ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಮೂವರು ಎಸ್​ಡಿಪಿಐ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ

| Updated By: ganapathi bhat

Updated on: Aug 15, 2021 | 8:08 PM

ಘಟನೆ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಪೋಲೀಸ್ ಬಂದೋಬಸ್ತ್ ಹೆಚ್ಚಾಗಿದೆ. ದಕ್ಷಿಣಕನ್ನಡ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪುತ್ತೂರಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಪೋಲೀಸರಿಂದ ಅಡಿಷನಲ್ ಎಸ್​ಪಿ ಡಾ. ಶಿವಕುಮಾರ್ ಮಾಹಿತಿ ಪಡೆದಿದ್ದಾರೆ.

ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಮೂವರು ಎಸ್​ಡಿಪಿಐ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ
ಎಸ್​ಡಿಪಿಐ ಕಾರ್ಯಕರ್ತರಿಂದ ಆಕ್ರೋಶ
Follow us on

ಮಂಗಳೂರು: ಇಲ್ಲಿನ ಕಬಕ ಎಂಬಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್​ಡಿಪಿಐನಿಂದ ಅಡ್ಡಿ ವಿಚಾರಕ್ಕೆ ಸಂಬಂಧಿಸಿ ಮೂವರು ಎಸ್​ಡಿಪಿಐ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ. ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ್ದ ಅಝೀಜ್‌. ಕೆ, ಸಮೀರ್ ಅಬ್ದುಲ್ ರೆಹಮಾನ್​ಗೆ​ 14 ದಿನ ನ್ಯಾಯಾಂಗ ಬಂಧನ ಆದೇಶಿಸಲಾಗಿದೆ. ಎಸ್​ಡಿಪಿಐ ಕಾರ್ಯಕರ್ತರು ಕಬಕ ಗ್ರಾಮ ಪಂಚಾಯಿತಿಯ ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದ್ದರು. ವೀರಸಾವರ್ಕರ್ ಚಿತ್ರ ಹಾಕಿದ್ದನ್ನು ವಿರೋಧಿಸಿ ರಥಕ್ಕೆ ತಡೆ ಒಡ್ಡಿದ್ದರು.

ಘಟನೆ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಪೋಲೀಸ್ ಬಂದೋಬಸ್ತ್ ಹೆಚ್ಚಾಗಿದೆ. ದಕ್ಷಿಣಕನ್ನಡ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪುತ್ತೂರಿಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಪೋಲೀಸರಿಂದ ಅಡಿಷನಲ್ ಎಸ್​ಪಿ ಡಾ. ಶಿವಕುಮಾರ್ ಮಾಹಿತಿ ಪಡೆದಿದ್ದಾರೆ. ಪ್ರಭಾರ ಎಸ್​ಪಿ ಬದ್ರಿನಾಥ್, ಪುತ್ತೂರು ನಗರ ಪೋಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದಾರೆ.

ಘಟನೆ ಏನಾಗಿತ್ತು?
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಅಹಿತಕರ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಭ್ರಮದಲ್ಲಿ ಫೋಟೋ ವಿಚಾರಕ್ಕೆ ಜಟಾಪಟಿ ನಡೆದಿದ್ದು, ರಥದಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಎಸ್​ಡಿಪಿಐ (SDPI) ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿತ್ತು. ಈ ವೇಳೆ ರಥಕ್ಕೆ ಅಡ್ಡಪಡಿಸಿದವರ ಮೇಲೆ ಕಾರು ಹತ್ತಿಸುವ ಯತ್ನವೂ ನಡೆದಿದ್ದು ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್​ ಫೋಟೋ ಹಾಕಿದ್ದು ಎಸ್‌ಡಿಪಿಐ ಕಾರ್ಯಕರ್ತರನ್ನು ಕೆರಳಿಸಿದ್ದು, ಅದೇ ಕಾರಣಕ್ಕಾಗಿ ತಕರಾರು ತೆಗೆದಿದ್ದಾರೆ ಎನ್ನಲಾಗಿತ್ತು. ಹೀಗಾಗಿ ರಥಕ್ಕೆ ತಡೆಯೊಡ್ಡಿ ಸಾವರ್ಕರ್ ಬದಲು ಟಿಪ್ಪು ಫೋಟೋ ಹಾಕುವಂತೆ ಒತ್ತಡ ಹೇರಿದ್ದಾರೆ. ಆದರೆ, ಫೋಟೋ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗುತ್ತಾ ಹೋಗಿ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಅಲ್ಲದೇ, ಈ ವೇಳೆ ರಥಕ್ಕೆ ಅಡ್ಡಪಡಿಸಿದವರ ಮೇಲೆ ಕಾರು ಹತ್ತಿಸುವ ಯತ್ನವೂ ನಡೆದು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರು SDPI ಕಾರ್ಯಕರ್ತರನ್ನು ಚದುರಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಆರೋಪಿಗಳನ್ನು ಬಂಧಿಸಿಲು ಗೃಹಮಂತ್ರಿಗೆ ಮನವಿ: ಕೋಟ ಶ್ರೀನಿವಾಸ ಪೂಜಾರಿ

ಪುತ್ತೂರು: ರಥದಲ್ಲಿ ಸಾವರ್ಕರ್​ ಬದಲು ಟಿಪ್ಪು ಫೋಟೋ ಹಾಕಲು ಒತ್ತಡ; ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್​ಡಿಪಿಐ ಕಾರ್ಯಕರ್ತರು