- Kannada News Photo gallery Rishab Shetty Spend quality Time With Wife Pragathi And Children in Goa A head of New Year
ಕುಟುಂಬದ ಜೊತೆ ಗೋವಾದಲ್ಲಿ ಸಮಯ ಕಳೆದ ರಿಷಬ್; ಖಾಸಗಿ ಯಾಚ್ನಲ್ಲಿ ಸುತ್ತಾಟ
ರಿಷಬ್ ಶೆಟ್ಟಿ ಅವರಿಗೆ ಈ ವರ್ಷ ಸಾಕಷ್ಟು ವಿಶೇಷವಾಗಿತ್ತು. ಸತತ ಮೂರು ವರ್ಷ ಶ್ರಮ ಹಾಕಿ ಮಾಡಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದ ಜೊತೆ ಗೋವಾಗೆ ತೆರಳಿದ್ದಾರೆ.
Updated on: Dec 31, 2025 | 1:15 PM

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಫೇಮಸ್ ಆಗಿದ್ದಾರೆ. ಈ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ಈ ಸಿನಿಮಾಗಾಗಿ ರಿಷಬ್ ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಅವರು ಒಂದು ಬ್ರೇಕ್ನಲ್ಲಿ ಇದ್ದಾರೆ.

ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳ ಜೊತೆ ಖಾಸಗಿ ಯಾಚ್ನಲ್ಲಿ ಗೋವಾ ಸಮುದ್ರ ವಿಹಾರ ಮಾಡಿದ್ದಾರೆ. ಈ ವೇಳೆ ಖುಷಿ ಖುಷಿಯಿಂದ ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಕುಟುಂಬಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಈಗ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಗೋವಾಗೆ ತೆರಳಲು ಇಷ್ಟಪಡುತ್ತಾರೆ. ಅಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸುತ್ತಾರೆ. ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ರಿಷಬ್ ಅವರು ವರ್ಷಾಂತ್ಯದ ಸಂದರ್ಭದಲ್ಲಿ ಗೋವಾದಲ್ಲೇ ಇದ್ದರು.

ಪ್ರಗತಿ ಶೆಟ್ಟಿ ಅವರು ರಿಷಬ್ ಅವರ ಪ್ರತಿ ಹಂತವನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಅವರು ಈಗ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅವರೇ ವಸ್ತ್ರ ವಿನ್ಯಾಸ ಮಾಡಿದ್ದರು. ಇದಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.




