ದಾವಣಗೆರೆ: ರಾಜ್ಯದಲ್ಲಿ ಎಲ್ಲಾ ರೀತಿಯ ವಿವಾದಗಳು ಬಗೆಹರಿದಿವೆ. ರಾಜ್ಯದಲ್ಲಿ ಯಾವುದೇ ಗಲಭೆ, ಹಿಜಾಬ್ ವಿವಾದ ಇಲ್ಲ. ಸದ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇದೆ ಎಂದು ಎಸ್ಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿದ್ದು ಸರಿಯಲ್ಲ. ಮುತ್ತಿಗೆ ಹಾಕಿರೋರು ಹೊರಗಿನಿಂದ ಬಂದಿರುವ ಮಾಹಿತಿಯಿದೆ. ದಾವಣಗೆರೆಯಿಂದಲೂ ಮೂವರು ಬಂದಿರುವ ಬಗ್ಗೆ ಮಾಹಿತಿಯಿದ್ದು, ಪ್ರತಿಭಟನೆಗೂ ಮುನ್ನ ಯಾವುದೇ ಅನುಮತಿ ಪಡೆದಿಲ್ಲ. ಈ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ: Parineeti : ಮುಂಬೈ ವಿಮಾನ ನಿಲ್ದಾಣದಲ್ಲಿ ಚಿಕ್ ಲುಕ್ ನಲ್ಲಿ ಕಂಡ ನಟಿ ಪರಿಣಿತಿ
ಉಗ್ರನ ಬಂಧನದ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ
ಬೆಂಗಳೂರಿನಲ್ಲಿ ಉಗ್ರ ತಾಲಿಬ್ ಹುಸೇನ್ ಬಂಧನ ವಿಚಾರವಾಗಿ ಮಾತನಾಡಿದ್ದು, ಉಗ್ರನ ಬಂಧನದ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾಶ್ಮೀರದ ಶ್ರೀನಗರ ಪೊಲೀಸರು ಉಗ್ರನನ್ನ ಕರೆದೊಯ್ದಿದ್ದಾರೆ. ದೇಶದ ರಕ್ಷಣಾ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಮಾತನಾಡಲ್ಲ. ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ಪಿಎಸ್ಐ ನೇಮಕಾತಿ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ
ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿಯಲ್ಲಿ ನಡೆದ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಇಂತಹ ಅವ್ಯವಹಾರ ಮೊದಲಿನಿಂದಲೇ ನಡೆದುಕೊಂಡು ಬಂದಿದೆ. ಆದರೆ ಅಂತವರು ಎದೆ ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡುತ್ತೇವೆ. ನಮ್ಮ ಇಲಾಖೆ ಡಿವೈಎಸ್ಪಿಗಳನ್ನೆ ಬಂಧಿಸಿದ್ದೇವೆ. ತನಿಖಾ ತಂಡ ಕೂಡಾ ಚೆನ್ನಾಗಿ ಕೆಲ್ಸಾ ಮಾಡುತ್ತಿದ್ದೆ. ಉಗ್ರನ ಬಂಧನ ಹೆಚ್ಚು ಮಾತಾಡಲ್ಲ. ಬೆಂಗಳೂರನಲ್ಲಿ ಉಗ್ರನ ಬಂಧನ ಹಿನ್ನೆಲೆ ಶ್ರೀನಗರ ಪೊಲೀಸರು ಓರ್ವನನ್ನ ಕರೆದುಕೊಂಡು ಹೋಗಿದ್ದಾರೆ. ನಮ್ಮ ಪೊಲೀಸರು ಸಹ ಶ್ರೀನಗರ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದಾರೆ. ದೇಶದ ಸಮಗ್ರತೆ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಸೆಟ್ ಲೈಟ್ ಕಾಲ್ ವಿಚಾರ ತನಿಖೆಯಾಗುತ್ತಿದೆ. ಈಗಾಗಲೇ ಶಿವಮೊಗ್ಗ ಸೇರಿದಂತೆ ಕೆಲ ಕಡೆ ಸೆಟ್ ಲೈಟ್ ಕಾಲ್ ಮಾತಾಡಿದ್ದು ಗೊತ್ತಾಗಿದೆ. ಇದರ ಬಗ್ಗೆ ತನಿಖೆ ನಡೆದಿದೆ. ಕೇಂದ್ರ ಸರ್ಕಾರದ ಎಜೆನ್ಸಿ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:53 pm, Wed, 8 June 22