ಕೋರ್ಟ್ 33 ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಪತ್ತೆಯಿಲ್ಲ; ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ತಲೆಮರೆಸಿಕೊಂಡಿದ್ದವ ಬಂಧನ

| Updated By: guruganesh bhat

Updated on: Aug 16, 2021 | 11:22 PM

2008ರಲ್ಲಿ 10 ಕೋಟಿಗೂ ಹೆಚ್ಚು ಮೌಲ್ಯದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ಚೆಕ್​ ನೀಡಿ ವಂಚಿಸಿದ್ದಎಂಬ ಆರೋಪ ನಂದಕುಮಾರ್ ಮೇಲೆ ಕೇಳಿಬಂದಿತ್ತು.

ಕೋರ್ಟ್ 33 ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಪತ್ತೆಯಿಲ್ಲ; ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ತಲೆಮರೆಸಿಕೊಂಡಿದ್ದವ ಬಂಧನ
ಸಾಂಕೇತಿಕ ಚಿತ್ರ
Follow us on

ದಾವಣಗೆರೆ: ಕೋರ್ಟ್ 33 ಬಾರಿ ವಾರಂಟ್ ಜಾರಿ ಮಾಡಿದ್ದರೂ ನಾಪತ್ತೆಯಾಗಿದ್ದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ವಂಚಿಸಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 52ವರ್ಷದ ನಂದಕುಮಾರ್ ಎಂಬಾತನೇ ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪದಡಿ ಬಂಧಿಸಲ್ಪಟ್ಟ ವ್ಯಕ್ತಿ.  

2008ರಲ್ಲಿ 10 ಕೋಟಿಗೂ ಹೆಚ್ಚು ಮೌಲ್ಯದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ಚೆಕ್​ ನೀಡಿ ವಂಚಿಸಿದ್ದಎಂಬ ಆರೋಪ ನಂದಕುಮಾರ್ ಮೇಲೆ ಕೇಳಿಬಂದಿತ್ತು. ಈತ ರೈತರಿಗೆ ಹಣ ಕೊಡದೇ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಇದೇ ರೀತಿ ಹೊರ ರಾಜ್ಯಗಳಲ್ಲಿ ಸಹ ರೈತರಿಗೆ ಆರೋಪಿ ವಂಚನೆ ಎಸಗಿದ್ದ ಎಂದು ಹೇಳಲಾಗಿತ್ತು. ಆರೋಪಿಯ ಬಂಧನಕ್ಕೆ ದಾವಣಗೆರೆ ಎಸ್​ಪಿ ರಿಷ್ಯಂತ್  ತಂಡ ರಚಿಸಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹರಿಹರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ಗದಗದ ಸುದ್ದಿಗಳು: 45 ಜನರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ, ವಿದ್ಯುತ್​ ತಂತಿ ತಗುಲಿ ಜೋಡೆತ್ತು ಸಾವು
ಗದಗ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ಕಂದಕಕ್ಕೆ ವಾಲಿದ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಳಿ ನಡೆದಿದೆ. ಬಸ್ಸಿಗೆ ಅಡ್ಡ ಬಂದ ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಅವಾಂತರ ನಡೆದಿದ್ದು, ಬಸ್ಸಿನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆಯೇ ಹೊರತು ಅದೃಷ್ಟವಶಾತ್ ಹೆಚ್ಚಿನ ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮುಂಡರಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ವಿದ್ಯುತ್​ ತಂತಿ ತಗುಲಿ ಜೋಡೆತ್ತು ಸಾವು
ವಿದ್ಯುತ್​ ತಂತಿ ತಗುಲಿ ಶೆಡ್​​​​ ಬಳಿ ಕಟ್ಟಿದ್ದ ಜೋಡೆತ್ತು ಸಾವಿಗೀಡಾದ ದುರ್ಘಟನೆ ಗದಗ ತಾಲೂಕಿನ ಮಹಾಲಿಂಗಪುರ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಲಮಾಣಿ ಎಂಬ ರೈತರಿಗೆ ಸೇರಿದ್ದ ಜೋಡೆತ್ತು ಸಾವನ್ನಪ್ಪಿದ್ದು, ಶೆಡ್ ಮುಂದಿದ್ದ ವಿದ್ಯುತ್​ ಕಂಬದಲ್ಲಿ ಬ್ಲಾಸ್ಟ್​ ಆಗಿ ಘಟನೆ ಜರುಗಿದೆ. ಹೆಸ್ಕಾಂ ವಿರುದ್ಧ ಮಹಾಲಿಂಗಪುರ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು 

ಹಾವೇರಿ: ಕಾಲುವೆಯಲ್ಲಿದ್ದ ಕೊಳೆತ ಮೃತದೇಹ ಮೇಲೆತ್ತಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾಗ ಸ್ವತಃ ಪಿಎಸ್​ಐ ಕಾಲುವೆಗೆ ಜಿಗಿದರು!

(Davanagere police arrest a man 33 times a court warrant was issued but not detected who fraudulent purchase of maize)

Published On - 11:14 pm, Mon, 16 August 21