ಪುತ್ತೂರು: ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ, ಆಸ್ಪತ್ರೆಗೆ ದಾಖಲು

| Updated By: Ganapathi Sharma

Updated on: Nov 16, 2023 | 10:19 PM

ಮನೆಯ ತೋಟದಲ್ಲಿ ನಿಂತಿದ್ದ ವೇಳೆ ಅವರಿಗೆ ಕನ್ನಡಿ ಹಾವು ಕಚ್ಚಿದೆ. ಗಂಭೀರ ಸ್ವರೂಪದ ಗಾಯವಲ್ಲದ ಕಾರಣ ಸಂಜೀವ ಮಠಂದೂರು ಚೇತರಿಸಿಕೊಂಡಿದ್ದಾರೆ.

ಪುತ್ತೂರು: ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ, ಆಸ್ಪತ್ರೆಗೆ ದಾಖಲು
ಸಂಜೀವ ಮಠಂದೂರು
Follow us on

ಮಂಗಳೂರು, ನವೆಂಬರ್ 16: ಪುತ್ತೂರಿನ ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರು (Sanjeeva Matandoor) ಅವರಿಗೆ ಹಾವು ಕಡಿತವಾಗಿದ್ದು ಪುತ್ತೂರಿನ (Puttur) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ತೋಟದಲ್ಲಿ ನಿಂತಿದ್ದ ವೇಳೆ ಅವರಿಗೆ ಕನ್ನಡಿ ಹಾವು ಕಚ್ಚಿದೆ. ಗಂಭೀರ ಸ್ವರೂಪದ ಗಾಯವಲ್ಲದ ಕಾರಣ ಸಂಜೀವ ಮಠಂದೂರು ಚೇತರಿಸಿಕೊಂಡಿದ್ದಾರೆ.

ಗಡಿಪಾರು ಅಸ್ತ್ರ: ರಾಜ್ಯ ಸರ್ಕಾರದ ವಿರುದ್ಧ ಸಂಸದ ನಳಿನ್ ವಾಗ್ದಾಳಿ

ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡಿಪಾರು ಅಸ್ತ್ರ ವಿಚಾರವಾಗಿ ಪುತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ‌ಮಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡೀಪಾರು ಮಾಡ್ತಿದಾರೆ. ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇಂಥ ದ್ವೇಷದ ರಾಜಕಾರಣ ಸರಿಯಲ್ಲ, ಇದನ್ನ ಖಂಡಿಸ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕರಾವಳಿಯ ಹಿಂದೂ ಕಾರ್ಯಕರ್ತರ ವಿರುದ್ಧ ಮತ್ತೆ ಗಡಿಪಾರು ಅಸ್ತ್ರ

ಗಡಿಪಾರು ವಿಚಾರವಾಗಿ ಅಧಿಕಾರಿಗಳ ತರಾಟೆಗೆ ತೆಗೊಂಡಿದೇನೆ, ಒಂದು ಕೇಸ್ ಇದ್ದವನಿಗೂ ಗಡಿಪಾರು ನೊಟೀಸ್ ಆಗಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಲು ನಾವು ಬಿಡಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುತ್ತೂರಿನಲ್ಲೇ ಎರಡು ಹತ್ಯೆ ನಡೆದಿದೆ. ಉಡುಪಿಯಲ್ಲಿ ಒಂದೇ ಮನೆಯಲ್ಲಿ ನಾಲ್ಕು ಹತ್ಯೆ ಆಗಿದೆ. ಗುಪ್ತಚರ ಇಲಾಖೆ ಏನ್ ಮಾಡ್ತಾ ಇದೆ, ಇವರೆಲ್ಲರ ಕೈ ಕಟ್ಟಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಗೂಂಡಾಗಳಿಗೆ ಲಾಭ ಆಗ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ