ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಮುಂದೆ ಕಣ್ಣೀರು ಹಾಕಿಲ್ಲ. ಆತ್ಮಸಾಕ್ಷಿಯಾಗಿ ಹೇಳುವೆ ಸಚಿವ ಸ್ಥಾನಕ್ಕೆ ಕಣ್ಣೀರು ಹಾಕಿಲ್ಲ. ನಾನು ಹುಟ್ಟುವಾಗ ಶಾಸಕನಾಗಿ ಹುಟ್ಟಿಲ್ಲ, ಕಣ್ಣೀರು ಯಾಕೆ ಹಾಕಲಿ? ಎಂದು ದಾವಣಗೆರೆಯಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಬುಧವಾರ (ಆಗಸ್ಟ್ 18) ಪ್ರಶ್ನೆ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ತಂದೆಯಂತೆ, ಬಸವರಾಜ ಬೊಮ್ಮಾಯಿ ಸಹೋದರನ ರೀತಿ. ಸಂಘಟನೆ ತಾಯಿ ಇದ್ದಂತೆ, ಹೀಗಾಗಿ ನಾನು ಆಶಾವಾದಿ. ನನಗೆ ಸಚಿವ ಸ್ಥಾನ ಸಿಕ್ಕಿಲ್ಲ, ಆದರೆ. ಸಿಗುತ್ತದೆ ಎಂಬ ಭರವಸೆ ಇದೆ. 4 ಸ್ಥಾನ ಉಳಿದಿವೆ, ಜಿಲ್ಲೆಗೆ 1 ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇನೆ. ಜಿಲ್ಲೆಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಸ್ಥಾನ ಸಿಗದ ಕಾರಣ ನಾನು ಅತೃಪ್ತನೂ ಅಲ್ಲ ಹಾಗೂ ಸಂಪೂರ್ಣ ತೃಪ್ತನೂ ಅಲ್ಲ. ಯಡಿಯೂರಪ್ಪ ಅವರನ್ನ ಪಕ್ಷದ ವರಿಷ್ಠರು ಗೌರವುಸುತ್ತಾರೆ. ದೇಶದಲ್ಲಿ ನರೇಂದ್ರ ಮೋದಿ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ಹೆಸರು ಇದೆ. ಯಡಿಯೂರಪ್ಪ ಅವರಿಗೆ ಯಾರು ರಾಜೀನಾಮೆ ನೀಡಿ ಎಂದು ಹೇಳಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್ ವೈ ಕಣ್ಣೀರು ಹಾಕಿದ್ದು ನನಗೆ ತೀವ್ರವಾಗಿ ಬೇಸರ ಆಗಿದೆ. ಅವರು ಎರಡು ವರ್ಷದ ಸಾಧನೆ ಹೇಳುವಾಗ ಕಣ್ಣೀರು ಹಾಕಿದ್ದರು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ತಾಲಿಬಾನಿಗಳೊಂದಿಗೆ ಚರ್ಚಿಸಬೇಕು ಎಂಬ ಅಸಾಸುದ್ದೀನ್ ಓವೈಸಿ ಹೇಳಿಕೆಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಓವೈಸಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದೇಶದ್ರೋಹಿಗಳು ವಿರೋಧಿ ಹೇಳಿಕೆ ನೀಡುತ್ತಾರೆ. ತಾಲಿಬಾನ್‌ಗಳ ಜತೆ ಮಾತನಾಡುವ ಅಗತ್ಯವೇನಿದೆ. ಪಾಕಿಸ್ತಾನಕ್ಕೆ ಯಾವ ರೀತಿ ಪ್ರಧಾನಿ ಉತ್ತರ ನೀಡಿದ್ರೋ. ಅದೆ ರೀತಿ ತಾಲಿಬಾನ್‌ಗಳಿಗೆ ಕೂಡ ಉತ್ತರ ನೀಡುತ್ತಾರೆ. ಓವೈಸಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು
ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತೇನೆ ಎಂದು ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆಯ ವೇಳೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳು ಹೂಗುಚ್ಛ ತಂದ್ರೆ ಅವಕಾಶವಿಲ್ಲ; ಆದರೆ ಸಿಎಂ ನಿವಾಸಕ್ಕೆ ಬೊಕ್ಕೆ ಕೊಂಡೊಯ್ದ ಎಂಪಿ ರೇಣುಕಾಚಾರ್ಯ
ಸಂಪುಟದಲ್ಲಿ ಸಿಗದ ಸ್ಥಾನ..ಮನಸಿಗೆ ಬೇಸರ; ಅರುಣ್ಸಿಂಗ್ರನ್ನು ಭೇಟಿ ಮಾಡಿದ ರೇಣುಕಾಚಾರ್ಯಗೆ ಸಿಕ್ಕಿತೊಂದು ಭರವಸೆ !