ಮಂಗಳೂರು: NITK ಬೀಚ್​ನಲ್ಲಿ ಇಬ್ಬರು ಸೋದರಿಯರು ನೀರುಪಾಲು; ಪಿಂಡ ಪ್ರದಾನ ಮಾಡಲು ಬಂದಿದ್ದ ವೇಳೆ ಅವಘಡ

| Updated By: ganapathi bhat

Updated on: Apr 10, 2022 | 3:03 PM

ದುರದೃಷ್ಟವಷಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಹೋದರಿಯರು ಇಬ್ಬರು ಸಾವನ್ನಪ್ಪಿದ್ದಾರೆ. ವೆಂಕಟೇಶ್​ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳೂರು: NITK ಬೀಚ್​ನಲ್ಲಿ ಇಬ್ಬರು ಸೋದರಿಯರು ನೀರುಪಾಲು; ಪಿಂಡ ಪ್ರದಾನ ಮಾಡಲು ಬಂದಿದ್ದ ವೇಳೆ ಅವಘಡ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ನಗರದ ಸಮೀಪ ಇರುವ NITK ಬೀಚ್​ನಲ್ಲಿ ಸೋದರಿಯರು ಇಬ್ಬರು ನೀರುಪಾಲಾದ ದುರ್ಘಟನೆ ಸಂಭವಿಸಿದೆ. ಮಂಗಳೂರಿನ ಶಕ್ತಿನಗರದ ನಿವಾಸಿಗಳಾದ ವೈಷ್ಣವಿ (21), ತ್ರಿಷಾ (17) ಸಾವನ್ನಪ್ಪಿದ್ದಾರೆ. ಪಿಂಡ ಪ್ರದಾನ ಮಾಡಲು ಕುಟುಂಬ ಸದಸ್ಯರ ಜತೆ ಬೀಚ್​ಗೆ ಬಂದಿದ್ದರು. ಕುಟುಂಬ ಸದಸ್ಯರ ಜತೆ ಬೀಚ್​ಗೆ ಬಂದಿದ್ದ ಸಹೋದರಿಯರು ನೀರುಪಾಲಾಗಿದ್ದಾರೆ. ಬೀಚ್​ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಮೂವರು ಕೊಚ್ಚಿಹೋಗಿದ್ದರು ಎಂದು ತಿಳಿದುಬಂದಿದೆ. ಪರಿಸ್ಥಿತಿ ಅರಿತ ಸ್ಥಳೀಯ ಈಜುಗಾರರು, ಹೋಮ್​ಗಾರ್ಡ್​ಗಳು ಮೂವರ ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಮೂವರನ್ನು ಸಮುದ್ರದಿಂದ ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದೆ. ಆದರೆ, ದುರದೃಷ್ಟವಷಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಹೋದರಿಯರು ಇಬ್ಬರು ಸಾವನ್ನಪ್ಪಿದ್ದಾರೆ. ವೆಂಕಟೇಶ್​ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಸಿದ ಈರುಳ್ಳಿ ಬೆಲೆ. ಆತಂಕಗೊಂಡ ರೈತ ನೇಣಿಗೆ ಶರಣು.

ಈರುಳ್ಳಿ ಬೆಲೆ ಕುಸಿದ ಕಾರಣ ಆತಂಕಗೊಂಡ ರೈತ ನೇಣಿಗೆ ಶರಣಾದ ದುರ್ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಸಂಭವಿಸಿದೆ. ಈರುಳ್ಳಿ ಚೀಲಕ್ಕೆ ತುಂಬಿಟ್ಟು ಪಕ್ಕದ ಮರಕ್ಕೆ ರೈತ ನೇಣಿ ಹಾಕಿಕೊಂಡಿದ್ದಾರೆ. ಮಲ್ಲಪ್ಪ (56) ನೇಣಿಗೆ ಶರಣಾದ ದುರ್ದೈವಿ. ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿದ ಸುದ್ದಿ ತಿಳಿದು ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋಗುವ ಬದಲು ನೇಣಿಗೆ ಶರಣಾಗಿದ್ದಾರೆ. ಬಿಳಿಚೋಡು ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆ: ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಲ್ಲೇ ಸಾವು

ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದ ಬಳಿ ನಡೆದಿದೆ. ಡಿಕ್ಕಿ ಹೊಡೆದ ಕಾರಿನ ಎಂಜಿನ್ ಮೇಲೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಸುನಿಲ್ ಮಗದುಮ್ (34) ಮೃತ ದುರ್ದೈವಿ. ಮಹಾಲಿಂಗಪುರದಿಂದ ಚಿಮ್ಮಡ ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರ, ಮುಂದಿನ ವಾಹನ ಸೈಡ್ ಹಾಕಲು ಹೋಗಿ ಕಾರಿಗೆ ಡಿಕ್ಕಿ ಆಗಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೈಲಿನಿಂದ ಹೊರಬಂದು ಒಂದೇ ತಿಂಗಳಿಗೆ ಜೈಲು ಸೇರಿದ ರೌಡಿ

ಜೈಲಿನಿಂದ ಹೊರಬಂದ ಒಂದೇ ತಿಂಗಳಿಗೆ ರೌಡಿ ಒಬ್ಬ ಜೈಲು ಸೇರಿದ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ನಡೆದಿದೆ. ಶ್ರೀರಾಂಪುರ ಠಾಣೆ ಪೊಲೀಸರಿಂದ ಕಾರ್ಯಾಚರಣೆ ವೇಳೆ ರೌಡಿಶೀಟರ್ ನಾರಾಯಣ, ಸಹಚರ ಈಶ್ವರ್ ಬಂಧನ ಮಾಡಲಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಶೀಟರ್​ ಸೇರಿ ಇಬ್ಬರ ಸೆರ ಹಿಡಿಯಲಾಗಿದೆ. ಪೊಲೀಸರು, ಬಂಧಿತರಿಂದ 22 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕುರಿಗಳ ಮೈತೊಳೆಯಲು ಹೋಗಿದ್ದ ದಂಪತಿ ನೀರುಪಾಲು; ಮುಳುಗುತ್ತಿದ್ದ ಪತ್ನಿಯ ರಕ್ಷಿಸಲು ಹೋಗಿ ಪತಿಯೂ ಸಾವು

ಇದನ್ನೂ ಓದಿ: Karnataka Rain: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ

Published On - 2:36 pm, Sun, 10 April 22