ತಂದೆ-ತಾಯಿಯ ಕೊಂದು ಪಿಂಡ ಬಿಟ್ಟು, ಪ್ರಾಣ ಬಿಡಲು ಹೊರಟವ ಖಾಕಿ ಬಲೆಗೆ!
ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ವೃದ್ಧ ದಂಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದಂಪತಿಯನ್ನು ಕೊಲೆಗೈದು ಪರಾರಿಯಾಗಿದ್ದ ಪುತ್ರನನ್ನು ಅರೆಸ್ಟ್ ಮಾಡಿದ್ದಾರೆ. ಕಾಮಾಕ್ಷಿಪಾಳ್ಯದ ನರಸಿಂಹ ರಾಜು ಮತ್ತು ಸರಸ್ವತಿ ದಂಪತಿಯನ್ನು ಕೊಂದು ಶ್ರೀರಂಗಪಟ್ಟಣಕ್ಕೆ ಪರಾರಿಯಾಗಿದ್ದ ಮಗ ಸಂತೋಷ್‌ನನ್ನು ಸೆರೆಹಿಡಿಯುವಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆತ್ತ ತಂದೆ ತಾಯಿಯನ್ನೇ ಕೊಂದ ಮಗ ಈಗ ಅಂದರ್ ಖಾಕಿ ಕೈಗೆ ಸಿಕ್ಕಿರುವ ಸಂತೋಷ್ ಸದ್ಯ ತಾನೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಬಾಯಿಬಿಟ್ಟ ಸಂತೋಷ್ ಜೂನ್ […]

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ವೃದ್ಧ ದಂಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದಂಪತಿಯನ್ನು ಕೊಲೆಗೈದು ಪರಾರಿಯಾಗಿದ್ದ ಪುತ್ರನನ್ನು ಅರೆಸ್ಟ್ ಮಾಡಿದ್ದಾರೆ. ಕಾಮಾಕ್ಷಿಪಾಳ್ಯದ ನರಸಿಂಹ ರಾಜು ಮತ್ತು ಸರಸ್ವತಿ ದಂಪತಿಯನ್ನು ಕೊಂದು ಶ್ರೀರಂಗಪಟ್ಟಣಕ್ಕೆ ಪರಾರಿಯಾಗಿದ್ದ ಮಗ ಸಂತೋಷ್‌ನನ್ನು ಸೆರೆಹಿಡಿಯುವಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆತ್ತ ತಂದೆ ತಾಯಿಯನ್ನೇ ಕೊಂದ ಮಗ ಈಗ ಅಂದರ್ ಖಾಕಿ ಕೈಗೆ ಸಿಕ್ಕಿರುವ ಸಂತೋಷ್ ಸದ್ಯ ತಾನೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಬಾಯಿಬಿಟ್ಟ ಸಂತೋಷ್ ಜೂನ್ 10ನೇ ತಾರೀಖು ನಸುಕಿನ ಜಾವ 3 ಗಂಟೆ ಸಮಯದಲ್ಲಿ ಇಬ್ಬರನ್ನು ಕೊಲೆಗೈದು ನಂತರ ಶ್ರೀರಂಗಪಟ್ಟಣಕ್ಕೆ ಹೋಗಿದ್ದನಂತೆ.
ಅದೇಕೋ ಏನೋ ಕೊಲೆಮಾಡುವಾಗ ಇರದ ಕರುಣೆ ನಂತರ ಉಕ್ಕಿಬಂದು ತಂದೆ ತಾಯಿಗೆ ಶ್ರೀರಂಗಪಟ್ಟಣದ ಬಳಿಯ ಕಾವೇರಿಯಲ್ಲಿ ಪಿಂಡ ಪ್ರದಾನ ಬೇರೆ ಮಾಡಿದ್ದನಂತೆ. ಆನಂತರ ಪಾಪಪ್ರಜ್ಞೆ ಉಂಟಾಗಿಯೋ ಏನೋ ತಾನು ಅಲ್ಲೇ ಇದ್ದ ಬ್ರಿಡ್ಜ್ನಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ. ಆದರೆ ಕೆಳಗೆ ಬಿದ್ದವನು ಕೇವಲ ಕಾಲು ಮುರಿದುಕೊಂಡು ಆಸ್ಪತ್ರೆ ಪಾಲಾದ. ಇದೀಗ ಈ ಪಾಪಿ ಮಗ ಖಾಕಿ ವಶದಲ್ಲಿದ್ದಾನೆ. ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಹೆತ್ತವರನ್ನೇ ಕೊಲೆಮಾಡಲು ಕಾರಣವೇನು ಎಂಬ ಮಾಹಿತಿಯನ್ನು ಕಲೆಹಾಕಲು ಮುಂದಾಗಿದ್ದಾರೆ.
Published On - 1:21 pm, Thu, 11 June 20




