Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ವ್ಯಾಪ್ತಿಯಲ್ಲಿ 17 ವರ್ಷದ ಲೇಖನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ-ತಾಯಿಯ ಪ್ರೀತಿ ಸಿಗದೆ, ಮನೆಯಲ್ಲಿನ ಜಗಳದಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾಳೆ. "ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ, ನಾನು ಒಂಟಿ" ಎಂದು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾಳೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಬೆಂಗಳೂರು, ಜ.1: ತಂದೆ, ತಾಯಿ ಪ್ರೀತಿ ಸಿಗುತ್ತಿಲ್ಲವೆಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ (ಡಿ.31) ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಲೇಖನಾ(17) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೇಖನಾ 10ನೇ ತರಗತಿ ಫೇಲ್ ಆಗಿ ಮನೆಯಲ್ಲಿಯೇ ಇದ್ದಳು, ಪ್ರತಿದಿನ ಮನೆಯಲ್ಲಿ ಜಗಳ, ಇದರಿಂದ ಅಪ್ಪ-ಅಮ್ಮ ಇಬ್ಬರು ದೂರುವಾಗಿದ್ದರು. ತಂದೆ ಬೇರೆ ಕಡೆ ವಾಸಿಸುತ್ತಿದ್ದರು. ಲೇಖನಾ ತಾಯಿ ಜೊತೆಗೆ ವಾಸವಾಗಿದ್ದಾಳು. ಇದರಿಂದ ಮನನೊಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿ ಎಂಬ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಇದು ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
