ದಾವಣಗೆರೆಯನ್ನ ಕರ್ನಾಟಕದ ಮ್ಯಾಂಚೆಸ್ಟರ್ (Davanagere Manchester Fame) ಎನ್ನುತ್ತಿದ್ದರು. ಲಂಡನ್ ನಗರದಲ್ಲಿ ಗ್ರಾಹಕರು ಡಿಸಿಎಂ ಬಟ್ಟೆ ಕೇಳಿ ಪಡೆಯುತ್ತಿದ್ದರು. ಡಿಸಿಎಂ ಅಂದ್ರೆ ದಾವಣಗೆರೆ ಕಾಟನ್ ಮಿಲ್ ಬಟ್ಟೆ. ಮಿಲ್ ಗಳೆಲ್ಲ ಮುಚ್ಚಿ ಹೋಗಿವೆ. ಮಿಲ್ ಗಳ ಜಾಗದಲ್ಲಿ ಲೇ ಔಟ್ ಆಗಿವೆ. ಇದರ ಹೊರತಾಗಿಯೂ ಮ್ಯಾಂಚೆಸ್ಟರ್ ಖ್ಯಾತಿ ಇಲ್ಲಿನ್ನೂ ಜೀವಂತವಾಗಿತ್ತು. ಕಾರಣ ಇಲ್ಲೊಂದು ಕಾಟನ್ ಮಿಲ್ (Cotton Mills) ಉಳಿದಿತ್ತು. ಆದರೆ ಅದೂ ಈಗ ಇತಿಹಾಸದ ಪುಟ ಸೇರುವುದು ಬಹುತೇಕ ಖಚಿತವಾಗಿದೆ. ಇಲ್ಲಿದೆ ನೋಡಿ ಕಾರ್ಮಿಕರ ಕಣ್ಣೀರು (Women Workers) ಸ್ಟೋರಿ.
ದಾವಣಗೆರೆಯಲ್ಲಿ ಎಲ್ಲಾ ಕಾಟನ್ ಮಿಲ್ ಗಳು ಮುಚ್ಚಿ ಹೋಗಿವೆ. ಆದರೆ ಅದೊಂದು ಮಾತ್ರ ಜೀವಂತವಿತ್ತು. ಅದು ಈಗ ಮತ್ತೆ ಸುದ್ದಿಯಲ್ಲಿದೆ. ಮೊನ್ನೆ ಭಾನುವಾರ ಬೆಳಿಗ್ಗೆ ಇಲ್ಲಿ ನೂರಾರು ಮಹಿಳೆಯರು ಹೋರಾಟಕ್ಕೆ ಸಜ್ಜಾಗಿದ್ದರು. ಬಹುತೇಕರು ಭಾವುಕರಾಗಿದ್ದರು. ಕಾರಣ ಭಾನುವಾರವರೆಗೂ ಕೆಲ್ಸಾ ಮಾಡುತ್ತಿದ್ದ ಮಹಿಳೆಯರಿಗೆ ಇನ್ಮುಂದೆ ಕೆಲಸ ಇಲ್ಲಾ ಎಂಬ ವಿಚಾರ ಕೇಳಿ ತೀವ್ರ ಆತಂಕಗೊಂಡಿದ್ದರು. ಕಾರಣ ಇಲ್ಲಿ ಅವರ 18 ವಯಸ್ಸಿನಿಂದ 40 ವಯಸ್ಸಿನವರೆಗೆ ದುಡಿದಿದ್ದಾರೆ ಈ ಮಹಿಳಾ ಕಾರ್ಮಿಕರು.
ಅವರೆಲ್ಲ ತಮ್ಮ ಇಡಿ ಜೀವನವನ್ನು ಆ ಮಿಲ್ ಕೆಲಸದಲ್ಲಿ ಹಾಕಿದ್ದಾರೆ. ಮದ್ವೆ, ಮಕ್ಕಳ ಪಾಲನೆ, ಅವರ ಶಿಕ್ಷಣ… ಹೀಗೆ ಹತ್ತು ಹಲವಾರು ಸಂಬಂಧ ಇರುವುದು ಆಂಜನೇಯ ಕಾಟನ್ ಮಿಲ್ ಜೊತೆ. ಮೊದಲು ಇಲ್ಲಿ ಒಂದೇ ಯೂನಿಟ್ ಇತ್ತು. ಈಗ ಮೂರು ಯೂನಿಟ್ ಆಗಿವೆ. ಐದರಿಂದ ಆರು ನೂರು ಜನ ಬದುಕು ಕಟ್ಟಿಕೊಂಡಿದ್ದಾರೆ ಈ ಕಾಟನ್ ಮಿಲ್ ನಲ್ಲಿ.
Also Read: ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಅಡುಗೆ ಮಾಡುವುದಕ್ಕೆ ಲಾಯಕ್ಕು: ಶಾಮನೂರು ಶಿವಶಂಕರಪ್ಪ
ಈ ವಯಸ್ಸಿನಲ್ಲಿ ಯಾರು ಕೆಲ್ಸಾ ಕೊಡುತ್ತಾರೆ. ಈ ಕೆಲ್ಸಾ ಬಿಟ್ಟರೇ ನಮಗೆ ಬೇರೆ ಕೆಲ್ಸಾ ಬರಲ್ಲ. ಇನ್ನಷ್ಟು ದಿನ ನಮಗೆ ಕೆಲ್ಸಾ ಕೊಡಿ ಎಂಬುದು ಮಹಿಳೆಯರ ಆಗ್ರಹವಾಗಿತ್ತು. ಇದು ಒಂದು ರೀತಿಯಲ್ಲಿ ದಾವಣಗೆರೆ ಅಂದ್ರೆ ಮ್ಯಾಂಚೆಸ್ಟರ್ ಬಾಂಧವ್ಯದ ಕೊನೆಯ ಕೊಂಡಿ ಆಗಿತ್ತು. ಅದು ಕೂಡಾ ಬೀಗ ಹಾಕುವ ಸ್ಥಿತಿಗೆ ಬಂದಿದೆ. ಐದು ನೂರು ಕುಟುಂಬಗಳು ಬೀದಿಪಾಲು ಆಗುತ್ತಿವೆ.
ಒಂದು ಕಾಲದಲ್ಲಿ ಲಂಡನ್ ನಗರದಲ್ಲಿ ಡಿಸಿಎಂ ಬಟ್ಟೆ ಕೇಳಿ ಖರೀದಿಸುತ್ತಿದ್ದರು ಜನ. ಜಾಗತಿಕ ಮಟ್ಟದಲ್ಲಿ ಅಷ್ಚೊಂದು ಪ್ರಸಿದ್ಧಿ ಪಡೆದಿತ್ತು. ಡಿಸಿಎಂ ಅಂದ್ರೆ ದಾವಣಗೆರೆ ಕಾಟನ್ ಮಿಲ್ ಅಂತಾ. ಈ ಮಿಲ್ಲಿನ ಬಟ್ಟೆ ಅಂದ್ರೆ ಪ್ರಸಿದ್ಧ. ದಾವಣಗೆರೆಯಲ್ಲಿ ಡಿಸಿಎಂ, ಚಂದ್ರೋದಯ ಕಾಟನ್ ಮಿಲ್, ಗಣೇಶ್ ಮಿಲ್ ಹೀಗೆ ಹಲವಾರು ಕಾಟನ್ ಮಿಲ್ ಗಳಿದ್ದವು. ಅವು ಮುಚ್ಚಿ ಈಗ ಆ ಸ್ಥಳದಲ್ಲಿ ಪ್ರತಿಷ್ಠಿತ ಬಡಾವಣೆಗಳು ತಲೆ ಎತ್ತಿವೆ. ಈಗ ಉಳಿದಿದ್ದು ಆಂಜನೇಯ ಕಾಟನ್ ಮಿಲ್ ಮಾತ್ರ. ಅದು ಸಹ ಬಂದ್ ಆಗಿದೆ. ಜವಳಿ ಉದ್ಯಮವೇ ದಾವಣಗೆರೆ ಮಟ್ಟಿಗೆ ಇತಿಹಾಸ ಪುಟ ಸೇರಿದೆ. ಮಹಿಳೆಯರ ಹೋರಾಟದ ಹಿನ್ನೆಲೆ ಕಾಟನ್ ಮಿಲ್ ಕಾರ್ಮಿಕ ಇಲಾಖೆ ಆಯುಕ್ತೆ ವೀಣಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹತ್ತಾರು ವರ್ಷಗಳ ಕಾಲ ಅಂಜನೇಯ ಕಾಟನ್ ಮಿಲ್ ನಲ್ಲಿ ಇವರೆಲ್ಲಾ ಸೇವೆ ಸಲ್ಲಿಸಿದ್ದಾರೆ. ಈ ಮಿಲ್ ನಂಬಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಕಾರ್ಮಿಕರು ಇಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಈಗ ಕಾಟನ್ ಮಿಲ್ ಬಂದ್ ಆದ್ರೆ ಇವರ ಬದುಕು ಹೇಗೆ. ಇಷ್ಟಕ್ಕೂ ಮಿಲ್ ಬಂದ್ ಆದ್ರೆ ಸರ್ಕಾರದ ಸೌಲಭ್ಯ ಹಾಗೂ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಇಲ್ಲಿ ಕೊಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Tue, 2 April 24