ವರ್ಷದಲ್ಲಿ 2 ದಿನ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಹೆಣ್ಣು ಮಕ್ಕಳಿಗಿಲ್ಲ! ಪುರುಷರ ಭಕ್ತಿಭಾವವೇ ಇಲ್ಲಿ ಪ್ರಧಾನ

| Updated By: ಸಾಧು ಶ್ರೀನಾಥ್​

Updated on: Dec 22, 2022 | 2:37 PM

ಕೆಲ ಕಡೆ ಮಹೇಶ್ವರನ ಜಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರು ಅನುಭವಿಸಿದ ತೊಂದರೆಗಳನ್ನ ಇಲ್ಲಿನ ಮಹಿಳೆಯರಿಗೆ ಹೇಳಿದ್ದಾರೆ. ಇದರಿಂದ ಮಹಿಳೆಯರು ಜಾತ್ರೆ ಶುರುವಾದರೆ ಸಾಕು ತಮ್ಮ ಜಮೀನು ಕಡೆ ಸಹ ಬರಲ್ಲ. ಹೀಗಾಗಿ ಇದೊಂದು ಅಪ್ಪಟ ಪುರುಷರ ಜಾತ್ರೆಯೆಂದೆ ಪ್ರಸಿದ್ಧಿಯಾಗಿದೆ.

ವರ್ಷದಲ್ಲಿ 2 ದಿನ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಹೆಣ್ಣು ಮಕ್ಕಳಿಗಿಲ್ಲ! ಪುರುಷರ ಭಕ್ತಿಭಾವವೇ ಇಲ್ಲಿ ಪ್ರಧಾನ
ವರ್ಷದಲ್ಲಿ 2 ದಿನ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಹೆಣ್ಣು ಮಕ್ಕಳಿಗಿಲ್ಲ! ಪುರುಷರ ಭಕ್ತಿಭಾವವೇ ಇಲ್ಲಿ ಪ್ರಧಾನ
Follow us on

ಆತ ಉಗ್ರಸ್ವರೂಪಿ. ಆತನಿಗೆ ನಿಯಮಾನುಸಾರ ಪೂಜೆಗಳು ನಡೆಯಲೇ ಬೇಕು. ವಿಚಿತ್ರ ಎಂದರೆ ಹೆಂಗಸರನ್ನ ಕಂಡರೆ ಆತನಿಗೆ ಬಿಲ್ ಕುಲ್ ಆಗಲ್ಲ. ಹೀಗಾಗಿ ಗಂಡಸರಿಂದಲೇ (men devotees) ಪೂಜೆ ನಡೆಯಬೇಕು. ಈತನ ಪ್ರಸಾದ ಕೂಡಾ ಗಂಡಸರೇ ಸ್ವೀಕರಿಸಬೇಕು. ಇನ್ನೂ ವಿಶೇಷವೆಂದರೆ ಆತನ ದೇವಸ್ಥಾನದ ಸುತ್ತ ಹೆಂಗಸರು (women) ಸುಳಿಯುವಂತಿಲ್ಲ. ಈತ ಪುರುಷ ಪ್ರೇಮಿ. ವರ್ಷಕ್ಕೊಮ್ಮೆ ನಡೆಯುವ ಈತನ ಜಾತ್ರೆಯನ್ನ ಗಂಡಸರ ಜಾತ್ರೆ ಎನ್ನುತ್ತಾರೆ. ಇಲ್ಲಿದೆ ನೋಡಿ ಮಹೇಶ್ವರ ಮಹಾತ್ಮೆ ಸ್ಟೋರಿ. ಎಲ್ಲಿ ನೋಡಿದರಲ್ಲಿ ಇಲ್ಲಿ ಪುರುಷರೆ ಕಾಣುತ್ತಾರೆ. ಬಿಳಿ ಪಂಜೆಯನ್ನುಟ್ಟು, ಮಡಿ ಸ್ನಾನ ಮಾಡಿ ವಿಭೂತಿ ಧರಿಸಿ ಬೆಳಿಗ್ಗೆ ಆರು ಗಂಟೆಗೆ ದೇವರ ಸನ್ನಿಧಿಗೆ ಹಾಜರಾಗಬೇಕು. ಇದು ಕಡ್ಡಾಯವೂ ಹೌದು. ಈ ಕ್ಷೇತ್ರದ ಹೆಸರು ದಾವಣಗೆರೆ ತಾಲೂಕಿನ ಬಸಾಪುರದಲ್ಲಿ ಬರುವ ಮಹೇಶ್ವರಸ್ವಾಮೀ ಕ್ಷೇತ್ರ. ಇದರ ಭಕ್ತರು ವೀರ ಮಹೇಶ್ವರರು. ಅಂದರೆ ವೀರಶೈವರಲ್ಲಿ ಬರುವ ಪಂಚಪೀಠಗಳ ಆರಾಧಕರು ಆದ ಜಂಗಮರು. ಕಳೆದ ನಾಲ್ಕು ಶತಮಾನಗಳಿಂದ ಮಹೇಶ್ವರ ಸ್ವಾಮೀ ಪೂಜೆ ಇಲ್ಲಿ ನಡೆಯುತ್ತಿದೆ. ದೊಡ್ಡ ಮರದ ಕೆಳಗೆ ಸುತ್ತಲು ಭತ್ತದ ಗದ್ದೆಗಳಿರುವ ಪ್ರದೇಶದಲ್ಲಿ ಬಸಾಪೂರ ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಸ್ವಾಮೀ ನೆಲೆಸಿದ್ದಾನೆ. ಮೂಲತ ಈ ಮಹೇಶ್ವರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಲಗೆರೆ ಗ್ರಾಮದಲ್ಲಿ (Davangere Basapura Maheshwara swamy pooja) ನೆಲೆಸಿದ್ದನಂತೆ. ಯಾವುದೋ ಕಾರಣಕ್ಕೆ ಸ್ವಾಮೀ ಬಸಾಪೂರಕ್ಕೆ ಬಂದು ನೆಲೆಸಿದ.

ಈತ ನೆಲೆಸಲಿಕ್ಕೆ ವಿಶೇಷವೂ ಇದೆ. ಬಸಾಪೂರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಜಂಗಮ ಜನಾಂಗದವರು ವಾಸಿಸುತ್ತಾರೆ. ವರ್ಷಕ್ಕೊಮ್ಮೆ ಮಹೇಶ್ವರ ಸ್ವಾಮೀಯ ಜಾತ್ರೆ ನಡೆಯುತ್ತದೆ. ಜಾತ್ರೆಯ ವಿಶೇಷ ಅಥವಾ ಯಾವಾಗಲು ಪೂಜೆ ನಡೆದರು ಮಹಿಳೆಯರು ಮಾತ್ರ ಸುಳಿಯುವಂತಿಲ್ಲ. ಹೀಗೆ ಸುಳಿದರೆ ಅಪಾಯ ಕಟ್ಟಿಟ್ಟಬುತ್ತಿಯಂತೆ. ವಿಚಿತ್ರವೆಂದರೆ ಇದಕ್ಕೆ ನಿಖರವಾದ ಕಾರಣಗೊತ್ತಿಲ್ಲ. ಹಿಂದಿನ ಹಿರಿಯರು ಮಾಡಿಕೊಂಡು ಬಂದಿದ್ದಾರೆ. ನಾವು ಕೂಡಾ ಬಂದಿದ್ದೇವೆ ಎಂಬುದು ದೇವಸ್ಥಾನ ಸಮಿತಿ ಉತ್ತರ.

ಎಲ್ಲಿ ನೋಡಿದರು ಇಲ್ಲಿ ಪುರುಷರು ಮಾತ್ರ ಕಾಣಿಸುತ್ತಾರೆ. ವರ್ಷದಲ್ಲಿ ಎರಡು ದಿನ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಾಗ್ಯ ಹೆಣ್ಣು ಮಕ್ಕಳಿಗಿಲ್ಲ. ಇದರ ಬಗ್ಗೆ ಮಾತಾಡಲು ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಾರೆ. ನಿರಂತರವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನ ಮುರಿಯುವುದು ಬೇಡ ಎಂಬ ಮಾತು ಬಹುತೇಕರದ್ದು.

ಹೀಗಾಗಿ ಇದು ತಪ್ಪು. ಇದರಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅನಾಹುತ ಆಗುತ್ತದೆ ಎನ್ನುವುದಕ್ಕೆ ಇಲ್ಲಿಯ ತನಕ ಯಾರು ಸಹ ಮಹಿಳೆಯರು ಜಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಎರಡು ದಿನಗಳ ಕಾಲ ಮಹೇಶ್ವರನ ಜಾತ್ರೆ ನಡೆಯುತ್ತದೆ. ಅನ್ನ ಸಾರು, ಬಾಳೆ ಹಣ್ಣು ಮಜ್ಜಿಗೆ ಸಾರು ಹೀಗೆ ವಿಶೇಷವಾದ ಪ್ರಸಾದವನ್ನ ಇಲ್ಲಿ ನೀಡಲಾಗುತ್ತದೆ. ಗ್ರಾಮದಿಂದ ಹೊರ ವಲಯದಲ್ಲಿ ಇರುವ ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನ ಬರುತ್ತಾರೆ. ಆದ್ರೆ ಮಹಿಳೆಯನ್ನ ಹೊರಗಿಟ್ಟಿದ್ದು ಯಾಕೆ ಎಂದರೆ ಅವರಾಗಿ ಬಿಟ್ಟಿದ್ದಾರೆ ಎಂಬ ಉತ್ತರ ಬರುತ್ತದೆ.

ಇಂತಹ ಮಹೇಶ್ವರನ ಜಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಬೇರೆ ಬೇರೆ ಸ್ಥಳದಲ್ಲಿ ತೊಂದರೆಯಾಗಿದಂತೆ. ಇದು ಕೂಡಾ ನಿಖರವಾಗಿ ಹೇಳುತ್ತಿಲ್ಲ. ಕೆಲ ಕಡೆ ಮಹೇಶ್ವರನ ಜಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರು ಅನುಭವಿಸಿದ ತೊಂದರೆಗಳನ್ನ ಇಲ್ಲಿನ ಮಹಿಳೆಯರಿಗೆ ಹೇಳಿದ್ದಾರೆ. ಇದರಿಂದ ಮಹಿಳೆಯರು ಜಾತ್ರೆ ಶುರುವಾದರೆ ಸಾಕು ತಮ್ಮ ಜಮೀನು ಕಡೆ ಸಹ ಬರಲ್ಲ. ಹೀಗಾಗಿ ಇದೊಂದು ಅಪ್ಪಟ ಪುರುಷರ ಜಾತ್ರೆಯೆಂದೆ ಪ್ರಸಿದ್ಧಿಯಾಗಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:37 pm, Thu, 22 December 22