ಹಾವೇರಿ: ಕಾಲುವೆಯಲ್ಲಿದ್ದ ಕೊಳೆತ ಮೃತದೇಹ ಮೇಲೆತ್ತಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾಗ ಸ್ವತಃ ಪಿಎಸ್​ಐ ಕಾಲುವೆಗೆ ಜಿಗಿದರು!

ಮೃತದೇಹ ಇದ್ದಲ್ಲಿ ಅಗ್ನಿಶಾಮಕ ವಾಹನ ಹೋಗಲು ದಾರಿಯೂ ಇರಲಿಲ್ಲ. ಇದನ್ನು ಮನಗಂಡ ಪಿಎಸ್ಐ ಕೃಷ್ಣಪ್ಪ ಸ್ವತಃ ಕಾಲುವೆ ನೀರಿಗೆ ಜಿಗಿದು ಅಪರಿಚಿತ ಮೃತದೇಹವನ್ನು ಮೇಲೆತ್ತಿದ್ದಾರೆ.

ಹಾವೇರಿ: ಕಾಲುವೆಯಲ್ಲಿದ್ದ ಕೊಳೆತ ಮೃತದೇಹ ಮೇಲೆತ್ತಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾಗ ಸ್ವತಃ ಪಿಎಸ್​ಐ ಕಾಲುವೆಗೆ ಜಿಗಿದರು!
ಮೃತದೇಹ ಮೇಲೆತ್ತಲು ಕಾಲುವೆಗೆ ಹಾರಿದ ಪಿಎಸ್​ಐ
Follow us
TV9 Web
| Updated By: guruganesh bhat

Updated on:Aug 16, 2021 | 9:20 PM

ಹಾವೇರಿ: ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮೃತದೇಹವನ್ನು ಮೇಲೆತ್ತಲು ಎಲ್ಲರೂ ಹಿಂದೇಟು ಹಾಕುತ್ತಿರುವಾಗ ಸ್ವತಃ ಪಿಎಸ್ಐ ಮೃತದೇಹವನ್ನು ಮೇಲೆತ್ತಿ ಸಾರ್ವಜನಿಕರ ಪ್ರಶಂಸೆಗೆ ಪ್ರಾಪ್ತವಾಗಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಿಎಸ್ಐ ಕೃಷ್ಣಪ್ಪ ಅವರೇ ಈ ಶ್ಲಾಘನೆಗೆ ಪ್ರಾಪ್ತರಾದವರು. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದ ಬಳಿ ಇರೋ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಆದರೆ ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಇದ್ದಿದ್ದರಿಂದ ಕಾಲುವೆಗೆ ಇಳಿದ ಮೃತದೇಹ ತೆಗೆಯಲು ಯಾರೂ ಮುಂದಾಗಿರಲಿಲ್ಲ.

ಮೃತದೇಹ ಇದ್ದಲ್ಲಿ ಅಗ್ನಿಶಾಮಕ ವಾಹನ ಹೋಗಲು ದಾರಿಯೂ ಇರಲಿಲ್ಲ. ಇದನ್ನು ಮನಗಂಡ ಪಿಎಸ್ಐ ಕೃಷ್ಣಪ್ಪ ಸ್ವತಃ ಕಾಲುವೆ ನೀರಿಗೆ ಜಿಗಿದು ಅಪರಿಚಿತ ಮೃತದೇಹವನ್ನು ಮೇಲೆತ್ತಿದ್ದಾರೆ. ಪಿಎಸ್ಐ ಕೃಷ್ಣಪ್ಪ ಅವರು ಕಾಲುವೆಗೆ ಜಿಗಿದು ಮೃತದೇಹದ ಬಳಿ ಈಜುತ್ತ ತೆರಳುವಾಗ ಗ್ರಾಮದ ಚಂದ್ರಪ್ಪ ಎಂಬ ವ್ಯಕ್ತಿ ಸಹ ನೀರಿಗಿಳಿದು ಪಿಎಸ್ಐಗೆ ಸಹಾಯ ಮಾಡಿದ್ದಾರೆ.

ಕರ್ನಾಟಕದಲ್ಲಿ ಇಂದೆಷ್ಟು ಕೊವಿಡ್ ಪ್ರಕರಣ? ಕರ್ನಾಟಕ ರಾಜ್ಯದಲ್ಲಿ ಇಂದು (ಆಗಸ್ಟ್ 16) ಹೊಸದಾಗಿ 1,065 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,30,529 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,71,448 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 28 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,007 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 22,048 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 270 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,33,172 ಕ್ಕೆ ಏರಿಕೆಯಾಗಿದೆ. 12,33,172 ಸೋಂಕಿತರ ಪೈಕಿ 12,09,176 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 4 ಮಂದಿ ಬಲಿಯಾಗಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,941 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 8,054 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದನ್ನೂ ಓದಿ: 

ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು

Shiradi Ghat: ಶಿರಾಡಿ ಘಾಟ್​ ಓಪನ್; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅನುಮತಿ

(Haveri everyone was hesitant to lift the dead body in the canal Rattihalli PSI jumped into the canal)

Published On - 8:13 pm, Mon, 16 August 21