ಅಭಿಮಾನಿಗಳು ಹೂಗುಚ್ಛ ತಂದ್ರೆ ಅವಕಾಶವಿಲ್ಲ; ಆದರೆ ಸಿಎಂ ನಿವಾಸಕ್ಕೆ ಬೊಕ್ಕೆ ಕೊಂಡೊಯ್ದ ಎಂಪಿ ರೇಣುಕಾಚಾರ್ಯ

ಸಚಿವ ಸ್ಥಾನಕ್ಕಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರೇಣುಕಾಚಾರ್ಯ, ದೆಹಲಿಯಿಂದ ಹಿಂದಿರುಗಿದ ಬಳಿಕ ಸಿಎಂ ಬೊಮ್ಮಾಯಿ ಭೇಟಿ ಆಗಿದ್ದಾರೆ. ಸಿಎಂ ಜತೆ ಸುಮಾರು ಅರ್ಧಗಂಟೆ ರೇಣುಕಾಚಾರ್ಯ ಚರ್ಚೆ ನಡೆಸಿದ್ದಾರೆ.

ಅಭಿಮಾನಿಗಳು ಹೂಗುಚ್ಛ ತಂದ್ರೆ ಅವಕಾಶವಿಲ್ಲ; ಆದರೆ ಸಿಎಂ ನಿವಾಸಕ್ಕೆ ಬೊಕ್ಕೆ ಕೊಂಡೊಯ್ದ ಎಂಪಿ ರೇಣುಕಾಚಾರ್ಯ
ಬಸವರಾಜ ಬೊಮ್ಮಾಯಿ ಹಾಗೂ ಎಂಪಿ ರೇಣುಕಾಚಾರ್ಯ
Follow us
TV9 Web
| Updated By: ganapathi bhat

Updated on:Aug 13, 2021 | 9:00 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವೇಳೆ ಹೂಗುಚ್ಛ, ಹಾರ ಬೇಡ ಎಂದು ಆದೇಶ ನೀಡಲಾಗಿದೆ. ಆದರೂ ಸಿಎಂ ನಿವಾಸದೊಳಗೆ ಹೂಗುಚ್ಛಗಳು ಬರುತ್ತಿರುವುದು ಕಂಡುಬಂದಿದೆ. ಸಿಎಂ ಬೊಮ್ಮಾಯಿಗೆ ನೀಡಲು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಬೊಕ್ಕೆ ತಂದಿದ್ದಾರೆ. ಸಾರ್ವಜನಿಕರು, ಅಭಿಮಾನಿಗಳು ಬೊಕ್ಕೆ ತಂದ್ರೆ ಅವಕಾಶವಿಲ್ಲ ಎಂದು ಹೇಳಲಾಗುತ್ತದೆ. ಆದರೆ ರೇಣುಕಾಚಾರ್ಯಗೆ ಪೊಲೀಸರು ಬೊಕ್ಕೆ ತರಲು ಅವಕಾಶ ನೀಡಿದ್ದಾರೆ. ಹೂಗುಚ್ಛ ತಂದಿದ್ದ ಅಭಿಮಾನಿ ವಾಪಸ್ ಕಳಿಸಿದ ಪೊಲೀಸರು, ರಾಜಕಾರಣಿಗಳಿಗೆ ಅವಕಾಶ ನೀಡಿರುವುದು ತಿಳಿದುಬಂದಿದೆ.

ಸಚಿವ ಸ್ಥಾನಕ್ಕಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರೇಣುಕಾಚಾರ್ಯ, ದೆಹಲಿಯಿಂದ ಹಿಂದಿರುಗಿದ ಬಳಿಕ ಸಿಎಂ ಬೊಮ್ಮಾಯಿ ಭೇಟಿ ಆಗಿದ್ದಾರೆ. ಸಿಎಂ ಜತೆ ಸುಮಾರು ಅರ್ಧಗಂಟೆ ರೇಣುಕಾಚಾರ್ಯ ಚರ್ಚೆ ನಡೆಸಿದ್ದಾರೆ. ಸಿಎಂ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ತೆರಳಿದ್ದಾರೆ.

ಸರ್ಕಾರದ ಆದೇಶ ಪ್ರಕಟ ರಾಜ್ಯ ಸರ್ಕಾರದ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ನೀಡದಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಪೇಟ, ಶಾಲು ಸೇರಿದಂತೆ ಅನಗತ್ಯ ಖರ್ಚುಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿತ್ತು. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿತ್ತು. ಸರ್ಕಾರದ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ನೀಡದಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಿಸಲಾಗಿತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದ್ದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

ಸಿಎಂ ಈ ಆದೇಶವನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸರ್ಕಾರಿ ಆದೇಶ ಜಾರಿ ಮಾಡಿದ್ದರು. ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಹೂಗುಚ್ಚ, ಹಾರ, ತುರಾಯಿ ನಿಷೇಧ ಹಿಂಪಡೆಯುವಂತೆ ಆಗ್ರಹ; ಆಗಸ್ಟ್ 12ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಪುಷ್ಪ ಬೆಳೆಗಾರರ ಸಂಘ ನಿರ್ಧಾರ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಪೇಟ, ಶಾಲುಗೆ ಬ್ರೇಕ್; ಹೂ ಗುಚ್ಚದ ಬದಲು ಕನ್ನಡ ಪುಸ್ತಕ ನೀಡಿ – ರಾಜ್ಯ ಸರ್ಕಾರ ಆದೇಶ

(MP Renukacharya enters CM Basavaraj Bommai House with Garland)

Published On - 8:52 pm, Fri, 13 August 21