POCSO Act No Bail: ಪೋಕ್ಸೋ ಆರೋಪಿಯಿಂದ ಲಂಚ ಪಡೆಯುತ್ತಿದ್ದ ಅಭಿಯೋಜಕಿ ರೇಖಾ ಅರೆಸ್ಟ್, ಜಾಮೀನು ಕೊಡೋಲ್ಲ ಎಂದ ಕೋರ್ಟ್​​​

| Updated By: ಆಯೇಷಾ ಬಾನು

Updated on: Feb 18, 2023 | 11:36 AM

ರೇಖಾ ಕೊಟ್ರಗೌಡ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಎಸ್​ಪಿಪಿ ರೇಖಾ ಕೊಟ್ರಗೌಡರವರು ದಾವಣಗೆರೆ ಜಿಲ್ಲಾ ಸೆಷನ್ಸ್​ ಹಾಗೂ ವಿಶೇಷ ಲೋಕಾಯುಕ್ತ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

POCSO Act No Bail: ಪೋಕ್ಸೋ ಆರೋಪಿಯಿಂದ ಲಂಚ ಪಡೆಯುತ್ತಿದ್ದ ಅಭಿಯೋಜಕಿ ರೇಖಾ ಅರೆಸ್ಟ್, ಜಾಮೀನು ಕೊಡೋಲ್ಲ ಎಂದ ಕೋರ್ಟ್​​​
ಎಸ್​ಪಿಪಿ ರೇಖಾ ಕೊಟ್ರಗೌಡ
Follow us on

ದಾವಣಗೆರೆ: ಲಂಚ (bribe) ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಅರೆಸ್ಟ್ ಆಗಿದ್ದ ಸರ್ಕಾರಿ ವಿಶೇಷ ಅಭಿಯೋಜಕಿಯಾಗಿರುವ (Special public prosecutor) ರೇಖಾ ಕೊಟ್ರಗೌಡ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಎಸ್​ಪಿಪಿ ರೇಖಾ ಕೊಟ್ರಗೌಡರವರು ದಾವಣಗೆರೆ ಜಿಲ್ಲಾ ಸೆಷನ್ಸ್​ ಹಾಗೂ ವಿಶೇಷ ಲೋಕಾಯುಕ್ತ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜೇಶ್ವರಿ ಎನ್​.ಹೆಗಡೆ ಅವರು ಎಸ್​ಪಿಪಿ ರೇಖಾ ಕೊಟ್ರಗೌಡರಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ. ಸರ್ಕಾರದ ಪರ ಲೋಕಾಯುಕ್ತ ಎಸ್​ಪಿಪಿ ಪಿ.ವೈ.ಹಾದಿಮನಿ ವಾದ ಮಂಡಿಸಿದ್ದಾರೆ.

ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿ ಆರೋಪಿಯಿಂದ 3 ಲಕ್ಷಕ್ಕೆ ಬೇಡಿಕೆ ಇಟ್ಟು ಫೆಬ್ರವರಿ ಐದರಂದು 1.87 ಲಕ್ಷ ಲಂಚ ಸ್ವೀಕರಿಸುವಾಗ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ದಾವಣಗೆರೆಯ ಪಿಜೆ ಬಡಾವಣೆ ನಿವಾಸದಲ್ಲಿ ಎಸ್​ಪಿಪಿ ರೇಖಾ ಬಂಧನವಾಗಿತ್ತು. ಸದ್ಯ ಇವರ ಜಾಮೀನು ಅರ್ಜಿ ವಜಾಗೊಂಡಿದೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ

Published On - 11:28 am, Sat, 18 February 23