ಮಂಗಳೂರಿನಲ್ಲಿ 1,725 ಕೆಜಿಗೂ ಹೆಚ್ಚು ಅನಧಿಕೃತ ಸ್ಫೋಟಕ ವಶಕ್ಕೆ; ಆರೋಪಿ ಬಂಧನ

ವಶಪಡಿಸಿಕೊಳ್ಳಲಾದ ಸ್ಪೋಟಕ‌ಗಳ ಮೌಲ್ಯ ಒಟ್ಟು 1ಲಕ್ಷ 11 ಸಾವಿರ ಎಂದು ಅಂದಾಜಿಸಲಾಗಿದೆ.

ಮಂಗಳೂರಿನಲ್ಲಿ 1,725 ಕೆಜಿಗೂ ಹೆಚ್ಚು ಅನಧಿಕೃತ ಸ್ಫೋಟಕ ವಶಕ್ಕೆ; ಆರೋಪಿ ಬಂಧನ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on:Aug 16, 2021 | 5:56 PM

ಮಂಗಳೂರು: ಪರವಾನಿಗೆ ಇಲ್ಲದೇ ಅನಧಿಕೃತವಾಗಿ ದಾಸ್ತಾನು ಇಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ಮಂಗಳೂರು ನಗರದ ಬಂದರು ಠಾಣಾ ಪೋಲಿಸರ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. 1,725 ಕೆಜಿಗೂ ಹೆಚ್ಚು ಸ್ಫೋಟಕ ವಶಕ್ಕೆ ಪಡೆಯಲಾಗಿದ್ದು, ಒಟ್ಟು 1ಲಕ್ಷ 11 ಸಾವಿರ ಮೌಲ್ಯದ ಸ್ಪೋಟಕ‌ಗಳೆಂದು ಅಂದಾಜಿಸಲಾಗಿದೆ. ಸ್ಫೋಟಕವನ್ನು ಮಂಗಳೂರು ಬಂದರಿನ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಪರವಾನಿಗೆ ಇಲ್ಲದೇ ಅನಧಿಕೃತವಾಗಿ ದಾಸ್ತಾನು ಇಟ್ಟಿದ್ದ ಆರೋಪಿ ಆನಂದ ಗಟ್ಟಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಲ್ಫರ್ ಪೌಡರ್ 400 ಕೆಜಿ, ಪೊಟ್ಯಾಸಿಯಮ್‌ ನೈಟ್ರೇಟ್ 350 ಕೆಜಿ, ಬೇರಿಯಂ ನೈಟ್ರೇಟ್ 50 ಕೆಜಿ, ಪೊಟ್ಯಾಸಿಯಮ್‌ ಕ್ಲೋರೈಟ್ 395 ಕೆಜಿ, ಅಲ್ಯೂಮಿನಿಯಂ ಪೌಡರ್- 260 ಕೆಜಿ, ಚಾರ್ ಕೋಲ್- 240 ಕೆಜಿ, ಲೀಡ್ ಬಾಲ್ಸ್ 30 ಕೆಜಿ, ಆ್ಯರ್ ಪಿಸ್ತೂಲ್ ಪೆಲೆಟ್ಸ್ ವಶಪಡಿಸಿಕೊಂಡ ಸ್ಫೋಟಕಗಳಾಗಿವೆ. ನಗರದ ಬಂದರು ಏರಿಯಾದಲ್ಲೇ ಗನ್ ಶಾಪ್ ಹೊಂದಿರುವ ಆರೋಪಿ ಆನಂದ ಗಟ್ಟಿಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ರಾಮನಗರ: ಏಕಾಏಕಿ ಸ್ಫೋಟಗೊಂಡ ಕಾರು; ವ್ಯಕ್ತಿ ಸಜೀವ ದಹನ ಏಕಾಏಕಿ ಕಾರು ಸ್ಫೋಟಗೊಂಡು ವ್ಯಕ್ತಿ ಸಜೀವ ದಹನವಾದ ದಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳೆ ಗ್ರಾಮದ ಬಳಿ ನಡೆದಿದೆ. ಮರಳೆ ಗ್ರಾಮದ ಬಳಿ ಕಾರು ಸ್ಫೋಟಗೊಂಡು ದುರಂತ ಸಂಭವಿಸಿದೆ. ಕೆಎ 51, ಪಿ 3384 ನೋಂದಣಿ ಕಾರು ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಸ್ತುಗಳು ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ವಸ್ತುಗಳು ಸಹಿತ ಕಾರಿನ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಕಾರ್ ಸ್ಫೋಟದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾರ್ ಏಕಾಏಕಿ ಹೇಗೆ ಸ್ಫೋಟವಾಯಿತು, ಅದು ಯಾವ ಕಾರ್ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಾರ್​ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ, ವ್ಯಕ್ತಿಯ ಪರಿಚಯದ ಬಗ್ಗೆಯೂ ಮಾಹಿತಿ ಲಭಿಸಿಲ್ಲ. ಪ್ರಕರಣವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

(Mangaluru More than 1725 ​​kg of illegal explosives seized police arrest the accused)

Published On - 4:26 pm, Mon, 16 August 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್