ಪುತ್ತೂರು ಸರ್ಕಾರಿ ಮಹಿಳಾ ಕಾಲೇಜಿಗಿಲ್ಲ ಸ್ವಂತ ಕಟ್ಟಡ, ತಾತ್ಕಾಲಿಕ ಶೆಡ್​ಗಳಲ್ಲೇ ವಿದ್ಯಾರ್ಥಿನಿಯರ ಅಧ್ಯಯನ

ಕಾಲೇಜು ಆರಂಭವಾದಾಗಿನಿಂದಲೂ ಹಳೆ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪ್ರಯತ್ನದ ಫಲವಾಗಿ 2013ರ ಆಗಸ್ಟ್ 31ರಂದು ಹೆಣ್ಣು ಮಕ್ಕಳಿಗಾಗಿಯೇ ಕಾಲೇಜು ಮಂಜೂರಾಗಿತ್ತು ಮತ್ತು ಆರಂಭವಾಗಿತ್ತು.

ಪುತ್ತೂರು ಸರ್ಕಾರಿ ಮಹಿಳಾ ಕಾಲೇಜಿಗಿಲ್ಲ ಸ್ವಂತ ಕಟ್ಟಡ, ತಾತ್ಕಾಲಿಕ ಶೆಡ್​ಗಳಲ್ಲೇ ವಿದ್ಯಾರ್ಥಿನಿಯರ ಅಧ್ಯಯನ
ಪುತ್ತೂರು ನಗರದ ಪಕ್ಷಿನೋಟ (ಚಿತ್ರ ಕೃಪೆ: ಫೇಸ್​​ಬುಕ್)
Image Credit source: Facebook

Updated on: Dec 16, 2023 | 2:35 PM

ಪುತ್ತೂರು, ಡಿಸೆಂಬರ್ 16: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ನಗರದ ಹೃದಯ ಭಾಗದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ (Govt Women’s First Grade College) ವಿದ್ಯಾರ್ಥಿನಿಯರು ಕಟ್ಟಡ ಸಮಸ್ಯೆಯಿಂದಾಗಿ ತಾತ್ಕಾಲಿಕ ಶೆಡ್‌ಗಳಲ್ಲಿ ಓದುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳವನ್ನು ಆಯೋಜಿಸಿದ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರ ವಿಧಾನಸಭಾ ಕ್ಷೇತ್ರದಲ್ಲೇ ಈ ಅವ್ಯವಸ್ಥೆ ಕಂಡುಬಂದಿದೆ ಎಂಬುದು ಗಮನಾರ್ಹ.

ಕಾಲೇಜಿಗೆ ದಾಖಲಾಗಿರುವ 600 ಕ್ಕೂ ಹೆಚ್ಚು ಹುಡುಗಿಯರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸಾಕಷ್ಟು ಶೌಚಾಲಯಗಳೂ ಇಲ್ಲ ಎನ್ನಲಾಗಿದೆ.

ಕಾಲೇಜು 2013 ರಲ್ಲಿ ಪ್ರಾರಂಭವಾಗಿತ್ತು. ಆರಂಭವಾಗಿ ಒಂದು ದಶಕ ಕಳೆದರೂ ಸ್ವಂತ ಕಟ್ಟಡವನ್ನು ಹೊಂದಿಲ್ಲ.

ಕಾಲೇಜು ಆರಂಭವಾದಾಗಿನಿಂದಲೂ ಹಳೆ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪ್ರಯತ್ನದ ಫಲವಾಗಿ 2013ರ ಆಗಸ್ಟ್ 31ರಂದು ಹೆಣ್ಣು ಮಕ್ಕಳಿಗಾಗಿಯೇ ಕಾಲೇಜು ಮಂಜೂರಾಗಿತ್ತು ಮತ್ತು ಆರಂಭವಾಗಿತ್ತು.

ಸಾಕಷ್ಟು ತರಗತಿ ಕೊಠಡಿಗಳಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ಹಳೆಯ ತಾಲೂಕು ಕಚೇರಿ ಕಟ್ಟಡದ ಹೊರಗೆ ನಾಲ್ಕು ತಾತ್ಕಾಲಿಕ ತರಗತಿ ಕೊಠಡಿಗಳನ್ನು ಹೊಂದಲಾಗಿದೆ. ತಾತ್ಕಾಲಿಕ ತರಗತಿ ಕೊಠಡಿಗಳು ಸಾಮಾನ್ಯ ಶೆಡ್‌ಗಳೇ ಆಗಿವೆ. ಮೇಲ್ಛಾವಣಿಯನ್ನು ಸಿಮೆಂಟ್ ಶೀಟ್‌ಗಳಿಂದ ಮುಚ್ಚಲಾಗಿದ್ದು, ಟಾರ್ಪಾಲಿನ್ ಗೋಡೆಗಳನ್ನು ಒಳಗೊಂಡಿದೆ. ಸರಿಯಾಗಿ ಗಾಳಿಯಾಡಲು ವ್ಯವಸ್ಥೆಯೂ ಇಲ್ಲದೆ, ವಿದ್ಯಾರ್ಥಿಗಳು ಕಷ್ಟಪಡುವಂತಾಗಿದೆ. ಅದು ಬಿಟ್ಟರೆ 600 ಹೆಣ್ಣುಮಕ್ಕಳಿಗೆ ಸಾಕಷ್ಟು ವಾಶ್ ರೂಂ ಕೂಡ ಇಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಕೋಲ್ಪೆ ಹೇಳಿರುವುದಾಗಿ ‘ಟೈಮ್ಸ್​ ಆಫ್ ಇಂಡಿಯಾ’ ವರದಿ ಮಾಡಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಐವರು ಸೇರಿ 24 ವಾಂಟೆಡ್ ಆರೋಪಿಗಳ ಹೆಸರು ಪ್ರಕಟಿಸಿದ ಎನ್​ಐಎ

ಇದಲ್ಲದೆ, ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್‌ಗಳಿಲ್ಲ ಎಂದು ಅವರು ಹೇಳಿದ್ದಾರೆ. ಲಭ್ಯವಿರುವ ಜಾಗದಲ್ಲೇ ಚಿಕ್ಕ ಲ್ಯಾಬ್ ಮಾಡಲಾಗಿದೆ. ಕೆಲವೊಮ್ಮೆ ಲ್ಯಾಬ್‌ಗಳಲ್ಲಿ ಸಂದಣಿ ಹೆಚ್ಚಾಗುವುದರಿಂದ ವಿದ್ಯಾರ್ಥಿಗಳು ಅದನ್ನು ಬಳಸಲು ಆಗುವುದಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ