ಕೆಲಸದ ವಿಚಾರವಾಗಿ ಹೊರಟ ಆಶಾ ಕಾರ್ಯಕರ್ತೆ ನಾಪತ್ತೆ!

|

Updated on: Jun 11, 2020 | 4:10 PM

ಮಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟತ್ತಿಲ್​ನಲ್ಲಿ ನಡೆದಿದೆ. ಕೆ ಅನುಪ್ ಎಂಬುವರ ಪತ್ನಿ ಸೌಮ್ಯ (34) ನಾಪತ್ತೆಯಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀಮತಿ ಸೌಮ್ಯ, ಐತೂರು ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದರು. ಕೊರೊನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 8 ರಂದು ಬೆಳ್ಳಿಗ್ಗೆ 10.30ಕ್ಕೆ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ […]

ಕೆಲಸದ ವಿಚಾರವಾಗಿ ಹೊರಟ ಆಶಾ ಕಾರ್ಯಕರ್ತೆ ನಾಪತ್ತೆ!
Follow us on

ಮಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟತ್ತಿಲ್​ನಲ್ಲಿ ನಡೆದಿದೆ. ಕೆ ಅನುಪ್ ಎಂಬುವರ ಪತ್ನಿ ಸೌಮ್ಯ (34) ನಾಪತ್ತೆಯಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಮತಿ ಸೌಮ್ಯ, ಐತೂರು ಗ್ರಾಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದರು. ಕೊರೊನಾ ವಾರಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 8 ರಂದು ಬೆಳ್ಳಿಗ್ಗೆ 10.30ಕ್ಕೆ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಭಿಣಿ ಮಹಿಳೆಯೋರ್ವರನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗ ಬೇಕು ಎಂದು ಹೇಳಿ ಹೊರಟ ಸೌಮ್ಯ ಮತ್ತೆ ಮನೆಗೆ ಬರಲೇ ಇಲ್ಲ.

ಸಂಜೆಯಾದರೂ ಹೆಂಡತಿ ಮನೆಗೆ ಬಾರದೇ ಇದ್ದುದರಿಂದ ಅನೂಪ್ ಅವರು ಸಂಬಂಧಿಕರ ಮತ್ತು ಪರಿಚಯಸ್ಥರ ಬಳಿ ವಿಚಾರಿಸಿದ್ದಾರೆ. ನಂತರ ಹುಡುಕಾಟ ನಡೆಸಿದ್ದಾರೆ. ಆದರೆ ಸೌಮ್ಯ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಸೌಮ್ಯ ರವರ ಪತಿ ಅನೂಪ್ ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಟೋ ರಿಕ್ಷಾವನ್ನು ಬಾಡಿಗೆ ಮಾಡಿ ಕಡಬ ಸರಕಾರಿ ಆಸ್ಪತ್ರೆಗೆ ಬಂದಿದ್ದಾಗಿ ಮಾಹಿತಿ ಸಿಕ್ಕಿದೆ. ಆಟೋರಿಕ್ಷಾ ಚಾಲಕನು ಕಡಬ ಸರ್ಕಾರಿ ಆಸ್ಪತ್ರೆಯವರೆಗೆ ಹೋಗಿ ಸೌಮ್ಯ ರನ್ನು ಬಿಟ್ಟು ಬಂದಿದ್ದರು. ಇನ್ನು ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Published On - 11:56 am, Thu, 11 June 20