ಮಂಗಳೂರು: ಮುಂಬೈ ನಂಟಿನಿಂದ ಕೊರೊನಾವನ್ನು ಹೆಚ್ಚಿಸಿಕೊಂಡ ಉಡುಪಿ ಜಿಲ್ಲೆಯಲ್ಲಿ ಶೇ.25ರಷ್ಟ ಬಸ್ ಸಂಚಾರ ಆರಂಭಗೊಂಡಿದೆ. ಕೊರೊನಾದಿಂದ ಸಂಚಾರ ವ್ಯತ್ಯಯವಾದರೂ ಬಹಳಷ್ಟು ನಿರೀಕ್ಷೆಯಲ್ಲಿದ್ದ ಜನತೆಗೆ ಬಸ್ ದರ ಏರಿಕೆ ತಲೆನೋವಾಗಿ ಪರಿಣಮಿಸಿದೆ.
ಕೊರೊನಾದಿಂದ ಆಘಾತ ಅನುಭವಿಸಿದ ಜನತೆಗೆ ದರ ಏರಿಕೆ ಬಿಸಿ ಅನ್ನೋದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ದರ ಏರಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸೋ ಬಸ್ ಮಾಲೀಕರು ಸ್ಯಾನಿಟೈಸ್ ಮಾಡೋಕೆ ಖರ್ಚಾಗುತ್ತೆ ಅನ್ನೊ ಮಾತು ಹೇಳಿ ಜಾರಿಕೊಳ್ತಿದ್ದಾರೆ. ಆದ್ರೆ ಖಾಸಗಿ ಬಸ್ನಲ್ಲಿ ಇದ್ಯಾವುದೇ ನಿಯಮ ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಕೂಡಾ ಇಲ್ಲ ಅನ್ನೋದು ಪ್ರಯಾಣಿಕರಿಂದಲೇ ಕೇಳಿ ಬರ್ತಿದೆ.
ಕೊರೊನಾ ಕಿರಿಕಿರಿಯ ಜೊತೆ ಬೆಲೆ ಏರಿಕೆ ರಗಳೆ:
ಮಣಿಪಾಲ-ಮಂಗಳೂರು ಹಳೇ ದರ 68 -ಹೊಸ ದರ 85
ಉಡುಪಿ-ಮಂಗಳೂರು ಹಳೇ ದರ 57 -ಹೊಸ ದರ 80
ಕಾರ್ಕಳ-ಮಂಗಳೂರು ಹಳೇ ದರ 55 -ಹೊಸ ದರ 65
ಕುಂದಾಪುರ-ಮಂಗಳೂರು ಹಳೇ ದರ 100 -ಹೊಸ ದರ 120
ಉಡುಪಿ-ಕುಂದಾಪುರ ಹಳೇ ದರ 45 -ಹೊಸ ದರ 55
ಉಡುಪಿ-ಕಾರ್ಕಳ ಹಳೇ ದರ 40 -ಹೊಸ ದರ 45
ಬಸ್ ಇಲ್ಲದಿದ್ದರೂ ಪರವಾಗಿಲ್ಲ ಕೊರೊನಾ ಬೇಡಪ್ಪ ಅಂತಾ ಖಾಸಗಿ ಬಸ್ ನೆಚ್ಚಿಕೊಂಡ ಜನತೆ ಇದೀಗ ಮತ್ತೆ ಬಸ್ ಜೀವನಕ್ಕೆ ಅಡ್ಜಸ್ಟ್ ಆಗಲೇಬೇಕಾಗಿದೆ. ದುಡಿಯೋ ಸಂಬಳಕ್ಕೆ ಅನಿವಾರ್ಯವಾಗಿ ಬಸ್ ಸಂಚಾರ ಮಾಡಲೇ ಬೇಕಾದ ಜನರಿಗೆ ಕೊರೊನಾ ಕರಿನೆರಳಲ್ಲಿ ಭಯದ ನಡುವೆ ಸಂಚರಿಸಬೇಕಿದೆ.
Published On - 1:34 pm, Sun, 7 June 20