ರಾಷ್ಟ್ರೀಯ ಕುಸ್ತಿ ತಂಡಕ್ಕೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ: ರೇಲ್ವೆ ಹಾಗೂ ಆರ್ಮಿ ಆಟಗಾರರಿಗೆ ಅವಕಾಶ ನೀಡದಂತೆ ಆಗ್ರಹ

ರಾಷ್ಟ್ರೀಯ ಕುಸ್ತಿ ತಂಡಕ್ಕೆ ನಾಳೆ ಕರ್ನಾಟಕ‌ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ರೇಲ್ವೆ ಹಾಗೂ ಆರ್ಮಿ ಆಟಗಾರರಿಗೂ ಅವಕಾಶ ನೀಡಿರುವುದನ್ನು ಕರ್ನಾಟಕ‌ದ ಕುಸ್ತಿ ಪಟುಗಳು ವಿರೋಧಿಸುತ್ತಿದೆ.

ರಾಷ್ಟ್ರೀಯ ಕುಸ್ತಿ ತಂಡಕ್ಕೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ: ರೇಲ್ವೆ ಹಾಗೂ ಆರ್ಮಿ ಆಟಗಾರರಿಗೆ ಅವಕಾಶ ನೀಡದಂತೆ ಆಗ್ರಹ
ರಾಷ್ಟ್ರೀಯ ಕುಸ್ತಿ ತಂಡದ ಆಯ್ಕೆಯಲ್ಲಿ ರೇಲ್ವೆ ಹಾಗೂ ಆರ್ಮಿ ಆಟಗಾರರಿಗೆ ಅವಕಾಶಕ್ಕೆ ತೀವ್ರವಿರೋಧ
Image Credit source: ಸಾಂದರ್ಭಿಕ ಚಿತ್ರ
Updated By: Rakesh Nayak Manchi

Updated on: Dec 10, 2022 | 2:27 PM

ದಾವಣಗರೆ: ನಾಳೆ (ಡಿ.11) ರಾಷ್ಟ್ರೀಯ ಕುಸ್ತಿ ತಂಡ (National Wrestling Team)ಕ್ಕೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿನ ಕನಕಗುರುಪೀಠದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದರೆ ರಾಷ್ಟ್ರೀಯ ಕುಸ್ತಿ ತಂಡಕ್ಕೆ ನಡೆಯುವ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ರೇಲ್ವೆ ಹಾಗೂ ಆರ್ಮಿ ಆಟಗಾರರಿಗೆ ಅವಕಾಶ ನೀಡಿರುವುದು ಕರ್ನಾಟಕ‌ ಕುಸ್ತಿ ಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ‌ ಕುಸ್ತಿ ಸಂಘ (Karnataka Wrestling Team)ದ ವಿರುದ್ಧ ಅಸಮಾಧಾನ ಹೊರಹಾಕಿದ ಕುಸ್ತಿಪಟುಗಳು, ರೇಲ್ವೆ ಹಾಗೂ ಆರ್ಮಿ ಆಟಗಾರರಿಗೆ ಅವಕಾಶ ನೀಡದಂತೆ ಒತ್ತಾಯಿಸಿದ್ದಾರೆ. ರೈಲ್ವೇ ಹಾಗೂ ಆರ್ಮಿ ಕುಸ್ತಿ ಪಟುಗಳಿಗೆ ಅವಕಾಶ ನೀಡುವ ಮೂಲಕ ಕರ್ನಾಟಕ ಕುಸ್ತಿ ಸಂಘ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಡೆಯಿತು ಖಾಲಿ ಕಬ್ಬಿಣದ ಚಕ್ಕಡಿ ಓಡಿಸುವ ಸ್ಪರ್ಧೆ; ಇಲ್ಲಿದೆ ಓಟದ ಕ್ಷಣಗಳು

ನಂಬರ್ ಪ್ಲೇಟ್ ಬದಲಿಸಿ ಸುತ್ತಾಡುತ್ತಿದ್ದ ಕಿಲಾಡಿಯ ಬಂಧನ

ನಂಬರ್ ಪ್ಲೇಟ್ ಬದಲಿಸಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಬಸವ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮತ್ತೊಬ್ಬರ ವಾಹನದ ನಂಬರ್ ತನ್ನ ಸ್ಕೂಟಿಗೆ ಹಾಕಿಕೊಂಡು ಸುತ್ತಾಡುತ್ತುದ್ಧ ಸುನೀಲ್ ಎಂಬಾತನನ್ನು ಬಂಧಿಸಿದ ಪೊಲೀಸರು, ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನಗರದ ವಸಂತಾ ಟಾಕೀಸ್ ರಸ್ತೆಯಲ್ಲಿ ಸುನೀಲನನ್ನು ವಶಕ್ಕೆ ಪಡೆಯಲಾಗಿದೆ. ತನ್ನ ವಾಹನವನ್ನು ಆರ್​ಟಿಓದಲ್ಲಿ ನೋಂದಣಿ ಮಾಡಿಸದೆ ಬೇರೊಬ್ಬರ ಬೈಕ್ ನಂಬರ್ ಹಾಕಿಕೊಂಡು ತಿರುಗಾಟುತ್ತಿದ್ದನು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Sat, 10 December 22