ಮಂಗಳೂರು: ದಕ್ಷಿಣ ಕನ್ನಡದ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ (Kateel Durga Parameshwari Temple) ನೂರಾರು ಭಕ್ತರು ದುರ್ಗಾ ಮಾತೆಗೆ ಪೂಜೆ ಸಲ್ಲಿಸುವ ವೇಳೆ ಅನಾದಿ ಕಾಲದ ಸಂಪ್ರದಾಯದಂತೆ ಬೆಂಕಿಯ ಪಂಜನ್ನು ಪರಸ್ಪರ ಎಸೆದು (ಅಗ್ನಿ ಕೇಳಿ) ಸಂಭ್ರಮಿಸಿದರು. ದುರ್ಗಾ ಪರಮೇಶ್ವರಿ ದೇವಿಯ ಸಂತೃಪ್ತಿಗಾಗಿ ಈ ಆಚರಣೆ ಮಾಡಲಾಗುತ್ತದೆ. 8 ದಿನಗಳ ಕಾಲ ನಡೆದ ಜಾತ್ರೋತ್ಸವ ಅಗ್ನಿ ಕೇಳಿಯೊಂದಿಗೆ ತೆರೆ ಕಂಡಿದೆ. ಈ ಜಾತ್ರೋತ್ಸವದ ವಿಶೇಷತೆಯೇ ಅಗ್ನಿಕೇಳಿ. ದುಷ್ಟ ಸಂಹಾರದ ಬಳಿಕ ಅಗ್ನಿಪ್ರಿಯೆ ದುರ್ಗಾ ಪರಮೇಶ್ವರಿ ಸಂತುಷ್ಟಗೊಂಡ ಪ್ರತೀಕವಾಗಿ ಈ ಅಗ್ನಿ ಕೇಳಿಯನ್ನು ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ಅತ್ತೂರು- ಕೊಡೆತ್ತೂರು ಊರಿನ ಜನರು ಪಾಲ್ಗೊಳ್ಳುತ್ತಾರೆ.
ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಒಲಿಸಿಕೊಳ್ಳಲು ಧೋತಿ ಧರಿಸಿದ ಪುರುಷರು ಶತಮಾನಗಳಷ್ಟು ಹಳೆಯದಾದ ವಿಶಿಷ್ಟವಾದ ಆಚರಣೆಯಾದ ‘ಅಗ್ನಿ ಕೇಳಿ’ಯಲ್ಲಿ ಒಬ್ಬರಿಗೊಬ್ಬರ ಮೇಲೆ ಪಂಜುಗಳನ್ನು ಎಸೆದು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಏನಿದು ಆಚರಣೆ?:
“ತೂಥೇಧಾರ” ಅಥವಾ “ಅಗ್ನಿ ಕೇಳಿ” ಎಂದು ಕರೆಯಲಾಗುವ ಈ ಆಚರಣೆಯು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ದೇವಸ್ಥಾನದಲ್ಲಿ ಸತತ 8 ದಿನಗಳ ಕಾಲ ನಡೆಯುವ ಮಹಾ ಉತ್ಸವದ ಭಾಗವಾಗಿ ನಡೆಯುತ್ತದೆ. ಮೇಷ ಸಂಕ್ರಮಣ ದಿನದ ಹಿಂದಿನ ರಾತ್ರಿ ಪ್ರಾರಂಭವಾಗುವ 8 ದಿನಗಳ ಆಚರಣೆಯು ವಿಷಯಾಧಾರಿತ ಪ್ರದರ್ಶನಗಳ ಸರಣಿಯನ್ನು ಒಳಗೊಂಡಿದೆ. ಅಗ್ನಿ ಕೇಳಿ ಹಬ್ಬದ ಎರಡನೇ ರಾತ್ರಿ ಈ ಆಚರಣೆ ಇರುತ್ತದೆ.
#WATCH | Devotees hurled fire at each other as part of a fire ritual ‘Thoothedhara’ or ‘Agni Kheli’ to pay reverence to goddess Durga at Sri Durgaparameshwari temple in Kateel, Karnataka (22.04) pic.twitter.com/q4SHMFAGak
— ANI (@ANI) April 23, 2022
ಆಚರಣೆಯ ಪ್ರಕಾರ, ಪುರುಷರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡೂ ತಂಡದವರು ಎದುರು ಬದುರಾಗಿ ನಿಂತು ಸುಡುವ ಪಂಜನ್ನು ದೂರದಿಂದ ಪರಸ್ಪರ ಎಸೆಯುತ್ತಾರೆ. ಗುಂಪಿನಲ್ಲಿರುವ ಅಷ್ಟೂ ಜನರ ಮೇಲೆ ಎಸೆಯಲು ಪ್ರತಿಯೊಬ್ಬರಿಗೆ 5 ಉರಿಯುವ ಪಂಜನ್ನು ಎಸೆಯಲು ಅನುಮತಿ ಇದೆ. ನಂದಿನಿ ನದಿಯ ಮಧ್ಯದಲ್ಲಿರುವ ದ್ವೀಪದಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.
ಕಟೀಲು ಸಮೀಪದ ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ಬೆಂಕಿಯ ಜ್ವಾಲೆಗಳಿರುವ ಪಂಜುಗಳನ್ನು ಪರಸ್ಪರ ಎಸೆದುಕೊಳ್ಳುತ್ತಾರೆ. ಆದರೆ, ಈವರೆಗೆ ಈ ಬೆಂಕಿಯ ಪಂಜಿನ ಹೊಡೆದಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವರು ಹಾಕಿಕೊಂಡ ಬಟ್ಟೆಗೂ ಬೆಂಕಿ ತಗುಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಇದಕ್ಕೆ ದುರ್ಗಾ ಪರಮೇಶ್ವರಿ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ. ಈ ಆಟದಲ್ಲಿ ಭಾಗವಹಿಸಲೆಂದೇ ದೂರದ ಊರಿನಲ್ಲಿರುವ ಗ್ರಾಮದ ಜನರು ಬಂದು ಸೇರುತ್ತಾರೆ.
ಇದನ್ನೂ ಓದಿ: ಕಟೀಲು ದುರ್ಗಾ ಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ? ಗೊಂದಲಕ್ಕೆ ಇಲ್ಲಿದೆ ಉತ್ತರ
ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ