ಮಂಗಳೂರು: ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಮತ್ತೇ ರಿಂಗಣಿಸಲು ಆರಂಭಿಸಿವೆ. ಕರಾವಳಿ ಹಾಗು ಮಲೆನಾಡು ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್‌ಗಳ ಮೂಲಕ ಸಂಪರ್ಕ ಸಾಧಿಸಿರುವುದು ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಶಂಕಿತ ಉಗ್ರರ ಬಂಧನದ ಬಳಿಕ ಸೈಲೆಂಟ್?
ಇತ್ತೀಚೆಗಷ್ಟೇ ಎನ್ಐಎ ಅಧಿಕಾರಿಗಳು ಕೇರಳದ ಕಣ್ಣೂರು, ಮಂಗಳೂರು, ಭಟ್ಕಳದಲ್ಲಿ ದಾಳಿ ನಡೆಸಿದ್ರು. ಈ ವೇಳೆ ಶಂಕಿತ ಐಸಿಸ್ ಉಗ್ರನನ್ನ ಬಂಧಿಸಿದ್ರು. ಜೊತೆಗೆ ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ರವಾನಿಸುತ್ತಿದ್ದ ಫಂಡ್ ರೈಸ್ ಮಾಡ್ತಿದ್ದ 8 ಶಂಕಿತರ ಹೆಡೆಮುರಿ ಕಟ್ಟಿದ್ರು. ಆಗ ದಿಢೀರನೆ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು ಇದೀಗ ಮತ್ತೆ ಌಕ್ಟೀವ್ ಆಗಿವೆ.
4 ಸ್ಥಳಗಳಲ್ಲಿ ಸ್ಯಾಟಲೈಟ್ ಫೋನ್ ಌಕ್ಟಿವ್
ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಸಂಪರ್ಕ ಇಂಟರ್ ಸೆಪ್ಟ್ ಆಗಿರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ದಟ್ಟಾರಣ್ಯ ಪ್ರದೇಶ , ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಎರಡು ಪ್ರದೇಶಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬಳಿಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಲಾಗಿದೆ. ಕಳೆದ ಒಂದು ವಾರದ ಅಂತರದಲ್ಲಿ 4 ಕಡೆ ಸ್ಯಾಟಲೈಟ್ ಫೋನ್‌ನಿಂದ ನಿಗೂಢ ವ್ಯಕ್ತಿಗಳು ಸಂಪರ್ಕ ಸಾಧಿಸಿರುವುದು ಪತ್ತೆಯಾಗಿದೆ.
ಸೈಲೆಂಟ್ ಮೋಡ್‌ನಲ್ಲಿದ್ದ ಸ್ಯಾಟಲೈಟ್ ಫೋನ್‌ಗಳು ರಿಂಗಣಿಸಿದ್ದೇಕೆ?
ಅಂದಹಾಗೆ ಇತ್ತೀಚೆಗೆ ದೇಶದೊಳಗೆ 13 ಮಂದಿ ಶ್ರೀಲಂಕಾದ ಶಂಕಿತ ಉಗ್ರರನ್ನು ಒಳನುಸುಳಿರುವ ಬಗ್ಗೆ ಬೇಹುಗಾರಿಕಾ ಇಲಾಖೆ ಮಾಹಿತಿ ರವಾನಿಸಿತ್ತು. ಈ ಶಂಕಿತ ಉಗ್ರರು ಪಾಕಿಸ್ಥಾನಕ್ಕೆ ತೆರಳುವ ಉದ್ದೇಶ ಹೊಂದಿದ್ದರು ಎಂಬ ಮಾಹಿತಿಯೂ ಲಭಿಸಿತ್ತು. ಹಾಗಾಗಿ ಕರಾವಳಿಯಲ್ಲಿನ ಸ್ಲೀಪರ್ ಸೆಲ್‌ಗಳನ್ನು ಬಳಸಿ ಈ ಶಂಕಿತರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಪ್ರಯತ್ನ ನಡೀತಿದ್ಯಾ? ಅದಕ್ಕಾಗಿಯೇ ಸೈಲೆಂಟ್ ಮೋಡ್‌ನಲ್ಲಿದ್ದ ಸ್ಯಾಟಲೈಟ್ ಫೋನ್‌ಗಳು ಌಕ್ಟೀವ್ ಆಗಿದ್ಯಾ ಅನುಮಾನ ಕಾಡುತ್ತಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ