ಸರ್ಕಾರಿ ಗೋಮಾಳ ಜಮೀನು ಬಿಜೆಪಿ ಕಾರ್ಯಕರ್ತರ ಹೆಸರಿಗೆ, ರೇಣುಕಾಚಾರ್ಯ ಇದ್ದ ವೇದಿಕೆಗೆ ಕುರಿ ನುಗ್ಗಿಸಿ ಆಕ್ರೋಶ

| Updated By: ರಮೇಶ್ ಬಿ. ಜವಳಗೇರಾ

Updated on: Dec 24, 2022 | 4:57 PM

ದಾವಣಗೆರೆ ಜಿಲ್ಲೆಯ ನ್ಯಾಮತಿ‌ ತಾಲೂಕಿನ ಬಸವನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡುತ್ತಿದ್ದ ವೇಳೆ ಸ್ಥಳೀಯರು ಕುರಿ ನುಗ್ಗಿಸಿ ಪ್ರತಿಭಟಿಸಿದರು.

ದಾವಣಗೆರೆ: ಸರ್ಕಾರಿ ಗೋಮಾಳ ಜಮೀನು ಬಿಜೆಪಿ ಕಾರ್ಯಕರ್ತರ ಹೆಸರಿಗೆ ಮಾಡಿಸಿದ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ರೈತರು ಪ್ರತಿಭಟನೆ ಬಿಸಿ ಮುಟ್ಟಿಸಿದರು. ದಾವಣಗೆರೆ ಜಿಲ್ಲೆಯ ನ್ಯಾಮತಿ‌ ತಾಲೂಕಿನ ಬಸವನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡುತ್ತಿದ್ದ ವೇಳೆ ಸ್ಥಳೀಯರು ಕುರಿ ನುಗ್ಗಿಸಿ ಪ್ರತಿಭಟಿಸಿದರು.