ದಾವಣಗೆರೆ: ಪರಿಚಯಸ್ಥರ ರೀತಿಯಲ್ಲಿ ಮನೆಗೆ ನುಗ್ಗಿ ಕಳ್ಳತನ(Theft) ಮಾಡುತ್ತಿದ್ದ ಕಿಲಾಡಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಲಗ್ನ ಪತ್ರಿಕೆ ನೀಡಲು ಬಂದಿರುವುದಾಗಿ ಹೇಳಿ ಕೆಟಿಜೆ ನಗರದ ನಾಗರತ್ನಮ್ಮ ಎಂಬ ಮಹಿಳೆಯ ಚಿನ್ನದ ಸರ ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ ಹಿನ್ನೆಲೆ ಮನೆಯಲ್ಲಿನ ಮೊಬೈಲ್ ಕದ್ದು ಪರಾರಿಯಾಗಿದ್ದರು. ಈ ಕುರಿತು ದಾವಣಗೆರೆ(Davanagere)ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಇದೀಗ ನಗರದ ರಾಮನಗರದ ನಿವಾಸಿಗಳಾದ ಮಂಜುನಾಥ ಭಜಂತ್ರಿ(24) ಹಾಗೂ ಮಂಜುನಾಥ ಪಿ (23) ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ನಿತ್ಯ ಜಿಲ್ಲೆಯ ಮಹಿಳಾ ಕಾಲೇಜು ಹಾಗೂ ಮಹಿಳಾ ಹಾಸ್ಟೆಲ್ಗಳಿಗೆ ಕಾಲೇಜ್ ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ ಎಂದು ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಹೋಗಿ ವಿದ್ಯಾರ್ಥಿನಿಯರ ಹಾಗೂ ಮಹಿಳಾ ಹಾಸ್ಟೆಲ್ ಸಿಬ್ಬಂದಿ ಜೊತೆ ಸಂವಹನ ನಡೆಸಿ, ತುರ್ತು ಸೇವೆಗೆ 112 ರ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಇನ್ನು ದಾವಣಗೆರೆ ನಗರ ಹಾಗೂ ಗ್ರಾಮಾಂತರ ಹಾಗೂ ಚನ್ನಗಿರಿ ಹೀಗೆ ಮೂರು ವಿಭಾಗದಲ್ಲಿ 245 ಮಹಿಳಾ ಕಾಲೇಜ್ ಹಾಗೂ ಹಾಸ್ಟೆಲ್ಗಳಿವೆ. ಪ್ರತಿಯೊಂದು ಮಹಿಳಾ ಕಾಲೇಜ್ ಹಾಸ್ಟೆಲ್ಗಳಿಂದ ಮಾಹಿತಿ ಅಪ್ ಡೆಟ್ ಮಾಡುವುದು ಕಡ್ಡಾಯ ಆಗಬೇಕೆಂದು ಎಸ್ಪಿ ಖಡಕ್ ಸೂಚನೆ ನೀಡಿದ್ದಾರೆ.