ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕಡೆಯ ಕ್ಷಣದಲ್ಲಿ ರದ್ದು

| Updated By: ಆಯೇಷಾ ಬಾನು

Updated on: Dec 24, 2023 | 2:46 PM

ರಾತ್ರಿ 8:15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಸಿಬ್ಬಂದಿ ಮೇಲೆ ಆಕ್ರೋಶ ಹೊರ ಹಾಕಿದರು. ತಾಂತ್ರಿಕ ಅಡಚಣೆಯಿಂದಾಗಿ ವಿಮಾನಯಾನ ಕ್ಯಾನ್ಸಲ್ ಮಾಡಲಾಗಿತ್ತು. ಪ್ರಯಾಣಿಕರ ಗಲಾಟೆ ಬಳಿಕ ಪರ್ಯಾಯ ವ್ಯವಸ್ಥೆ ಮಾಡಿ ರಾತ್ರಿ 2:15ಕ್ಕೆ ಬೇರೊಂದು ವಿಮಾನದ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು.

ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕಡೆಯ ಕ್ಷಣದಲ್ಲಿ ರದ್ದು
ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕಡೆಯ ಕ್ಷಣದಲ್ಲಿ ರದ್ದು
Follow us on

ಮಂಗಳೂರು, ಡಿ.24: ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕಡೆಯ ಕ್ಷಣದಲ್ಲಿ ರದ್ದಾಗಿದ್ದು ಏರ್ ಇಂಡಿಯಾ (Air india) ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru International Airport) ನಿನ್ನೆ ರಾತ್ರಿ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ರಾತ್ರಿ 8:15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಸಿಬ್ಬಂದಿ ಮೇಲೆ ಆಕ್ರೋಶ ಹೊರ ಹಾಕಿದರು. ತಾಂತ್ರಿಕ ಅಡಚಣೆಯಿಂದಾಗಿ ವಿಮಾನಯಾನ ಕ್ಯಾನ್ಸಲ್ ಮಾಡಲಾಗಿತ್ತು. ಪ್ರಯಾಣಿಕರ ಗಲಾಟೆ ಬಳಿಕ ಪರ್ಯಾಯ ವ್ಯವಸ್ಥೆ ಮಾಡಿ ರಾತ್ರಿ 2:15ಕ್ಕೆ ಬೇರೊಂದು ವಿಮಾನದ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು.

ಇದನ್ನೂ ಓದಿ:  ಸಚಿವ ಬೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ!

ದಟ್ಟ ಮಂಜಿನಿಂದ ಲೋಹದ ಹಕ್ಕಿಗಳ ಪರದಾಟ

ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ಚಳಿ, ಮಂಜು ಹೆಚ್ಚಾಗಿದೆ. ಮಂಜು ಹೆಚ್ಚಾದ ಹಿನ್ನೆಲೆ ವಿಮಾನ ಹಾರಾಟಕ್ಕೂ ತೊಂದರೆಯಾಗುತ್ತಿದೆ. ಇಂದು ಮುಂಜಾನೆ ಕವಿದಿದ್ದ ಮಂಜಿನಿಂದ ವಿಮಾನಗಳ ಹಾರಾಟ ವಿಳಂಬವಾಗಿದೆ. ದೇಶ, ವಿದೇಶಿ ವಿಮಾನಗಳ ‌ವಿಳಂಬದಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮುಂಜಾನೆ 05 ರಿಂದ 07 ಗಂಟೆವರೆಗೂ ದಟ್ಟ ಮಂಜು ಕವಿದಿತ್ತು. ಮಂಜಿನಿಂದಾಗಿ 20ಕ್ಕೂ ಅಧಿಕ ‌ವಿಮಾನಗಳ‌ ಹಾರಾಟ ವಿಳಂಬವಾಗಿದೆ. ಆಗಮನ ಮತ್ತು ನಿರ್ಗಮನ ವಿಮಾನಗಳು ವಿಳಂಬವಾಗಿವೆ. ವಿಮಾನಗಳ ವಿಳಂಬದಿಂದ ಸಮಯಕ್ಕೆ ಸರಿಯಾಗಿ ಹೋಗಲಾಗದೆ ಪ್ರಯಾಣಿಕರು ಪರದಾಡಿದರು. ಮಂಜು ಕಡಿಮೆಯಾದ ನಂತರ ವಿಮಾನಗಳು ಟೇಕ್ ಆಫ್ ಆದವು. ವಿಮಾನಗಳ ವಿಳಂಬದಿಂದ ಕೆಲವು ಪ್ರಯಾಣಿಕರು ಪ್ರಯಾಣ ರದ್ದು ಮಾಡಿ ವಾಪಸ್‌ ತೆರಳಿದ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Sun, 24 December 23