ಗರಿ ಗರಿ ಸೀರೆ, ಗರಿ ಗರಿ ನೋಟು ಹಂಚಿದ ಶಾಸಕ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಯುವಕರು ಬಂದು ಹಣ ಪಡೆಯುತ್ತಿದ್ದು, ಗರಿ ಗರಿ ಐದು ನೂರು ರೂಪಾಯಿ ನೋಟುಗಳನ್ನು  ಶಾಸಕ ರೇಣುಕಾಚಾರ್ಯ ನೀಡಿದರು.

ಗರಿ ಗರಿ ಸೀರೆ, ಗರಿ ಗರಿ ನೋಟು ಹಂಚಿದ ಶಾಸಕ ಎಂ.ಪಿ.ರೇಣುಕಾಚಾರ್ಯ
ಗರಿ ಗರಿ ಸೀರೆ, ನೋಟು ಹಂಚಿದ ಶಾಸಕ ರೇಣುಕಾಚಾರ್ಯ
Edited By:

Updated on: Aug 30, 2022 | 4:17 PM

ದಾವಣಗೆರೆ: ಚುನಾವಣೆಗೂ‌ ಮೊದಲೇ ಜಿಲ್ಲೆಯ ಹೊನ್ನಾಳಿ ಪಟ್ಟಣ ಶಾಸಕ ಎಂ.ಪಿ.ರೇಣುಕಾಚಾರ್ಯ ಗೌರಿ ಹಬ್ಬದ ಪ್ರಯುಕ್ತ ಹೊನ್ನಾಳಿಯಲ್ಲಿ ನೂರಾರು ಮಹಿಳೆಯರಿಗೆ ಸೀರೆ ಹಂಚಿದರು. ಜೊತೆಗೆ ಹಳ್ಳಿ ಹಳ್ಳಿ ಗಣೇಶೋತ್ಸವ ಸಮಿತಿಗಳಿಗೆ ಶಾಸಕ ರೇಣುಕಾಚಾರ್ಯ ದುಡ್ಡು ಹಂಚುತ್ತಿದ್ದು, ದುಡ್ಡು ಪಡೆಯಲು ನುಕುನುಗ್ಗಲು ಉಂಟಾಗಿದೆ. ಹೊನ್ನಾಳಿ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಯುವಕರು ಬಂದು ಹಣ ಪಡೆಯುತ್ತಿದ್ದು, ಗರಿ ಗರಿ ಐದು ನೂರು ರೂಪಾಯಿ ನೋಟುಗಳನ್ನು  ಶಾಸಕ ರೇಣುಕಾಚಾರ್ಯ ನೀಡಿದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳಲ್ಲಿ ಗಣೇಶೋತ್ಸವ ಆಚರಿಸಲು ಅರಬಗಟ್ಟೆ, ಬೇಲಿಮಲ್ಲೂರು, ದಾನಿಹಳ್ಳಿ, ಎಚ್.ಕಡದಕಟ್ಟೆ, ಶ್ರೀಸಿದ್ದವಿನಾಯಕ ಟ್ಯಾಕ್ಸಿಸ್ಟ್ಯಾಂಡ್​ನವರು, ಮಾರಿಕೊಪ್ಪ ಎಕೆ ಕಾಲೋನಿಯ ಯುವಮಿತ್ರರುಗಳಿಗೆ ಗರಿ ಗರಿ ನೋಟು ಹಂಚಿದರು.

Published On - 3:56 pm, Tue, 30 August 22