಗಳವಾರ ನಗರದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ , ಅರಿವು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು, ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ರಾತ್ರಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು. ಹಿರಿಯ ಅಧಿಕಾರಿಯೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ನೀಡುವುದು?ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿ ಈ ರೀತಿ ವರ್ತಿಸಿದಾಗ ನಾವು ಏನು ಮಾಡುವುದು? ಯಾರಿಗೆ ದೂರು ನೀಡುವುದು ಎಂದು ನಾಗರಿಕ ಸಮಾಜದಲ್ಲಿ ತಾವೆದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಧೀಶರ ಮುಂದೆ ವ್ಯಕ್ತಪಡಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ