ಸಿಹಿ ಸುದ್ದಿ ಹಂಚಿಕೊಂಡ ‘ಸು ಫ್ರಮ್ ಸೋ’ ಭಾನು
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಭಾನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದವರು ನಟಿ ಸಂಧ್ಯಾ ಅರಕೆರೆ. ಈ ಚಿತ್ರ ಗಮನ ಸೆಳೆಯಿತು. ಅವರ ಪಾತ್ರವೂ ಪ್ರಶಂಸೆ ಪಡೆಯಿತು. ಈಗ ಅವರು ಸಿಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. 2025 ಅವರ ಪಾಲಿಗೆ ವಿಶೇಷವಾಗಿತ್ತು.
Updated on: Jan 01, 2026 | 12:25 PM

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಭಾನು ಪಾತ್ರ ಮಾಡಿದ ಸಂಧ್ಯಾ ಅರಕೆರೆ ಬಾಳಲ್ಲಿ ಈಗ ಖುಷಿಯ ಕ್ಷಣ ಬಂದಿದೆ. ಅವರು ಶೀಘ್ರವೇ ತಾಯಿ ಆಗುತ್ತಿದ್ದಾರೆ. ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಆಗಿ ಎಲ್ಲರನ್ನೂ ಆವರಿಸಿಕೊಂಡಿದ್ದರು ಸಂಧ್ಯಾ. ಅವರ ಬಾಳಲ್ಲಿ 2025 ವಿಶೇಷವಾಗಿತ್ತು. ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದು ಒಂದುಕಡೆಯಾದರೆ, ಅವರು ತಾಯಿ ಆಗುತ್ತಿರುವ ಖುಷಿ ಮತ್ತೊಂದು ಕಡೆ.

ಕಳೆದ ತಿಂಗಳು ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದರು. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಶೀಘ್ರವೇ ಅವರ ಕಡೆಯಿಂದ ಸಿಹಿ ಸುದ್ದಿ ಸಿಗಲಿದೆ.

ಸಂಧ್ಯಾ ಅವರು ರಂಗಭೂಮಿ ಕಲಾವಿದೆ. ಹಲವು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸಂಧ್ಯಾ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ‘ಸು ಫ್ರಮ್ ಸೋ’ ಬಳಿಕ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಎಲ್ಲಾ ಚಿತ್ರಗಳನ್ನು ಅವರು ಒಪ್ಪಿ ನಟಿಸುತ್ತಿಲ್ಲ.

ಸಂಧ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ಅವರ ಊರು. ನೀನಾಸಂ ಅಲ್ಲಿ ವರು ನಟನೆ ಕಲಿತಿದ್ದಾರೆ. ಆ ಬಳಿಕ ಬಣ್ಣದ ಲೋಕ ಅವರನ್ನು ಸೆಳೆಯಿತು.




