ದಾವಣಗೆರೆ: ಚಾಕೊಲೇಟ್ ಆಸೆ ತೋರಿಸಿ ದೇವಸ್ಥಾನದ ಬಳಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ

| Updated By: ಆಯೇಷಾ ಬಾನು

Updated on: Feb 16, 2023 | 1:32 PM

ಮನೆಯಲ್ಲಿ ಏರೂ ಇಲ್ಲದನ್ನ ಗಮನಿಸಿದ ಆರೋಪಿ, ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಬಾಯಿಗೆ ಬಟ್ಟೆ ಹಾಕಿ ಅತ್ಯಾಚಾರ ಮಾಡಿದ್ದಾನೆ.

ದಾವಣಗೆರೆ: ಚಾಕೊಲೇಟ್ ಆಸೆ ತೋರಿಸಿ ದೇವಸ್ಥಾನದ ಬಳಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ: ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಏರೂ ಇಲ್ಲದನ್ನ ಗಮನಿಸಿದ ಆರೋಪಿ, ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಬಾಯಿಗೆ ಬಟ್ಟೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಬಾಲಕಿಯನ್ನು ಮನೆಯಲ್ಲಿ ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆನ್ ಲೈನ್ ಜೂಜಾಟದಲ್ಲಿ ದುಡ್ಡು ಕಳೆದು ಕೊಂಡ ಕಿಲಾಡಿ ಹುಡುಗ ಅಪಹರಣದ ನಾಟಕ

ದಾವಣಗೆರೆ: ಕಳೆದ ಜನವರಿ 30 ರಂದು ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಗೆ ಬಂದಿದ್ದ ಯುವಕನೊಬ್ಬ ನೀಡಿದ ದೂರಿಗೆ ಪೊಲಿಸರೇ ಬೆಚ್ಚಿ ಬಿದ್ದಿದ್ದರು. ಕಾರಣ ಆತ ಹೇಳಿದ ದೂರಿನ ಸಾರಾಂಶವೇ ಹಾಗಿತ್ತು. ದಾವಣನಗರದ ಎಸ್ ಎಸ್ ಎಂ ನಗರದ ನಿವಾಸಿ ಅಮೀರ್ ಖಾನ್ (21) ನೀಡಿದ ಮಾಹಿತಿ ಪಡೆದು ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಹುಡುಗಿಯರನ್ನ ಚುಡಾಯಿಸಬೇಡಾ ಎಂದಿದ್ದಕ್ಕೆ ಮೈಸೂರಿನಲ್ಲಿ ಹತ್ಯೆ, ಇಬ್ಬರು ಅರೆಸ್ಟ್: 3 ದಿನದಿಂದ ನಾಪತ್ತೆಯಾಗಿದ್ದ ಪ್ರಕರಣ ಕೊಲೆಯಲ್ಲಿ ಅಂತ್ಯ

ಯಾರೋ ಮೂರು ಜನ ಬಂದು ನನಗೆ ಚಾಕು ತೋರಿಸಿ ಅಪಹರಣ ಮಾಡಿದರು. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಇವರ ಮೊದಲು ಮೊಬೈಲ್ ಕಸಿದುಕೊಂಡು ನಂತರ ಫೋನ್ ಪೇ ನಲ್ಲಿದ್ದ 35 ಸಾವಿರ ರೂಪಾಯಿ ಪಡೆದಿದ್ದಾರೆ. ನನಗೆ ಜೀವ ಬೇದರಿಕೆ ಹಾಕಿದ್ದರಿಂದ ನಾನು ಅವರಿಗೆ ಮೊಬೈಲ್ ಕೊಟ್ಟೆಎಂದು ಹೇಳಿ ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡು ಅಜಾದ್ ನಗರ ಠಾಣೆಯ ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್ ಪ್ರಕರಣ ತನಿಖೆ ನಡೆಸಿದರು . ಫೋನ್ ಪೇ ನಲ್ಲಿದ್ದ ಹಣ ಯಾವ ನಂಬರ್ ಗೆ ಹೋಗಿದೆ ಎಂದು ಪರಿಶೀಲನೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಅಮೀರ್ ಖಾನ್ ಆನ್ ಲೈನ್ ಜೂಜಾಟವಾಡಿ ಹಣ ಕಳೆದುಕೊಂಡಿದ್ದು ತನಿಖೆಯಿಂದ ಖಚಿತ‌ವಾಗಿದೆ.

ಹಣ ಕಳೆದು ಕೊಂಡಿದ್ದಕ್ಕೆ ಮನೆಯಲ್ಲಿ ತಂದೆ – ತಾಯಿಗೆ ಹೆದರಿ ಅಮೀರ್ ಖಾನ್ ಸುಳ್ಳು ದೂರು ದಾಖಲಿಸಿದ್ದ. ಹೀಗೆ ಅಮೀರ್ ಖಾನ್ ಸುಳ್ಳು ದೂರು ದಾಖಲಿಸಿದ್ದಾನೆ ಎಂಬುದು ಪೊಲೀಸರಿಗೆ ಖಚಿತವಾಗಿತ್ತು. ಸುಳ್ಳು ದೂರು ದಾಖಲಿಸಿ ಪೊಲೀಸರಿಗೆ ದಾರಿ ತಪ್ಪಿಸುವ ಕೆಲ್ಸಾ‌ ಮಾಡಿದ ಹಿನ್ನೆಲೆ ಯುಪಿಸಿ 182 ಅನ್ವಯ ದೂರು ದಾಖಲಿಸಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಸುಳ್ಳು ದೂರು ದಾಖಲಿಸಿದ ಹಿನ್ನೆಲೆ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಮೀರ್, ತಾನು ಜೂಜಾಟವಾಡಿ 35 ಸಾವಿರ ರೂಪಾಯಿ ಸೋತು. ಅದನ್ನ ಮುಚ್ಚಿ ಹಾಕಲು ಜೊತೆಗೆ ತಂದೆ ತಾಯಿಗೆ ಸಂಶಯ ಬಾರದ ರೀತಿಯಲ್ಲಿ ವರ್ತಿಸಿದ್ದ‌. ಕಳೆದ 15 ದಿನಗಳಿಂದ ಪೊಲೀಸರು ಹತ್ತಾರು ಕಡೆ ಸಿಸಿ ಕ್ಯಾಮರಾ ಪರಿಶೀಲನೆ ಹಾಗೂ ಆಟೋಗಳನ್ನ ಪರಿಶೀಲನೆ‌ ಮಾಡಿದ್ದರು. ಆದ್ರೆ ಯಾವುದೇ ಘಟನೆ ನಡೆದ ಬಗ್ಗೆ ಮಾಹಿತಿ ‌ಲಭ್ಯವಾಗಿರಲಿಲ್ಲ. ನಾಟಕವಾಡಿದ ಅಮೀರ್ ಖಾನ್ ಈಗ ಜೈಲು ಪಾಲಾಗಿದ್ದಾನೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:32 pm, Thu, 16 February 23