ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ

ಖಲೀಲ್ ಹಕ್ಕಾನಿ, ಸಿರಾಜುದ್ದೀನ್ ಹಕ್ಕಾನಿಯ ಸಂಬಂಧಿ ಆಗಿದ್ದಾನೆ. ಸಿರಾಜುದ್ದೀನ್ ಹಕ್ಕಾನಿ, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿ ಕೌನ್ಸಿಲ್​ನ ನಾಯಕ ಆಗಿದ್ದಾನೆ. ಹಕ್ಕಾನಿ ನೆಟ್​ವರ್ಕ್ ಮುಖ್ಯವಾಗಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ.

ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ
ಖಲೀಲ್ ಹಕ್ಕಾನಿ
Follow us
TV9 Web
| Updated By: ganapathi bhat

Updated on:Aug 22, 2021 | 9:10 AM

ಕಾಬೂಲ್: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ ನಡೆಸಿರುವುದು ಕಂಡುಬಂದಿದೆ. ಈ ಹಿಂದೆ, ಖಲೀಲ್ ಮಾಹಿತಿ ನೀಡಿದರೆ 6 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಆದರೆ, ಇದೀಗ ಅದೇ ಖಲೀಲ್ ಹಕ್ಕಾನಿಯ ನೆರವನ್ನು ಅಮೆರಿಕ ಕೋರಿದೆ. ಕಾಬೂಲ್ ರಕ್ಷಣೆ ಹೊಣೆಯನ್ನು ತಾಲಿಬಾನ್ ಹಕ್ಕಾನಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ,  ಅಮೆರಿಕನ್ನರನ್ನ ಕಾಬೂಲ್ ಏರ್‌ಪೋರ್ಟ್‌ಗೆ ತಲುಪಿಸಲು ಅಮೆರಿಕ ಮನವಿ ಮಾಡಿದೆ. ಅಮೆರಿಕ ಖಲೀಲ್ ಹಕ್ಕಾನಿ ನೆರವು ಕೋರಿದೆ. 

ಖಲೀಲ್ ಹಕ್ಕಾನಿ ಕಾಬೂಲ್​ನ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಕಾಬೂಲ್​ ಬೀದಿಗಳಿಗೆ ಹಕ್ಕಾನಿ ಆಗಮಿಸಿದಾಗ ತಾಲಿಬಾನಿಗಳು ಆತನನ್ನು ಸ್ವಾಗತಿಸಿದ್ದರು. ಖಲೀಲ್ ಹಕ್ಕಾನಿ, ಸಿರಾಜುದ್ದೀನ್ ಹಕ್ಕಾನಿಯ ಸಂಬಂಧಿ ಆಗಿದ್ದಾನೆ. ಸಿರಾಜುದ್ದೀನ್ ಹಕ್ಕಾನಿ, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿ ಕೌನ್ಸಿಲ್​ನ ನಾಯಕ ಆಗಿದ್ದಾನೆ. ಹಕ್ಕಾನಿ ನೆಟ್​ವರ್ಕ್ ಮುಖ್ಯವಾಗಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಗ್ರೂಪ್​ಗಳು, ವಿವಿಧ ದೇಶಗಳು ಹಕ್ಕಾನಿ ಕಾಬೂಲ್ ಉಸ್ತುವಾರಿ ವಹಿಸಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿವೆ.

ವಿದೇಶಗಳಲ್ಲಿ ಆಫ್ಘನ್ ಪ್ರಜೆಗಳ ಆಕ್ರೋಶ ಅಫ್ಘಾನಿಸ್ತಾನವನ್ನು ತಾಲಿಬಾನರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಟಲಿ ರಾಜಧಾನಿ ರೋಮ್ ನಗರದಲ್ಲಿ ಆಫ್ಘನ್ನರು ಧರಣಿ ನಡೆಸಿದ್ದಾರೆ. ಪಾಕ್​​ ವಿರುದ್ಧ ಧಿಕ್ಕಾರ ಕೂಗಿ ಆಫ್ಘನ್ ಪ್ರಜೆಗಳು ಆಕ್ರೋಶ ಹೊರಹಾಕಿದ್ದಾರೆ. ಲಂಡನ್‌ನಲ್ಲಿ ಕೂಡ ಸಾವಿರಾರು ಆಫ್ಘನ್ ಪ್ರಜೆಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ಆಫ್ಘನ್ ಧ್ವಜ ನಮ್ಮ ಗೌರವ, ಆಫ್ಘನ್‌ನಲ್ಲಿ ಶಾಂತಿ ನೆಲೆಸಬೇಕು. ಆಫ್ಘನ್‌ನಲ್ಲಿ ಭಯೋತ್ಪಾದನೆಗೆ ಅವಕಾಶ ನೀಡಬಾರದು ಎಂದು ಧರಣಿ ನಡೆಸಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳಿಂದ ಬಿಡುಗಡೆಗೊಳಿಸಿ, ಆಫ್ಘನ್ನರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಲಂಡನ್‌ನ ಮುಖ್ಯ ರಸ್ತೆಗಳಲ್ಲಿ ಆಫ್ಘನ್ ಪ್ರಜೆಗಳಿಂದ ಧರಣಿ ನಡೆದಿದೆ.

ಅಫ್ಘಾನಿಸ್ತಾನದಿಂದ ಭಾರತೀಯರ ಏರ್​ಲಿಫ್ಟ್  ಆಫ್ಘನ್‌ನಿಂದ ಮೊದಲ ಬ್ಯಾಚ್‌ನಲ್ಲಿ 135 ಜನ ಸ್ಥಳಾಂತರ ಮಾಡಲಾಗುವುದು. ದೋಹಾ ಮೂಲಕ ಒಟ್ಟು 135 ಭಾರತೀಯರ ಸ್ಥಳಾಂತರ ಮಾಡಲಾಗುತ್ತದೆ ಎಂದು ಕತಾರ್‌ನಲ್ಲಿರುವ ಭಾರತದ ದೂತಾವಾಸದಿಂದ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಹಾಗೂ ಅಫ್ಘಾನ್​ನಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳು ಅಭದ್ರತೆ, ಆತಂಕದಿಂದ ಇದ್ದಾರೆ. ಹೀಗಾಗಿ, ಹಲವು ದೇಶಗಳು ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಮರಳಿ ಕರೆತರುವ ಪ್ರಯತ್ನದಲ್ಲಿ ಇದೆ. ಇದೀಗ ಆಫ್ಘನ್​ನಿಂದ ಮೊದಲ ಬ್ಯಾಚ್​ನಲ್ಲಿ 135 ಜನರನ್ನು ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ.

ಆಫ್ಘನ್‌ನಿಂದ ಇಂದು 500ಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗುವುದು. ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂಬ ಬಗ್ಗೆಯೂ ತಿಳಿದುಬಂದಿದೆ. ಅಫ್ಘಾನಿಸ್ತಾನದ ವಿವಿಧ ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗುವ ಬಗ್ಗೆ ಮಾಹಿತಿ ಲಭಿಸಿದೆ.

ಆಫ್ಘನ್‌ನ ಕಾಬೂಲ್‌ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದುಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದೆ. ತಜಕಿಸ್ತಾನದಿಂದ ದೆಹಲಿಗೆ 87 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ. ಭಾರತೀಯರ ಜತೆ ಇಬ್ಬರು ನೇಪಾಳಿಗರು ಕೂಡ ಸ್ಥಳಾಂತರ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಭರವಸೆ ನೀಡಿದೆ.

ಭಾರತೀಯರ ರಕ್ಷಣೆಗೆ ವಾಯುಪಡೆಯ C-17 ಗ್ಲೋಬ್ ಮಾಸ್ಟರ್, C-130J ವಿಮಾನ ಸನ್ನದ್ಧವಾಗಿದೆ. ಭಾರತದ 2 ವಿಮಾನಗಳ ಹಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಸದ್ಯ, ಅಮೆರಿಕದ ನಿಯಂತ್ರಣದಲ್ಲಿ ಕಾಬೂಲ್ ಏರ್‌ಪೋರ್ಟ್ ಇದೆ. 107 ಭಾರತೀಯರು ಸೇರಿದಂತೆ 168 ಜನರ ಏರ್‌ಲಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ 500ಕ್ಕೂ ಹೆಚ್ಚು ಮಂದಿ ಸ್ಥಳಾಂತರ; ಭಾರತಕ್ಕೆ ಏರ್​ಲಿಫ್ಟ್

Tv9 Kannada Digital Exclusive: ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಹೊರತಾಗಿಯೂ ನೀವರಿಯದ 30 ಆಫ್ಘನ್ ಸಂಗತಿಗಳು

Published On - 8:58 am, Sun, 22 August 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್