ಬೆಂಗಳೂರಿನಲ್ಲಿ ಜಿಮ್ ಮಾಲೀಕರಿಂದ ಬೃಹತ್ ಪ್ರತಿಭಟನೆಗೆ ಸಜ್ಜು
ಬೆಂಗಳೂರು: ಕೊರೊನಾ ಮಹಾಮಾರಿಯನ್ನು ಎದುರಿಸಲು ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಅಂತಹುದರಲ್ಲಿ ಜಿಮ್ಗಳನ್ನು ಮುಚ್ಚಿರುವುದು ಸೂಕ್ತವಲ್ಲ ಎಂದು ವಾದಿಸಿ ಜಿಮ್ ಮಾಲೀಕರು ಶುಕ್ರವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಜೊತೆಗೆ, ಕೊರೊನಾ ಲಾಕ್ ಡೌನ್ ನಿಂದ ಜಿಮ್ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್ ಡೌನ್ 5.0 ನಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಜಿಮ್ ಓಪನ್ ಗೆ ಅನುಮತಿ ಸಿಕ್ಕಿಲ್ಲ. ಆದ್ರೆ ಮಾಲ್, ಹೋಟೆಲ್, ಮದ್ಯದಂಗಡಿ ಓಪನ್ಗೆ ಅವಕಾಶ ನೀಡಿ ಜಿಮ್ ಓಪನ್ ಗೆ ಮಾತ್ರ ಅವಕಾಶ ನೀಡಿಲ್ಲ ಎಂದು […]
ಬೆಂಗಳೂರು: ಕೊರೊನಾ ಮಹಾಮಾರಿಯನ್ನು ಎದುರಿಸಲು ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಅಂತಹುದರಲ್ಲಿ ಜಿಮ್ಗಳನ್ನು ಮುಚ್ಚಿರುವುದು ಸೂಕ್ತವಲ್ಲ ಎಂದು ವಾದಿಸಿ ಜಿಮ್ ಮಾಲೀಕರು ಶುಕ್ರವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಜೊತೆಗೆ, ಕೊರೊನಾ ಲಾಕ್ ಡೌನ್ ನಿಂದ ಜಿಮ್ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್ ಡೌನ್ 5.0 ನಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಜಿಮ್ ಓಪನ್ ಗೆ ಅನುಮತಿ ಸಿಕ್ಕಿಲ್ಲ. ಆದ್ರೆ ಮಾಲ್, ಹೋಟೆಲ್, ಮದ್ಯದಂಗಡಿ ಓಪನ್ಗೆ ಅವಕಾಶ ನೀಡಿ ಜಿಮ್ ಓಪನ್ ಗೆ ಮಾತ್ರ ಅವಕಾಶ ನೀಡಿಲ್ಲ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನಿಲುವನ್ನು ವಿರೋಧಿಸಿ ನಾಳೆ ಪ್ರತಿಭಟನೆಗೆ ಕರೆ ನೀಡಿರುವ ಜಿಮ್ ಮಾಲೀಕರು ಹಾಗೂ ಜಿಮ್ ಸಿಬ್ಬಂದಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಜಮಾವಣೆ ಯಾಗಲಿದ್ದಾರೆ. ಜಿಮ್ ಓಪನ್ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟಿಸಲಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ಲಕ್ಷಾಂತರ ರೂ ಬಂಡವಾಳ ಹಾಕಿ ಆದಾಯ ಇಲ್ಲದೆ ಮಾಲೀಕರು ತತ್ತರಿಸಿದ್ದಾರೆ.
Published On - 11:05 am, Thu, 11 June 20