ಪುತ್ತೂರಿನಲ್ಲಿ ಆರ್​​ಎಸ್​ಎಸ್​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್: ಎಸ್ಕಾರ್ಟ್ ವಾಹನ, ಗನ್​ಮ್ಯಾನ್ ಬಿಟ್ಟು ನಳಿನ್​ ಕುಮಾರ್ ಕಟೀಲು ಭಾಗಿ

ಇಂ‌ದು ಮತ್ತು ನಾಳೆ ನಡೆಯಲಿರುವ ಬೈಠಕ್​ನಲ್ಲಿ ಭಾಗವಹಿಸುವಂತೆ ಬಿಜೆಪಿ ಮತ್ತು ಸಂಘಪರಿವಾರದಿಂದ ಹಲವು ಪ್ರಮುಖರಿಗೆ ಆಹ್ವಾನ ನೀಡಿಲಾಗಿದೆ. 

ಪುತ್ತೂರಿನಲ್ಲಿ ಆರ್​​ಎಸ್​ಎಸ್​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್: ಎಸ್ಕಾರ್ಟ್ ವಾಹನ, ಗನ್​ಮ್ಯಾನ್ ಬಿಟ್ಟು ನಳಿನ್​ ಕುಮಾರ್ ಕಟೀಲು ಭಾಗಿ
ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆ
Updated By: ಗಂಗಾಧರ​ ಬ. ಸಾಬೋಜಿ

Updated on: Aug 27, 2022 | 1:05 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಇಂದು ಆರ್​​ಎಸ್​ಎಸ್​ (RSS​)​ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್​ ನಡೆಯುತ್ತಿದೆ. ಬೈಠಕ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗಿದ್ದು, ಎಸ್ಕಾರ್ಟ್ ವಾಹನ, ಗನ್​ಮ್ಯಾನ್ ಬಿಟ್ಟು ಬೈಠಕ್​ಗೆ ಕಟೀಲು ಆಗಮಿಸಿದ್ದಾರೆ. ಆರ್​​ಎಸ್​ಎಸ್​ ಸಹ ಸರಕಾರ್ಯವಾಹಕ ಮುಕುಂದ್‌ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದ್ದು, RSS​​ ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿದಂತೆ 800 ಜನ ಅಪೇಕ್ಷಿತರು ಆರ್​​ಎಸ್​​ಎಸ್​​ ಬೈಠಕ್​ನಲ್ಲಿ ಭಾಗಿಯಾಗಿದ್ದಾರೆ. ಇಂ‌ದು ಮತ್ತು ನಾಳೆ ನಡೆಯಲಿರುವ ಬೈಠಕ್​ನಲ್ಲಿ ಭಾಗವಹಿಸುವಂತೆ ಬಿಜೆಪಿ ಮತ್ತು ಸಂಘಪರಿವಾರದಿಂದ ಹಲವು ಪ್ರಮುಖರಿಗೆ ಆಹ್ವಾನ ನೀಡಿಲಾಗಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಬೈಠಕ್​ ನಡೆಯುತ್ತಿದೆ. ಆದರೆ ಚುನಾವಣೆಯ ಈ ಸಮಯದಲ್ಲಿ ಬೈಕ್ ನಡೆಯುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆರ್.ಎಸ್.ಎಸ್. ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುದೀರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪ್ರಮುಖರು ಮೂರು ದಿನಗಳ ಬೈಠಕ್​ನಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್ 28ರ ಕೊನೆಯ ದಿನದಂದು ಬೈಠಕ್​ನಲ್ಲಿ ಆರ್.ಎಸ್‌.ಎಸ್‌ ದಕ್ಷಿಣ ಪ್ರಾಂತದ ಜವಾಬ್ದಾರಿಗಳ ಬದಲಾವಣೆಯ ಘೋಷಣೆ ಸಾಧ್ಯತೆಯಿದೆ.

ಇದನ್ನೂ ಓದಿ:ಮೋದಿ ಸ್ವಾಗತಕ್ಕೂ ಮುನ್ನ ಸಂಸದರ ಬದಲಾವಣೆಯ ಕೂಗು: ನಳೀನ್ ಕುಮಾರ್ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಸಾಧ್ಯತೆ:

ಇನ್ನೂ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಘಟಕದ ಪುಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:45 pm, Sat, 27 August 22