AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರನ್ನ ಚುಡಾಯಿಸಬೇಡಾ ಎಂದಿದ್ದಕ್ಕೆ ಮೈಸೂರಿನಲ್ಲಿ ಹತ್ಯೆ, ಇಬ್ಬರು ಅರೆಸ್ಟ್: 3 ದಿನದಿಂದ ನಾಪತ್ತೆಯಾಗಿದ್ದ ಪ್ರಕರಣ ಕೊಲೆಯಲ್ಲಿ ಅಂತ್ಯ

ಮೈಸೂರಿನ ಕಲ್ಯಾಣಗಿರಿ ನಿವಾಸಿ ಮನ್ಸೂರ್, ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ದ ಪ್ರಕರಣ ದಾಖಲಾಗಿತ್ತು.

ಹುಡುಗಿಯರನ್ನ ಚುಡಾಯಿಸಬೇಡಾ ಎಂದಿದ್ದಕ್ಕೆ ಮೈಸೂರಿನಲ್ಲಿ ಹತ್ಯೆ, ಇಬ್ಬರು ಅರೆಸ್ಟ್: 3 ದಿನದಿಂದ ನಾಪತ್ತೆಯಾಗಿದ್ದ ಪ್ರಕರಣ ಕೊಲೆಯಲ್ಲಿ ಅಂತ್ಯ
ಆರೋಪಿಗಳು ಮನ್ಸೂರ್ ಅವರನ್ನು ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ಹೋಗುತ್ತಿರುವ ದೃಶ್ಯ
TV9 Web
| Updated By: ಆಯೇಷಾ ಬಾನು|

Updated on: Feb 16, 2023 | 11:23 AM

Share

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುದ್ಧಿವಾದ ಹೇಳಿದ ವ್ಯಕ್ತಿಯನ್ನೇ ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಮುನ್ನ ಕೊಲೆಯಾದ ವ್ಯಕ್ತಿಯನ್ನು ಆರೋಪಿಗಳು ಹೊತ್ತುಕೊಂಡು ಹೋಗಿದ್ದರು. ಹೊತ್ತುಕೊಂಡು ಹೋಗಿದ ಸಿಸಿ ಕ್ಯಾಮೆರಾ ವಿಡಿಯೋ ಲಭ್ಯವಾಗಿದೆ. ಸಯ್ಯದ್ ಮನ್ಸೂರ್ (32) ಕೊಲೆಯಾಗಿದ್ದ ದುರ್ದೈವಿ.

ಮೈಸೂರಿನ ಕಲ್ಯಾಣಗಿರಿ ನಿವಾಸಿ ಮನ್ಸೂರ್, ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ದ ಪ್ರಕರಣ ದಾಖಲಾಗಿತ್ತು. ಜಬೀ ಹುಡಗಿಯರನ್ನು ಚುಡಾಯಿಸುತ್ತಿದ್ದ. ಹೀಗಾಗಿ ಇದು ತಪ್ಪು ಎಂದು ಮನ್ಸೂರ್, ಜಬೀಗೆ ಬುದ್ದಿವಾದ ಹೇಳಿದ್ದ. ಆದರೂ ಬದಲಾಗದ ಜಬೀಗೆ ಮನ್ಸೂರ್ ಹೊಡೆದು ಕಳುಹಿಸಿದ್ದ. ಇದೇ ಕಾರಣಕ್ಕೆ ಸ್ನೇಹಿತರ ಜೊತೆ ಸೇರಿ ಅಪಹರಿಸಿ ಮನ್ಸೂಸ್ ಕೊಲೆ ಮಾಡಿ ಪಾಂಡವಪುರ ಬಳಿ ನಾಲೆಗೆ ಶವ ಎಸೆದಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎನ್​ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಶೀಲ ಶಂಕಿಸಿ ಕೊಲೆ ಆರೋಪ

ಬೆಂಗಳೂರಿನ ವರ್ತೂರಿನಲ್ಲಿ ಕೊಳೆತ ಸ್ಥತಿಯಲ್ಲಿ ಗೃಹಿಣಿ ಮೃತದೇಹ ಪತ್ತೆಯಾಗಿದೆ. ಪತ್ನಿ ಮೋನಿಷಾ (30) ಕೊಲೆಗೈದು ಪತಿ ಶೇಕ್ ಮಜೀದ್ ಅಲಿ ಪರಾರಿಯಾಗಿದ್ದ. ಸದ್ಯ ಕೊಲೆ ಆರೋಪಿ ಮಜೀದ್​ನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಶೀಲ‌ ಶಂಕಿಸಿ‌ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕಲಬುರಗಿ: ದರ್ಗಾದಲ್ಲಿ ಶಿವಲಿಂಗ ಪೂಜೆ, ಎಡಿಜಿಪಿ ಅಲೋಕ್​ ಕುಮಾರ್​ರಿಂದ ಭದ್ರತೆ ಪರಿಶೀಲನೆ

ಕೊಲ್ಕತ್ತಾ ಮೂಲದ ದಂಪತಿ ಬೆಂಗಳೂರಲ್ಲಿ ವಾಸವಾಗಿದ್ದರು. ಫೆಬ್ರವರಿ 5 ರಂದು ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯಲ್ಲಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಟವಲ್ ನಿಂದ ಕುತ್ತಿಗೆ ಬಿಗಿದು ಕೊಲೆ ನಡೆದಿದೆ. ಮನೆಯಲ್ಲಿ ಮೃತದೇಹ ಲಾಕ್ ಮಾಡಿ ಆರೋಪಿ ಮಜೀದ್ ಎಸ್ಕೇಪ್ ಆಗಿದ್ದ. ಫೆಬ್ರವರಿ 7 ರಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಕೊಲೆ‌‌ ಮಾಡಿ ಕೋಲ್ಕತ್ತಾಗೆ ಪರಾರಿಯಾಗಿದ್ದ. ಆರೋಪಿ ರಸ್ತೆ ಮಾರ್ಗವಾಗಿ ತೆರಳಿದ್ದ. ಆದ್ರೆ ಅದಾಗಲೇ ವಿಮಾನದ ಮೂಲಕ ಪೊಲೀಸರು ಕೊಲ್ಕತ್ತಾ ತಲುಪಿದ್ದರು. ಕೊಲ್ಕತ್ತಾದಿಂದ 150 ಕಿ.ಮೀ.ದೂರದಲ್ಲಿರುವ ಹಳ್ಳಿಯೊಂದರಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.

ಇಬ್ಬರು ಮದುವೆಯಾಗಿ 10 ವರ್ಷವಾಗಿದ್ದು 3 ವರ್ಷದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ದಂಪತಿಗೆ 6 ವರ್ಷದ ಒಂದು ಮಗು ಇದೆ. ಮಗುವನ್ನು ಊರಲ್ಲೇ ಬಿಟ್ಟು ಬಂದಿದ್ದ ದಂಪತಿ.

ಹೆಚ್ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ‌ ವಂಚಿಸುತ್ತಿದ್ದ ಗ್ಯಾಂಗ್ ಬಂಧನ

ಹೆಚ್ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ‌ ವಂಚಿಸುತ್ತಿದ್ದ 7 ಜನ ಆರೋಪಿಗಳನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಮುನಾವರ್ ಸಾಬ್ರಿ, ಪ್ರತಾಪ್ ಸೇರಿ ಏಳು ಜನರ ಬಂಧನವಾಗಿದೆ. ಆರೋಪಿಗಳು ಹೆಚ್ಎಎಲ್​ನ ಬರೋಬ್ಬರಿ 833 ಎಕರೆ ಭೂಮಿಯ ನಕಲಿ ದಾಖಲೆ ಸೃಷ್ಟಿಸಿದ್ದರು. ಹೆಚ್ಎಎಲ್ ನಿಂದ ಲೀಸ್ ಪಡೆದಿರೋದಾಗಿ ದಾಖಲೆ ಸೃಷ್ಟಿಸಿಕೊಂಡಿದ್ದರು. ಅಲ್ಲದೇ ಹೆಚ್ಎಎಲ್ ನ ಲೆಟರ್ ಹೆಡ್ ಮತ್ತು ಅಧಿಕಾರಿಗಳ ಸಹಿಯನ್ನು ನಕಲು ಮಾಡಿಕೊಂಡಿದ್ರು. 833 ಎಕರೆ ಭೂಮಿಯ ನಕಲಿ ದಾಖಲಾತಿ ಸೃಷ್ಟಿಸಿ ಲೀಸ್ ಗೆ ಪಡೆದಿರೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ರು. ಆ ಜಾಗವನ್ನು ಮೂರನೇ ವ್ಯಕ್ತಿಗಳಿಗೆ ಬಾಡಿಗೆ ಮತ್ತು ಲೀಸ್ ಗೆ ನೀಡಲು ಮುಂದಾಗಿದ್ರು. ಹೀಗೆ ಇಬ್ಬರು ಮೂರನೇ ವ್ಯಕ್ತಿಗಳಿಂದ ಒಂದು ಕೋಟಿ ಪಡೆದಿದ್ದರು. ಹೆಚ್ಎಎಲ್ ಅಧಿಕಾರಿ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಹೆಚ್ಎಎಲ್ ಪೊಲೀಸರು ದೂರು ಆಧರಿಸಿ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ