ಮನೆ-ಮಾನಕ್ಕೆ ಕಟ್ಟುಬಿದ್ದ ಗಂಡ, ಅವಳೋ ತನ್ನ ಶೋಕಿ ಜೀವನಕ್ಕೆ ಅಡ್ಡಬಂದ ಆ ಗಂಡನನ್ನೇ ಪರಲೋಕಕ್ಕೆ ಕಳಿಸಿಬಿಟ್ಟಳು
ಸೊಸೆಯ ಕೊರಗಿನಲ್ಲಿ ಮಂಜುನಾಥ್ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಸಾವನ್ನಪ್ಪಿದ್ದರಂತೆ. ಇಷ್ಟಾದರೂ ನಿಖಿತಾ ಕೊಂಚವು ಬದಲಾಗಿರಲಿಲ್ಲವಂತೆ. ಬದಲಿಗೆ ತನ್ನ ಶೋಕಿಗಳಿಗೆ ಅಡ್ಡವಾಗಿದ್ದ ಗಂಡನನ್ನೇ ಕೊಲೆ ಮಾಡಿದ ಆರೋಪ ಈಗ ಕೇಳಿ ಬಂದಿದೆ.
ಆಕೆ ಫುಲ್ ಶೋಕಿವಾಲಿ. ಗಂಡ ಪಾಪ ಮುಗ್ದ. ಆಕೆಗೆ ಪಾರ್ಟಿ ಪಬ್ ಅಂತಾ ಸುತ್ತಬೇಕು. ಆತನಿಗೂ ಮನೆ ಮಾನ ಮರ್ಯಾದೆಯೇ ಸರ್ವಸ್ವ. ಒಬ್ಬರು ಉತ್ತರ, ಮತ್ತೊಬ್ಬರು ದಕ್ಷಿಣ ಅಂತಾ ಇದ್ದರು. ಪ್ರತಿ ದಿನ ಜಟಾಪಟಿ. ಈ ಜಟಾಪಟಿ ಈಗ ಪತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮೇಲಿನ ಪೋಟೋದಲ್ಲಿರುವ ಈ ಜೋಡಿ ಮಂಜುನಾಥ್ (husband) ಹಾಗೂ ನಿಖಿತಾ (wife). ಮೈಸೂರಿನ (mysore) ಹೂಟಗಳ್ಳಿ ನಿವಾಸಿಗಳು. ನಿಖಿತಾ ಮೈಸೂರಿನ ಬೋಗಾದಿ ನಿವಾಸಿ. 10 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಎರಡು ಮುದ್ದಾದ ಮಕ್ಕಳಿದ್ದಾರೆ. ಇಬ್ಬರೂ ಮದುವೆಯಾದ ಒಂದು ವರ್ಷ ಕಾಲ ಚೆನ್ನಾಗಿಯೇ ಇದ್ದರು. ಆದ್ರೆ ಒಂದು ವರ್ಷದ ನಂತರ ಇಬ್ಬರ ನಡುವೆ ಬಿರುಕು ಮೂಡಲು ಆರಂಭವಾಯ್ತು. ಇದಕ್ಕೆ ಕಾರಣ ನಿಖಿತಾಳ ಶೋಕಿಗಳು.
ಹೌದು ಮಂಜುನಾಥ್ ಅವರದ್ದು ಸಂಪ್ರದಾಯಸ್ಥ ಕುಟುಂಬ. ತುಂಬಿದ ಕುಟುಂಬ. ಊರ ಯಜಮಾನಿಕೆ ಜವಾಬ್ದಾರಿ ಹೊತ್ತಿದ್ದವರು. ಆದ್ರೆ ನಿಖಿತಾಗೆ ಇದ್ಯಾವುದೂ ಲೆಕ್ಕಕ್ಕೆ ಇರಲಿಲ್ಲ. ಯಾವಾಗಲೂ ಮಾಡ್ರನ್ ಡ್ರೆಸ್ ಹಾಕೋದು ಲೇಟ್ ನೈಟ್ ಪಾರ್ಟಿ ಮಾಡೋದು ಮಾಡ್ತಾ ಇದ್ರಂತೆ. ಇದರ ಜೊತೆಗೆ ಬೇರೆಯವರ ಜೊತೆ ಸಂಬಂಧ ಸಹಾ ಇಟ್ಟುಕೊಂಡಿದ್ದರಂತೆ. 6 ವರ್ಷಗಳ ಹಿಂದೆ ನಿಖಿತಾ ಯಾರದೋ ಜೊತೆ ರಾಯಚೂರಿಗೆ ಓಡಿ ಹೋಗಿದ್ದರಂತೆ ಎಂದು ಮೃತ ಮಂಜುನಾಥ್ ಅತ್ತಿಗೆ ಸರಸ್ವತಿ ಮಾಹಿತಿ ನೀಡಿದ್ದಾರೆ.
ಕೊನೆಗೆ ಆಕೆಯನ್ನು ಹುಡುಕಿ ಕರೆದುಕೊಂಡು ಬಂದು ರಾಜಿ ಪಂಚಾಯತಿ ಮಾಡಿ ಸಂಸಾರ ಸರಿ ಮಾಡಲಾಗಿತ್ತಂತೆ. ಆದ್ರೆ ಅದೇನೋ ಹೇಳ್ತಾರಲ್ಲ ನಾಯಿ ಬಾಲ ಡೊಂಕು ಅಂತಾ ಆ ರೀತಿ ವಾಪಸ್ಸು ಬಂದ ಮೇಲೂ ನಿಖಿತಾ ಮಾತ್ರ ಬದಲಾಗಿರಲಿಲ್ಲವಂತೆ. ಅದೇ ಕೊರಗಲ್ಲಿ ಮಂಜುನಾಥ್ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಸಾವನ್ನಪ್ಪಿದ್ದರಂತೆ. ಇಷ್ಟಾದರೂ ನಿಖಿತಾ ಮಾತ್ರ ಕೊಂಚವು ಬದಲಾಗಿರಲಿಲ್ಲವಂತೆ. ಬದಲಿಗೆ ತನ್ನ ಶೋಕಿಗಳಿಗೆ ಅಡ್ಡವಾಗಿದ್ದ ಗಂಡನನ್ನೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
Also Read:
ಹುಡುಗಿಯರನ್ನ ಚುಡಾಯಿಸಬೇಡಾ ಎಂದಿದ್ದಕ್ಕೆ ಮೈಸೂರಿನಲ್ಲಿ ಹತ್ಯೆ, ಇಬ್ಬರು ಅರೆಸ್ಟ್: 3 ದಿನದಿಂದ ನಾಪತ್ತೆಯಾಗಿದ್ದ ಪ್ರಕರಣ
ಮೊನ್ನೆ ಮಂಗಳವಾರ ತಡರಾತ್ರಿ ಮಂಜುನಾಥ್ ಸಹೋದರಿಯರಿಗೆ ಕರೆ ಮಾಡಿದ ನಿಖಿತಾ ನಿಮ್ಮ ತಮ್ಮ ಜ್ಞಾನ ತಪ್ಪಿದ್ದಾರೆ ಅಂತಾ ಹೇಳಿದ್ದಾಳೆ. ಮಂಜುನಾಥ್ ಸಹೋದರಿಯರು ಸಂಬಂಧಿಕರು ಹೋಗುವಷ್ಟರಲ್ಲಿ ಮಂಜುನಾಥ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಂಜುನಾಥ್‌ನನ್ನು ನಿಖಿತಾಳೆ ಕೊಲೆ ಮಾಡಿದ್ದಾಳೆ ಅನ್ನೋದು ಮಂಜುನಾಥ್ ಸಂಬಂಧಿಕರ ಆರೋಪ.
ಮಂಜುನಾಥ್ ಮಾತ್ರವಲ್ಲ ಅವರ ತಂದೆ ತಾಯಿಯನ್ನೂ ನಿಖಿತಾಳೆ ಕೊಲೆ ಮಾಡಿದ್ದಾಳೆ ಅನ್ನೋದು ಮಂಜುನಾಥ್ ಮನೆಯವರ ಮತ್ತೊಂದು ಆರೋಪ. ಸದ್ಯ ನಿಖಿತಾಳನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲಾ ಏನೇ ಇರಲಿ ತನ್ನ ಶೋಕಿಗೆ ಅಡ್ಡಿಯಾಗುತ್ತಾನೆ ಅಂತಾ ಕಟ್ಟಿಕೊಂಡ ಗಂಡನನ್ನೇ ನಿಖಿತಾ ಕೊಲೆ ಮಾಡಿರುವುದು ದುರಂತವೇ ಸರಿ.
ವರದಿ: ರಾಮ್, ಟಿವಿ 9, ಮೈಸೂರು