‘ಅಲ್ಲಿ ಎಲ್ಲವೂ ಮುಗಿದು ಹೋಯ್ತು’ ಕಣ್ಣೀರಾದ ಅಫ್ಘಾನಿಸ್ತಾನದ ಸಂಸದ ನರೀಂದರ್ ಸಿಂಗ್ ಖಾಲ್ಸಾ

Narinder Singh Khalsa: ನಾವು ಅಫ್ಘಾನಿಸ್ತಾನದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನೋಡಿಲ್ಲ ಮತ್ತು ಈಗ ನಾವು ಅದನ್ನು ನೋಡುತ್ತಿದ್ದೇವೆ, ಎಲ್ಲವೂ ಮುಗಿದಿದೆ. ಕಳೆದ 20 ವರ್ಷಗಳಲ್ಲಿ ನಿರ್ಮಿಸಿದ ಸರ್ಕಾರ ಕೂಡ ಮುಗಿದಿದೆ. ಈಗ ಎಲ್ಲವೂ ಶೂನ್ಯವಾಗಿದೆ.

'ಅಲ್ಲಿ ಎಲ್ಲವೂ ಮುಗಿದು ಹೋಯ್ತು' ಕಣ್ಣೀರಾದ ಅಫ್ಘಾನಿಸ್ತಾನದ ಸಂಸದ ನರೀಂದರ್ ಸಿಂಗ್ ಖಾಲ್ಸಾ
ನರೀಂದರ್ ಸಿಂಗ್ ಖಾಲ್ಸಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 22, 2021 | 1:03 PM

ದೆಹಲಿ: ಅಫ್ಘಾನಿಸ್ತಾನದ ಸಂಸತ್ ಸದಸ್ಯ ನರೀಂದರ್ ಸಿಂಗ್ ಖಾಲ್ಸಾ ಅವರು ಭಾನುವಾರ ಬೆಳಿಗ್ಗೆ ಭಾರತೀಯ ವಾಯುಪಡೆ ವಿಮಾನದಲ್ಲಿ ಕಾಬೂಲ್ ನಿಂದ ಬಂದಿಳಿದ ನಂತರ ಮಾಧ್ಯಮದವರ ಮುಂದೆ ಕಣ್ಣೀರಾಗಿದ್ದಾರೆ. ಸಂಸದನಾಗಿ ತನ್ನ ದೇಶವನ್ನು ತೊರೆದು ಬಂದಿರುವ ಬಗ್ಗೆ ಎಂದು ಕೇಳಿದಾಗ, ಇದು ನನ್ನಲ್ಲಿ ಅಳು ಬರಿಸುತ್ತದೆ ಎಂದಿದ್ದಾರೆ. ಕಾಬೂಲಿನಿಂದ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದಲ್ಲಿ ಭಾರತವು 168 ಜನರನ್ನು ಸ್ಥಳಾಂತರಿಸಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಅದರಲ್ಲಿ 107 ಭಾರತೀಯರು ಮತ್ತು ಸಿಂಗ್ ನಂತಹ ಇತರರು ಅಫ್ಘಾನ್ ಹಿಂದುಗಳು ಮತ್ತು ಸಿಖ್ಖರಾಗಿದ್ದಾರೆ. “ನಾವು ಅಫ್ಘಾನಿಸ್ತಾನದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನೋಡಿಲ್ಲ ಮತ್ತು ಈಗ ನಾವು ಅದನ್ನು ನೋಡುತ್ತಿದ್ದೇವೆ, ಎಲ್ಲವೂ ಮುಗಿದಿದೆ. ಕಳೆದ 20 ವರ್ಷಗಳಲ್ಲಿ ನಿರ್ಮಿಸಿದ ಸರ್ಕಾರ ಕೂಡ ಮುಗಿದಿದೆ. ಈಗ ಎಲ್ಲವೂ ಶೂನ್ಯವಾಗಿದೆ”ಎಂದು ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 87 ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳ ಇನ್ನೊಂದು ಗುಂಪನ್ನು ಭಾನುವಾರ ದೆಹಲಿಗೆ ಕರೆದೊಯ್ಯಲಾಯಿತು.

ಸಿಂಗ್ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರು ಸಂಸದರಲ್ಲಿ ಒಬ್ಬರಾಗಿದ್ದು, 72 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳ ಗುಂಪನ್ನು ತಾಲಿಬಾನ್ ಶನಿವಾರ ಐಎಎಫ್ ವಿಮಾನ ಹತ್ತದಂತೆ ತಡೆದಿದ್ದು ಕಾಬೂಲ್ ವಿಮಾನ ನಿಲ್ದಾಣದಿಂದ ಹಿಂದಿರುಗಿದ್ದರು.

ಇದನ್ನೂ ಓದಿ: Haqqani Network: ಮನುಷ್ಯತ್ವದ ಮುಖ ನೋಡದ ಹಕ್ಕಾನಿಗಳು ಅಫ್ಘಾನಿಸ್ತಾನದಲ್ಲಿ ಓಡಾಡುತ್ತಿದ್ದಾರೆ; ಯಾರಿವರು?

(Everything is zero now Afghanistan Member of Parliament Narinder Singh Khalsa broke down )