ದಾವಣಗೆರೆ: ನಾರಾಯಣ ಗುರುಗಳ (Narayan Guru) 168 ನೇ ಜಯಂತಿ ಆಚರಣೆಯಲ್ಲಿ ರಾಜ್ಯ ಸರ್ಕಾರ (Karnataka Government) ಅಪಮಾನ ಮಡಿದೆ ಎಂದು ಸರ್ಕಾರದ ವಿರುದ್ಧ ನಾರಾಯಣ ಗುರು ಶಕ್ತಿಪೀಠದ ಪ್ರಣಾವಾನಂದ ಸ್ವಾಮೀಜಿ ದಾವಣಗೆರೆಯಲ್ಲಿ (Davangere) ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ (ಸೆ 10) ಬ್ಯಾಂಕೇಟ್ ಹಾಲ್ನಲ್ಲಿ ನಾರಾಯಣ ಗುರುಗಳ 168 ನೇ ಜಯಂತಿ ನಲ್ಲಿ ಜಯಂತಿ ಆಚರಣೆ ಮಾಡಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು ಕೂಡ ಆಚರಣೆ ಮಾಡಿಲ್ಲ.
ವಿಪಕ್ಷನಾಯಕ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಜಯಂತಿ ಘೋಷಣೆ ಮಾಡಿ ಬ್ಯಾಂಕೇಟ್ ಹಾಲ್ನಲ್ಲಿ ಆಚರಣೆ ಮಾಡುತ್ತ ಬಂದಿದ್ದರು. ಆದರೆ ಈಗಿನ ಸರ್ಕಾರ ಆಚರಣೆ ಮಾಡದೆ ಸಾಮಾನ್ಯ ಜನರ ಜೊತೆ ಪೋಟೋ ಇಟ್ಟು ಆಚರಣೆ ಮಾಡಿದೆ.
ಇದರಿಂದ ಈಡಿಗಾ, ಬಿಲ್ಲವ, ನಾಮಧಾರಿ ಸಮಾಜಕ್ಕೆ ಅಪಮಾನವಾಗಿದೆ. ಮಂಗಳೂರಿನ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಿ ನಮ್ಮ ಸಮಾಜದ ಸಚಿವರಿಗೆ ಮಾಹಿತಿ ನೀಡಿಲ್ಲ ಎಂದು ಹೇಳಿದರು. ಜಯಂತಿ ದಿನದಂದೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿ ಸರ್ಕಾರ ಮಾತು ತಪ್ಪಿದೆ. ಸರ್ಕಾರದ ಈ ನಡೆಯನ್ನು ನಮ್ಮ ಸಮಾಜ ಖಂಡನೆ ಮಾಡುತ್ತದೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ
Published On - 4:14 pm, Sun, 11 September 22