Tree Scooter: ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!

| Updated By: ಅಕ್ಷತಾ ವರ್ಕಾಡಿ

Updated on: Mar 31, 2023 | 7:00 AM

ಮಂಗಳೂರಿನ ನಿವಾಸಿಯಾಗಿರುವ ರೈತ ಗಣಪತಿ ಭಟ್ ಅವರು ತಯಾರಿಸಿದ ವಿನೂತನವಾದ 'ಟ್ರೀ ಸ್ಕೂಟರ್' ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರಗಳನ್ನು ಏರಲು ಸಹಾಯ ಮಾಡುತ್ತದೆ, ಅಲ್ಲದೆ ರೈತರ ಹಣವನ್ನು ಉಳಿಸುತ್ತದೆ.

Tree Scooter: ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ಟ್ರೀ ಸ್ಕೂಟರ್!
ಟ್ರೀ ಸ್ಕೂಟರ್
Image Credit source: HISTORY TV18.
Follow us on

ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಅದು ಸತ್ಯವೂ ಹೌದು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ ‘ಟ್ರೀ ಸ್ಕೂಟರ್’ ಕಂಡುಹಿಡಿದಿದ್ದಾರೆ. ಕಾರ್ಮಿಕ ಶಕ್ತಿ ಮತ್ತು ಅಡಿಕೆ ಮರಗಳ ಅಕಾಲಿಕ ನಿರ್ವಹಣೆಯು ಕೃಷಿ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಂತರವನ್ನು ಮನಗಂಡ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ, ಇದು ಕಾರ್ಮಿಕರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದಿನಕ್ಕೆ 300 ಅರೆಕಾ ತಾಳೆಗಳನ್ನು ಕಟಾವು ಮಾಡಲು ರೈತರಿಗೆ ಸಹಾಯ ಮಾಡುತ್ತದೆ.

ಟ್ರೀ ಸ್ಕೂಟರ್​ ಯಂತ್ರದ ವಿಶೇಷತೆ:

ಯಂತ್ರವು ಆಸನ ಮತ್ತು ಸೀಟ್-ಬೆಲ್ಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕೈಗಳನ್ನು ಬಳಸದೆ ಊಪಯೋಗಿಸಬಹುದಾಗಿದ್ದು, ಬಳಸಲು ಸುಲಭವಾಗಿದೆ. ಕಾರ್ಮಿಕರು ಇಲ್ಲದಿದ್ದರೂ ನಾವೇ ಊಪಯೋಗಿಸಬಹುದಾಗಿದೆ. ಇದರಿಂದ ಅವಲಂಬನೆಯೂ ಕಡಿಮೆಯಾಗುತ್ತದೆ.ಅಲ್ಲದೆ ಇದು ರೈತರ 20 ಪ್ರತಿಶತದಷ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದು ಬೇರೆ ಎಲ್ಲ ವಿಧಾನಗಳಲ್ಲಿ ಕೊಯ್ಲು ಮಾಡಿದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ಪಡೆಯಲು ಸಹಾಯವಾಗುತ್ತದೆ.

ಇದನ್ನೂ ಓದಿ: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ

ಸಾಂಪ್ರದಾಯಿಕ ವಿಧಾನದಲ್ಲಿ ದಿನಕ್ಕೆ ಕಡಿಮೆ ಮರಗಳಿಗೆ ಏರುವುದರಿಂದ ಕಾರ್ಮಿಕರು ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ ಕೆಲಸ ಮಾಡುತ್ತಿದ್ದರು. ಆದರೆ ಇಂದು ಒಬ್ಬನೇ ಎರಡು ದಿನದಲ್ಲಿ ಕೆಲಸ ಪೂರ್ಣಗೊಳಿಸಬಲ್ಲ. ಇದರಿಂದ ಕೂಲಿ ವೆಚ್ಚದಲ್ಲಿ ವಾರಕ್ಕೆ ಸುಮಾರು 24,000 ರೂಪಾಯಿ ಉಳಿತಾಯವಾಗುತ್ತದೆ ಎಂದು ಗಣಪತಿ ಹೇಳಿದ್ದಾರೆ.

ಯಾವುದೇ ತಾಂತ್ರಿಕ ಅಥವಾ ಎಂಜಿನಿಯರಿಂಗ್ ಹಿನ್ನೆಲೆಯಿಲ್ಲದ ಅವರು ಈ ಸ್ಕೂಟರ್ ಅನ್ನು ತಯಾರಿಸಿದಾಗ ಗ್ರಾಮಸ್ಥರು ಅವರನ್ನು ಹುಚ್ಚ ಎಂದು ಕರೆದಿದ್ದರಂತೆ ಆದರೆ ಅವರ ಆವಿಷ್ಕಾರವು ವೀಳ್ಯದೆಲೆ ಕೊಯ್ಲು ಮಾಡುವಲ್ಲಿನ ತೊಂದರೆಗಳನ್ನು ನಿಭಾಯಿಸಲು ಸಹಾಯ ಮಾಡಿದಾಗ ಈಗ ಜನರಿಗೆ ಅರ್ಥವಾಗಿದೆ ಎನ್ನುತ್ತಾರೆ ಗಣಪತಿ ಭಟ್.

ಲೇಖನ: ಪ್ರೀತಿ ಭಟ್​, ಗುಣವಂತೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ